Advertisement
ಸದ್ಯ ಪ್ರಿಯಾ ಹೆಗ್ಡೆ ಅಭಿನಯದ “ಜಿಲ್ಕಾ’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಕನ್ನಡ, ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಪ್ರಿಯಾ ಮೂರೂ ಭಾಷೆಯಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡುವ ಪ್ರಿಯಾ, “ನನ್ನ ಸಿನಿಮಾ ಕೆರಿಯರ್‌ನಲ್ಲಿ ಇದೊಂದು ಮಹತ್ವದ ಸಿನಿಮಾ. ಇಡೀ ಸಿನಿಮಾದ ಆರಂಭದಿಂದ ಅಂತ್ಯದವರೆಗೆ ಸಂಪೂರ್ಣವಾಗಿ ಇಲ್ಲಿ ತೊಡಗಿಸಿಕೊಂಡಿದ್ದೇನೆ. ಒಂದು ಸಿನಿಮಾಕ್ಕೆ ಏನೆಲ್ಲ ಕೆಲಸಗಳಿರುತ್ತದೆ. ಒಬ್ಬ ನಟಿಯಾಗಿ ಹೇಗಿರಬೇಕು, ಪಾತ್ರಕ್ಕೆ ಏನು ತಯಾರಿ ಮಾಡಿಕೊಳ್ಳಬೇಕು. ಸಿನಿಮಾ ಮೇಕಿಂಗ್ ಹೇಗಾಗುತ್ತದೆ? ಹೀಗೆ ಪ್ರತಿಯೊಂದು ವಿಷಯವನ್ನೂ ಇದರಲ್ಲಿ ಕಲಿತುಕೊಂಡಿದ್ದೇನೆ. ಚಿತ್ರದ ಪಾತ್ರಕ್ಕಾಗಿ ಕೆಲ ತಿಂಗಳು ಮುಂಬೈಗೆ ಹೋಗಿ ಟ್ರೈನಿಂಗ್ ತೆಗೆದುಕೊಂಡು ಬಂದಿದ್ದೆ. ಇದು ನನಗೆ ಮರೆಯಲಾರದ ಅನುಭವ. ಈ ಸಿನಿಮಾದಲ್ಲಿ ನನ್ನ ಪಾತ್ರದ ಹೆಸರು ಸ್ಪೂರ್ತಿ ಅಂಥ. ಪ್ರಿನ್ಸಿಪಾಲ್ ಮಗಳು. ಇನೋಸೆಂಟ್ ಹುಡುಗಿ. ಅದರಿಂದಾಚೆಗೆ ಪಾತ್ರಕ್ಕೆ ಇನ್ನೊಂದು ತಿರುವು ಇದೆ. ಅದರ ಬಗ್ಗೆ ಈಗಲೆ ಗುಟ್ಟು ಬಿಟ್ಟುಕೊಡಲಾರೆ. ಅದನ್ನು ಥಿಯೇಟರ್‌ನಲ್ಲೇ ನೋಡಬೇಕು. ಇದೇ ಫೆಬ್ರವರಿಗೆ ಸಿನಿಮಾ ರಿಲೀಸ್ ಆಗ್ತಿದೆ. ನನ್ನ ಮಟ್ಟಿಗೆ ಇದೊಂದು ಡಿಫರೆಂಟ್ ಸಿನಿಮಾವಾಗಿದ್ದು, ಸಿನಿಮಾ ಮತ್ತು ಅದರಲ್ಲಿ ನನ್ನ ಪಾತ್ರ ಎರಡೂ ಆಡಿಯನ್ಸ್‌ಗೆ ಇಷ್ಟವಾಗಲಿದೆ’ ಎನ್ನುತ್ತಾರೆ.
Advertisement
ಜಿಲ್ಕಾದಲ್ಲಿ ಪ್ರಿಯ ಮಿಂಚು
09:45 AM Feb 01, 2020 | mahesh |