Advertisement

Watch; ಕಾಂತಾರ ತುಳು ಭಾಷೆಯ ಟ್ರೈಲರ್ ರಿಲೀಸ್…ಸಿನಿಮಾ ಬಿಡುಗಡೆ ದಿನಾಂಕವೂ ಘೋಷಣೆ

12:40 PM Nov 24, 2022 | Team Udayavani |

ಮಂಗಳೂರು: ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಗೊಂಡಿದ್ದು, ದೇಶ-ವಿದೇಶಗಳಲ್ಲಿ ಭರ್ಜರಿ ಯಶಸ್ಸು ಕಾಣುವ ಮೂಲಕ 400 ಕೋಟಿ ರೂ. ಗಳಿಕೆಯೊಂದಿಗೆ ದಾಖಲೆ ಬರೆದಿದೆ.

Advertisement

ಇದನ್ನೂ ಓದಿ:ಮನಿ ಲಾಂಡರಿಂಗ್ ಪ್ರಕರಣ: ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿಚಾರಣೆ ಡಿ.12ಕ್ಕೆ ಮುಂದೂಡಿಕೆ

ಕಾಂತಾರ ಚಿತ್ರ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಕಂಡಿದ್ದು, ಇದೀಗ ನಿರೀಕ್ಷೆಯಂತೆ ಕಾಂತಾರ ತುಳು ಭಾಷೆಯ ಟ್ರೈಲರ್ ಗುರುವಾರ (ನವೆಂಬರ್ 24) ಬಿಡುಗಡೆಗೊಂಡಿದೆ. ಅಷ್ಟೇ ಅಲ್ಲ ಕಾಂತಾರ ತುಳು ಭಾಷೆಯ ಸಿನಿಮಾ ಡಿಸೆಂಬರ್ 2ರಂದು ರಿಲೀಸ್ ಆಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ.

ಹೊಂಬಾಳೆ ಫಿಲ್ಮ್ಸ್ ಇಂದು ಯೂಟ್ಯೂಬ್ ನಲ್ಲಿ ಅಧಿಕೃತವಾಗಿ ಕಾಂತಾರ ತುಳು ಭಾಷೆಯ ಟ್ರೈಲರ್ ಬಿಡುಗಡೆ ಮಾಡಿದ ಕೆಲವೇ ನಿಮಿಷಗಳಲ್ಲಿ ಹತ್ತು ಸಾವಿರ ವೀಕ್ಷಣೆ ಕಂಡಿದೆ. ಈಗಾಗಲೇ ಕಾಂತಾರ ಸಿನಿಮಾಕ್ಕೆ ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ವಿವೇಕ್ ಅಗ್ನಿಹೋತ್ರಿ ಸೇರಿದಂತೆ ಘಟಾನುಘಟಿ ನಟ, ನಟಿಯರು ಪ್ರಶಂಶಿಸಿದ್ದರು.

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾದಲ್ಲಿ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ವಿನಯ್ ಬಿಡ್ಡಪ್ಪಾ ಮುಖ್ಯಭೂಮಿಕೆಯಲ್ಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾಕ್ಕೆ ವಿಜಯ್ ಕಿರಂಗದೂರ್ ನಿರ್ಮಾಪಕರಾಗಿದ್ದಾರೆ.

Advertisement

ಡಿಸೆಂಬರ್ 2ರಂದು ಕಾಂತಾರ ತುಳು ಭಾಷೆಯ ಸಿನಿಮಾ ಬಿಡುಗಡೆಯಾಗಲಿದ್ದು, ನವೆಂಬರ್ 25ರಂದು ವಿದೇಶಗಳಲ್ಲಿ ಮೊದಲು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next