ಬೆಂಗಳೂರು: ಸ್ಯಾಂಡಲ್ ವುಡ್ ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (46) ಇಂದು ನಿಧನರಾಗಿದ್ದಾರೆ. ಜಿಮ್ ಮಾಡುವ ವೇಳೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ವರನಟ ಡಾ| ರಾಜ್ ಕುಮಾರ್ ಅವರ ಐದನೇ ಪುತ್ರನಾದ ಪುನೀತ್ ಅವರು 1975ರ ಮಾರ್ಚ್ 17ರಂದು ಜನಿಸಿದರು.
ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪುನೀತ್ ರಾಜ್ ಕುಮಾರ್ ಅವರು ಅಪ್ಪು ಚಿತ್ರದ ಮೂಲಕ ನಾಯಕನಟನಾಗಿದ್ದರು. ನಂತರ ಅಭಿ, ಆಕಾಶ್, ನಮ್ಮ ಬಸವ, ಜಾಕಿ, ಹುಡುಗರು, ರಾಜಕುಮಾರ ಮುಂತಾದ ಚಿತ್ರಗಳಲ್ಲಿ ಮಿಂಚಿದ್ದರು.
ಇದನ್ನೂ ಓದಿ:ನಟ ಪುನೀತ್ ರಾಜ್ ಕುಮಾರ್ ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು
Related Articles
‘ಯುವರತ್ನ’ ಪುನೀತ್ ಅವರ ಬಿಡುಗಡೆಯಾದ ಕೊನೆಯ ಚಿತ್ರ, ಜೇಮ್ಸ್ ಚಿತ್ರದ ಶೂಟಿಂಗ್ ಮುಗಿದಿದ್ದು, ಬಿಡುಗಡೆಯ ಸನಿಹದಲ್ಲಿದೆ.
1999 ಡಿಸೆಂಬರ್ 1ರಂದು ಚಿಕ್ಕಮಗಳೂರಿನ ಅಶ್ವಿನಿ ರೇವಂತ್ ಅವರನ್ನು ಪುನೀತ್ ವಿವಾಹವಾಗಿದ್ದರು. ದಂಪತಿಗೆ ದೃತಿ ಮತ್ತು ವಂದಿತಾ ಎಂಬ ಹೆಣ್ಣು ಮಕ್ಕಳಿದ್ದಾರೆ.
ವಿಕ್ರಮ್ ಆಸ್ಪತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಹೋದರ ಶಿವರಾಜ್ ಕುಮಾರ್, ನಟ ರವಿಚಂದ್ರನ್, ನಟಿ ಶ್ರುತಿ ಸೇರಿದಂತೆ ಹಲವರು ಆಗಮಿಸಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಥಳಕ್ಕಾಗಮಿಸಿದ್ದು, ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.