Advertisement
ಧನಂಜಯ್ “ಕೋಟಿ’, ವಸಿಷ್ಠ “ಲವ್ ಲೀ’, ರಿಷಭ್ ನಿರ್ಮಾಣದ “ಶಿವಮ್ಮ’, ಅನಿರುದ್ಧ್ “ಶೆಫ್ ಚಿದಂಬರ’ ಚಿತ್ರಗಳು ಮುಂದಿನ ವಾರ ತೆರೆಕಾಣುತ್ತಿದೆ. ಅಲ್ಲಿಂದ ಸತತವಾಗಿ ಸಿನಿಮಾಗಳ ಬಿಡುಗಡೆ ಜೋರಾಗಿರಲಿದೆ. ಹೊಸಬರ, ಪರಿಚಿತ ಮುಖಗಳ, ಸ್ಟಾರ್‌ಗಳ… ಹೀಗೆ ಅನೇಕ ಸಿನಿಮಾಗಳು ತೆರೆಗೆ ಬರುತ್ತಿವೆ. ಈ ಸಿನಿಮಾಗಳಿಗೆ ಇಡೀ ಚಿತ್ರರಂಗ ಪ್ರೋತ್ಸಾಹಿಸಿದಾಗ ಪ್ರೇಕ್ಷಕರಲ್ಲೂ ಒಂದು ಕುತೂಹಲ ಮೂಡಿ ಸಿನಿಮಾ ಗೆಲ್ಲಲು ಕಾರಣವಾಗುತ್ತದೆ.
Related Articles
Advertisement
“ಸಮಸ್ಯೆ, ಸೋಲು ಎಲ್ಲಾ ಚಿತ್ರರಂಗಗಳಲ್ಲೂ ಇದೆ. ಬಾಲಿವುಡ್ ಕಳೆದ ವರ್ಷದಿಂದ ಹೇಗೆ ಒದ್ದಾಡುತ್ತಿದೆ ಎಂದು ನಿಮಗೇ ಗೊತ್ತಿದೆ. ಏನು ಮಾಡಿದರೆ ಗೆಲುವು ಸಿಗಬಹುದು ಎಂಬ ಗೊಂದಲದಲ್ಲಿದೆ. ಪ್ರತಿ ಚಿತ್ರರಂಗದಲ್ಲೂ ಹಿಟ್ ಆದ ಸಿನಿಮಾಗಳು ಸದ್ದು ಮಾಡುತ್ತವೆ, ಜನ ಮಾತನಾಡುತ್ತಾರೆ. ಆದರೆ ನಮ್ಮಂತೆ ಅಲ್ಲೂ ಅನೇಕ ಸಿನಿಮಾಗಳು ಸೋತಿರುತ್ತವೆ. ಒಂದು ಜಾನರ್ ಹಿಟ್ ಆದರೆ ಅದೇ ಜಾನರ್‌ನ ಬೆನ್ನು ಬಿದ್ದಾಗ ಸೋಲು ಜಾಸ್ತಿ. ಎಲ್ಲರೂ ಅಡಕೆ ಬೆಳೆದರೆಂದು ನಾವೂ ಅದನ್ನೇ ಬೆಳೆಯುತ್ತೇವೆ. ಏಕಾಏಕಿ ಬೆಲೆ ಕುಸಿತವಾದಾಗ ಮತ್ತೆ ಟೆನÒನ್. ಅದರ ಬದಲು ವೆರೈಟಿ ಪ್ರಯತ್ನಿಸಬೇಕು’ ಎಂದಿದ್ದರು.
ಮುಂದಿನ ಆರು ತಿಂಗಳು ಕನ್ನಡ ಚಿತ್ರರಂಗದಲ್ಲಿ ವೆರೈಟಿ ಸಿನಿಮಾಗಳು ಬರಲಿವೆ. ಆ್ಯಕ್ಷನ್, ಲವ್‌ಸ್ಟೋರಿ, ಹಾರರ್, ಥ್ರಿಲ್ಲರ್, ಕಾಮಿಡಿ, ಸೆಂಟಿಮೆಂಟ್, ಫ್ಯಾಮಿಲಿ ಡ್ರಾಮಾ.. ಹಲವು ಬಗೆಯ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲು ತುದಿಗಾಲಿನಲ್ಲಿ ನಿಂತಿವೆ. ಅವೆಲ್ಲವನ್ನು ಪ್ರೇಕ್ಷಕರ ಜೊತೆ ಚಿತ್ರರಂಗದ ಮಂದಿ ಕೈ ಹಿಡಿದಿದರೆ ಗೆಲುವು ಸುಲಭವಾಗಬಹುದು
ರವಿಪ್ರಕಾಶ್ ರೈ