Advertisement

ಬಾ ಗುರು ಸಿನಿಮಾ ನೋಡೋಣ… : ಬೇವು ತಿಂದಾಯ್ತು ಬೆಲ್ಲ ಸವಿಯುವ ಸಮಯ

02:35 PM Jan 01, 2021 | Team Udayavani |

ಹೊಸ ವರ್ಷ, ಹೊಸ ಕನಸು…   :

Advertisement

-ಚಿತ್ರರಂಗದ ಪಾಲಿಗಂತೂ 2021 ಪೂರ್ತಿ ಹಬ್ಬದಂತಿರಲಿದೆ. 2020ರಲ್ಲಿ ಪಟ್ಟ ಕಷ್ಟ-ನಷ್ಟ ನೋವುಗಳನ್ನು ಗಂಟುಮೂಟೆ ಕಟ್ಟಿ ಪಕ್ಕಕ್ಕಿಟ್ಟು, ಮೈಕೊಡವಿಕೊಂಡು ಎದ್ದೇಳುವ ಸಮಯ ಬಂದಿದೆ. 2020ರಲ್ಲಿ ಕಂಡ ಕನಸುಗಳನ್ನು  “ನವೀಕರಣ’ ಮಾಡಿಕೊಂಡು ಮತ್ತೆ ಹೊಸ ಸಾಹಸಕ್ಕೆ ಕೈ ಹಾಕಲು ಸಿನಿಮಾ ಮಂದಿ ಸಿದ್ಧರಾಗಿದ್ದಾರೆ. 2020 ಇಡೀ ವರ್ಷ ಬೇವು ತಿಂದಿದ್ದಾಯ್ತು, ಈ ವರ್ಷ ಬೆಲ್ಲ ಸವಿಯುವ ಸಮಯ ಬಂದಿದೆ. ಈ ಸಂದರ್ಭವನ್ನು ಮಿಸ್‌ ಮಾಡಿಕೊಳ್ಳಲು ಸಿನಿಮಾ ಮಂದಿ ಕೂಡಾ ತಯಾರಿಲ್ಲ. ಅದೇ ಕಾರಣದಿಂದ 2021 ಪೂರ್ತಿ ಹಬ್ಬದಂತಿರಲಿದೆ. ಅದಕ್ಕೆ ಕಾರಣ ಬಿಡುಗಡೆಗೆ ಸಿದ್ಧವಾಗಿ ಕುಳಿತಿರುವ ಸಿನಿಮಾಗಳು. 2020ಕ್ಕೆ ಬಿಡುಗಡೆಯಾಗಬೇಕೆಂದು ಪ್ಲ್ರಾನ್‌ ಮಾಡಿಕೊಂಡಿದ್ದ ಚಿತ್ರಗಳು ಈ ವರ್ಷ ಬಿಡುಗೆಯಾಗಲಿವೆ.

