ಗಂಗಾವತಿ: ದೇಶದ ಸರಕಾರಗಳು ಶ್ರೀಮಂತರು, ಕಾರ್ಪೋರೇಟ್, ಇಂಗ್ಲೀಷ್ ಮಾತನಾಡುವರ ಪರವಾಗಿದ್ದು ಬಡ, ಅಲೆಮಾರಿ ಮತ್ತು ತಳ ಸಮುದಾಯಗಳ ವಿರೋಧಿಯಾಗಿವೆ ಎಂದು ನಟ ಚೇತನ್ ಹೇಳಿದರು.
ಅವರು ಹಿರೇಜಂತಗಲ್‌ನಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ದೇಶದ ಸಮಸ್ಯೆಗಳಿಗೆ ಬುದ್ಧ, ಬಸವ, ಅಂಬೇಡ್ಕರ್ ಮತ್ತು ಪೆರಿಯಾರ್ ಅವರ ಸಿದ್ದಾಂತದಲ್ಲಿ ಪರಿಹಾರವಿದೆ. ಕೆಲ ಮೇಲ್ವರ್ಗದವರು ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳಿಗೆ ತಿಲಾಂಜಲಿ ಇಟ್ಟು ದೇಶದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಜನರಲ್ಲಿದ್ದ ಭಾವೈಕ್ಯತೆ ಕೆಡಿಸುವ ಕಾರ್ಯ ಮಾಡುತ್ತಿದ್ದಾರೆ. ಶೋಷಿತರು ದಲಿತರ ಪರವಾಗಿ ಸಂವಿಧಾನದ ಆಶಯದಂತೆ ಸರಕಾರ ನಡೆಸುವಂತೆ ಪ್ರತಿಭಟನೆ ನಡೆಸಿದರೆ ದೇಶ ದ್ರೋಹದ ಪಟ್ಟ ಕಟ್ಟಲಾಗುತ್ತಿದೆ. ಸಂವಿಧಾನದ ಪೀಠಿಕೆಯಲ್ಲಿರುವ ಸದಾಶುಗಳನ್ನು ಗಾಳಿಗೆ ತೂರಿ ಕೆಲವರು ಜಾತಿ ವೈಷಮ್ಯ ಮೆರೆಯುತ್ತಿದ್ದರೂ ಆಡಳಿತ ನಡೆಸುವವರು ಮೌನ ವಹಿಸಿ ಪಟ್ಟಭದ್ರರಿಗೆ ಬೆಂಬಲಿಸುತ್ತಿರುವುದು ನಾಚಿಗೇಡು.
ಸಮಾನ ಮನಸ್ಕರೆಲ್ಲ ಸೇರಿ ಪ್ರತಿಯೊಂದು ಜಿಲ್ಲೆಗೂ ತೆರಳಿ ಕಾರ್ಮಿಕರು, ಕೃಷಿಕೂಲಿಕಾರರು, ರೈತರು ಅಸಂಘಟಿತ, ಶೋಷಿತರು. ದಲಿತ ದಮನಿತರ ಒಬಿಸಿಗಳು, ಅಲೆಮಾರಿಗಳು ಮತ್ತು ದೇವದಾಸಿ ಮಹಿಳೆಯರಿಗೆ ಅವರ ಕುಟುಂಬಗಳು ಪ್ರಗತಿಯಾದಾಗ ಮಾತ್ರ ದೇಶ ಸಮಗ್ರವಾಗಿ ಪ್ರಗತಿ ಹೊಂದಲು ಸಾಧ್ಯ ಆದ್ದರಿಂದ ಅವರಿಗೆ ನೆರವಾಗಲು ನಿರ್ಧರಿಸಿದ್ದು ಬುದ್ಧ, ಬಸವ, ಅಂಬೇಡ್ಕರ್ ಮತ್ತು ಪೆರಿಯಾರ್ ಅವರ ಸಿದ್ದಾಂತದಲ್ಲಿ ನಂಬಿಕೆ ಇಟ್ಟವರು ಬೆಂಬಲಿಸಬೇಕಿದೆ. ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಶೋಷಿತರು ಅಲೆಮಾರಿಗಳು, ದೇವದಾಸಿ ಮಹಿಳೆಯರಿಗೆ ಗುಡಿಸಲು ರಹಿತ ಮನೆ ನಿರ್ಮಿಸುವ ಯೋಜನೆ ರೂಪಿಸಿ ಅನುಷ್ಠಾನ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ : ಚಿಕ್ಕಮಗಳೂರಿನಲ್ಲಿ ಕಾಡಾನೆ ಓಡಿಸುವ ವೇಳೆ ಮಿಸ್ ಫೈರ್ : ಅರಣ್ಯ ಸಿಬ್ಬಂದಿ ಕಾಲಿಗೆ ಗುಂಡೇಟು
ಈ ಸಂದರ್ಭದಲ್ಲಿ ರಮೇಶ, ಹ.ರ.ಮಹೇಶ, ಜೆ.ಭಾರದ್ವಾಜ್, ನ್ಯಾಯವಾದಿ ಹುಸೇನಪ್ಪ ಹಂಚಿನಾಳ, ರಮೇಶ ಕಿರಿಕಿರಿ, ಹುಲಿಗೆಮ್ಮ ಕಿರಿಕಿರಿ, ತಿಮ್ಮಣ್ಣ ಮುಂಡಾಸ್, ಜಗದೀಶ, ರಮೇಶ ಗಬ್ಬೂರ್, ಜಡಿಯಪ್ಪ, ಅಂಜನೇಯ, ಪತ್ರಕರ್ತರಾದ ಹಂಚಿನಾಳ ಹುಸೇನಪ್ಪ ಮಾಸ್ತರ್, ರಗಡಪ್ಪ ಹೊಸಳ್ಳಿ, ಸೇರಿ ಹಿರೇಜಂತಗಲ್ ಚಲುವಾದಿ ಓಣಿಯ ಜನರಿದ್ದರು.