Advertisement
ರೀಲ್ಸ್ ಮಾಡಿಕೊಂಡು, ಸದಾ ಹಸನ್ಮುಖಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದ ಜೋಡಿ ಶುಕ್ರವಾರ(ಜೂ.7 ರಂದು) ಬೆಂಗಳೂರಿನ 2ನೇ ಹೆಚ್ಚುವರಿ ಕೌಟುಂಬಿಕ ಕೋರ್ಟ್ ಗೆ ತೆರಳಿ ವಿಚ್ಚೇದನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.
Related Articles
Advertisement
“ಚಂದನ್ – ನಿವೇದಿತಾ ಇಬ್ಬರ ನಡುವಿನ ಆಲೋಚನೆಗಳು ಬೇರೆ ಬೇರೆ. ಇಬ್ಬರ ಆಸಕ್ತಿ ಕೂಡ ಭಿನ್ನವಾಗಿದೆ. ಮಗು ವಿಚಾರದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು ಎನ್ನುವುದು ಎಲ್ಲ ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಇಬ್ಬರೂ ಮೆಚ್ಯೂರ್ ಆಗಿದ್ದಾರೆ. ಇಬ್ಬರೂ ಬೆಸ್ಟ್ ಹ್ಯೂಮನ್ ಬೀಯಿಂಗ್ಸ್. ಸೆಲೆಬ್ರಿಟಿ ಎಂಬ ಕಾರಣಕ್ಕೆ ಟಾರ್ಗೆಟ್ ಮಾಡೋದು ಸರಿ ಅಲ್ಲ” ಎಂದಿದ್ದಾರೆ.
“ನಿವೇದಿತಾ ಸಿನಿಮಾದಲ್ಲಿ ನಾಯಕಿಯಾಗುವ ವಿಚಾರಕ್ಕೆ ಮನಸ್ತಾಪ ಉಂಟಾಗಿದೆ ಎನ್ನುವುದು ಕೂಡ ಸತ್ಯಕ್ಕೆ ದೂರವಾದ ಮಾತು. ಇಬ್ಬರು ಒಂದು ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಹೀಗಿರುವಾಗ ಈ ವಿಚಾರದಲ್ಲಿ ಮನಸ್ತಾಪ ಆಗಿದೆ ಎನ್ನುವುದು ಸುಳ್ಳು. ಇಬ್ಬರು ಜೊತೆಯಾಗಿದ್ದರೂ ಪರಸ್ಪರ ಸಮಯವನ್ನು ನೀಡಲು ಆಗುತ್ತಿರಲಿಲ್ಲ. ಪತಿ ಪತ್ನಿಯಾಗಿ ಮುಂದುವರೆಯುವ ನಿಟ್ಟಿನಲ್ಲಿ ಹೊಂದಾಣಿಕೆ ಇಲ್ಲದಿರುವುದೇ ಇಬ್ಬರ ವಿಚ್ಚೇದನಕ್ಕೆ ಕಾರಣ” ಎಂದು ಅನಿತಾ ಹೇಳಿದ್ದಾರೆ.
ಅಂದಹಾಗೆ ಕನ್ನಡದ ಬಿಗ್ ಬಾಸ್ ಸೀಸನ್ 5ರಲ್ಲಿ ಮೊದಲ ಬಾರಿಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಭೇಟಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಸ್ನೇಹ, ಪ್ರೀತಿಯಾಗಿ ಬಳಿಕ ಮೈಸೂರು ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್ ಅವರು ನಿವೇದಿತಾಗೆ ಪ್ರಪೋಸ್ ಮಾಡಿದ್ದರು. 2020ರ ಫೆಬ್ರವರಿ 26ರಂದು ಚಂದನ್ ಶೆಟ್ಟಿ – ನಿವೇದಿತಾ ವಿವಾಹವಾಗಿದ್ದರು.