ಈ ಮೂಲಕ ಚಿತ್ರರಂಗ ಮತ್ತಷ್ಟು ಸಮೃದ್ಧಿಯಾಗಿ ಬೆಳೆಯಲಿದೆ. ಕೊರೊನಾದ ಕುರುಹು ಕೂಡಾ ಉಳಿಯದಂತೆ ಜನ ಸಿನಿಮಾ ನೋಡಿ, ಚಿತ್ರರಂಗಕ್ಕೆ ಜೈಕಾರ ಹಾಕುವ ನಿರೀಕ್ಷೆ ಕನ್ನಡ ಚಿತ್ರರಂಗದ್ದು. ಹಾಗಾಗಿ, 2021ರ ವ್ಯಾಪಾರ-ವಹಿವಾಟು ಕೂಡಾಜೋರಾಗಿರಲಿದೆ. ಹಾಗಾಗಿ, ಈ ವರ್ಷ ಸಿನಿಮಾ ಬಿಡುಗಡೆಯ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಅಭಿಮಾನಿಗಳಿಗೆ ತೆರೆಮೇಲೆ ದರ್ಶನ ಕೊಟ್ಟ ಏಕೈಕ ನಟ ಎಂದರೆ ಶಿವರಾಜ್‌ಕುಮಾರ್‌. ಅವರ “ದ್ರೋಣ’ ಚಿತ್ರ ಈ ವರ್ಷವೇ ತೆರೆಕಂಡಿತ್ತು. ಉಳಿದಂತೆ ಯಾವ ಸ್ಟಾರ್‌ ನಟರ ಚಿತ್ರಗಳು ಕೂಡಾ 2020ರಲ್ಲಿ ತೆರೆಕಂಡಿಲ್ಲ. ಆದರೆ, ಈ ವರ್ಷ ಶಿವರಾಜ್‌ಕುಮಾರ್‌, ದರ್ಶನ್‌, ಸುದೀಪ್‌, ಪುನೀತ್‌, ಉಪೇಂದ್ರ, ಧ್ರುವ ಸರ್ಜಾ, ಯಶ್‌, ಗಣೇಶ್‌, ಪ್ರೇಮ್‌, ರಕ್ಷಿತ್‌, ಶ್ರೀಮುರಳಿ, ವಿಜಯ್‌, ಧನಂಜಯ್‌ …ಹೀಗೆ ಅನೇಕ ನಟರ ಚಿತ್ರಗಳು 2021ಕ್ಕೆ ತೆರೆಕಾಣಲಿವೆ. ಇತ್ತೀಚಿನ ವರ್ಷಗಳಲ್ಲಿ ಹೊಸಬರ ಗೆಲುವಿನ ಪ್ರಮಾಣ ಗಣನೀಯವಾಗಿ ಕುಸಿಯುತ್ತಿದೆ. ಸ್ಟಾರ್‌ಗಳ ಸಿನಿಮಾಗಳಿಂದ ಚಿತ್ರರಂದ ವಹಿವಾಟು ಹೆಚ್ಚಿದರೆ, ಹೊಸಬರ ಗೆಲುವಿನಿಂದ ಚಿತ್ರರಂಗದ ವಾರ್ಷಿಕ ಗೆಲುವಿನ ಪ್ರಮಾಣ ಹೆಚ್ಚುತ್ತದೆ. ಈ ವರ್ಷ ಸ್ಟಾರ್‌ ಗಳು ಹಾಗೂ ಹೊಸಬರು ಒಳ್ಳೆಯ ಸ್ಕೋರ್‌ ಮಾಡುವ ನಿರೀಕ್ಷೆ ಇದೆ.

ಎಚ್ಚರದ ಹೆಜ್ಜೆ ಹಾಗೂನಿ ರ್ಮಾಪಕನ ಸ್ನೇಹಿಯಾಗಬೇಕಿದೆ :  ಮೊದಲೇ ಹೇಳಿದಂತೆ ಈ ವರ್ಷವಿಡೀ ಸ್ಟಾರ್‌ಗಳ ಹಾಗೂ ಹೊಸಬರ ಸಿನಿಮಾಗಳು ಬಿಡುಗಡೆಯಾಗುತ್ತಿರುವುದರಿಂದ ಸಹಜವಾಗಿಯೇ ಚಿತ್ರಮಂದಿರಗಳ ಸಮಸ್ಯೆ ಉಂಟಾಗುತ್ತದೆ. ಒಂದರ್ಥದಲ್ಲಿ ಸಿನಿ ಟ್ರಾಫಿಕ್‌ ಜೋರಾಗಿ ಸಿನಿಮಾ ಮಂದಿಯಲ್ಲೇ

ಮನಸ್ತಾಪಕ್ಕೆ ಕಾರಣವಾಗುತ್ತದೆ. ಹಾಗಾಗಿ, ನಿರ್ಮಾಪಕರು, ವಿತರಕರು ಎಚ್ಚರದ ಹೆಜ್ಜೆ ಇಡುವ ಅಗತ್ಯವಿದೆ. ಜಿದ್ದಿಗೆ ಬಿದ್ದು ಸಿನಿಮಾ ಬಿಡುಗಡೆ ಮಾಡಿದರೆ ಅದರಿಂದ ನಷ್ಟ ಉಂಟಾಗುವುದು ನಿರ್ಮಾಪಕನಿಗೆ. ಚಿತ್ರರಂಗದಲ್ಲಿ ನಿರ್ಮಾಪಕ ಉಳಿದರೆ ಎಲ್ಲಾ ವರ್ಗವೂ ಚೆನ್ನಾಗಿರುತ್ತದೆ. ಅದರಲ್ಲೂ ಚಿತ್ರರಂಗಕ್ಕೆ ಹೊಸದಾಗಿ ಬರುವ ನಿರ್ಮಾಪಕರನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಕಲಾವಿದರು ಕೂಡಾ ಸಿನಿಮಾ ಪ್ರಚಾರದಿಂದ ಹಿಡಿದು ಪ್ರತಿಯೊಂದು ವಿಷಯದಲ್ಲೂ ನಿರ್ಮಾಪಕರಿಗೆ ಸಾಥ್‌ ನೀಡಬೇಕಿದೆ.

