Advertisement

Ranav Kshirsagr: ಪಾಸಿಟಿವ್‌ ಹುಡುಗನ ನೆಗೆಟಿವ್‌ ಕನಸು

04:15 PM Oct 01, 2024 | Team Udayavani |

ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತೋ, ಬಿಡುತ್ತೋ, ಆದರೆ ಆ ಚಿತ್ರದ ಯಾವುದಾದರೊಂದು ಪಾತ್ರದಲ್ಲಿ ಮಿಂಚಿದರೆ ಆ ನಟನಿಗೆ ಒಂದಷ್ಟು ಅವಕಾಶಗಳು ಬರುವುದಂತೂ ಪಕ್ಕಾ. ಈ ಸಾಲಿನಲ್ಲಿ ಸಿಗುವ ನಟ ರಣವ್‌ ಕ್ಷೀರಸಾಗರ. ಯಾರು ಈ ರಣವ್‌ ಎಂದರೆ “ಯುವ’ ಚಿತ್ರದ ಬಗ್ಗೆ ಹೇಳಬೇಕು. ಕೆಲವು ತಿಂಗಳ ಹಿಂದೆ ತೆರೆಕಂಡಿರುವ “ಯುವ’ ಚಿತ್ರದಲ್ಲಿ ರಣವ್‌ ನೆಗೆಟಿವ್‌ ಶೇಡ್‌ನ‌ಲ್ಲಿ ಕಾಣಿಸಿಕೊಂಡಿದ್ದರು. ಈಗ ರಣವ್‌ಗೆ ಕೈ ತುಂಬಾ ಸಿನಿಮಾಗಳು ಸಿಗುತ್ತಿದ್ದು, ಬಿಝಿಯಾಗುತ್ತಿದ್ದಾರೆ.

Advertisement

ಶ್ರೀಮುರಳಿ ನಟನೆಯ “ಬಘೀರ’, ವಿರಾಟ್‌ ನಟನೆಯ “ರಾಯಲ್‌’ ಜೊತೆಗೆ ಇನ್ನೊಂದಿರಡು ಸ್ಟಾರ್‌ ಸಿನಿಮಾಗಳಲ್ಲೂ ರಣವ್‌ ನಟಿಸಿದ್ದಾರೆ. ವಿಶೇಷವೆಂದರೆ ಈ ಎಲ್ಲಾ ಸಿನಿಮಾಗಳಲ್ಲೂ ರಣವ್‌ ನೆಗೆಟಿವ್‌ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದಾರೆ.

ಯುವರತ್ನ ಸಿನಿಮಾ ಮೂಲಕ ಸಿನಿಪಯಣ ಆರಂಭಿಸಿದ ರಣವ್‌, ನಂತರ ಅವತಾರ ಪುರುಷ, ರಾಣಾ, ಯುವ ಸೇರಿದಂತೆ ಇನ್ನೂ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಣವ್‌ ಸದ್ಯ ತಮ್ಮದೇ ತಂಡದೊಂದಿಗೆ ಕಥೆ ಬರೆಸುತ್ತಿದ್ದಾರೆ. ಈ ಮೂಲಕ ಹೊಸ ಬಗೆಯ ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ.

“ನಾನು ಇಂಜಿನಿಯರಿಂಗ್‌ ಮುಗಿಸಿ ಸಿನಿಮಾಕ್ಕೆ ಬಂದವ. ಸದ್ಯ ಒಂದಷ್ಟು ಅವಕಾಶಗಳು ಬರುತ್ತಿವೆ’ ಎನ್ನುವುದು ರಣವ್‌ ಮಾತು.

Advertisement

Udayavani is now on Telegram. Click here to join our channel and stay updated with the latest news.

Next