Advertisement

ಸ್ಟಾರ್‌ಗಳಿಂದ ಎರಡ್ಮೂರು ಸಿನ್ಮಾ :

ಪ್ರತಿ ವರ್ಷ ಸ್ಟಾರ್‌ ನಟರ ಒಂದೇ ಒಂದು ಚಿತ್ರಗಳು ತೆರೆಕಾಣುತ್ತಿದ್ದವು. ಇದು ನಿರ್ಮಾಪಕರ ಅಸಮಾಧಾನಕ್ಕೂ ಕಾರಣವಾಗಿತ್ತು. ಆದರೆ, ಈ ವರ್ಷ ಒಬ್ಬೊಬ್ಬ ಸ್ಟಾರ್‌ ನಟನ ಎರಡಕ್ಕೂ ಹೆಚ್ಚು ಚಿತ್ರಗಳು ತೆರೆಕಾಣಲಿವೆ. ದರ್ಶನ್‌, ಸುದೀಪ್‌, ಪುನೀತ್‌, ಶಿವಣ್ಣ, ಧ್ರುವ ರಕ್ಷಿತ್‌… ಹೀಗೆ ಬಹುತೇಕ ಎಲ್ಲಾ ನಟರ ಎರಡಕ್ಕೂ ಹೆಚ್ಚು ಚಿತ್ರಗಳು ತೆರೆಗೆ ಬರಲಿವೆ.

ಪ್ಯಾನ್‌ ಇಂಡಿಯಾಗೆ ಪ್ಲ್ರಾನ್‌ ಇರಲಿ : ಸ‌ದ್ಯಕನ್ನಡ ಚಿತ್ರರಂಗದಲ್ಲಿ ಪ್ಯಾನ್‌ಇಂಡಿಯಾ ಕ್ರೇಜ್‌ ಹೆಚ್ಚಿದೆ. ಕನ್ನಡದ ಜೊತೆಗೆ ಇತರ ಮೂರ್‍ನಾಲ್ಕು ಭಾಷೆಗಳಲ್ಲೂ ಸಿನಿಮಾ ಬಿಡುಗಡೆ ಮಾಡಲುನಿರ್ಮಾಪಕರು ಮುಂದೆ ಬರುತ್ತಿದ್ದಾರೆ. ಇದು ಒಳ್ಳೆಯದೇ. ಆದರೆ, ಇದಕ್ಕೊಂದು ಸೂಕ್ತವಾದ ಪ್ಲ್ರಾನ್‌ ಮಾಡಿಕೊಳ್ಳುವಅನಿವಾರ್ಯತೆ ಇದೆ. ಅದು ಸಿನಿಮಾ ಡಬ್ಬಿಂಗ್‌ನಿಂದವಿತರಣೆವರೆಗೂ. ಇಲ್ಲವಾದಲ್ಲಿ ಪ್ಯಾನ್‌ ಇಂಡಿಯಾ ಕ್ರೇಜ್‌ಗೆ ಬಿದ್ದು, ಕೈ ಸುಟ್ಟುಕೊಳ್ಳುವ ಜೊತೆಗೆ ನಗೆಪಾಟಲಿಗೆ ಗುರಿಯಾಗಬೇಕಾದಿತು

 

ವರ್ಷಪೂರ್ತಿ ರಂಜಿಸಲಿರುವ ಸ್ಟಾರ್‌ ಸಿನ್ಮಾಗಳು :

  • ರಾಬರ್ಟ್‌ (ದರ್ಶನ್‌)
  • ಯುವರತ್ನ (ಪುನೀತ್‌)
  • ಜೇಮ್ಸ್‌ (ಪುನೀತ್‌)
  • ಭಜರಂಗಿ 2 (ಶಿವರಾಜ್‌ ಕುಮಾರ್‌)
  • ಶಿವಪ್ಪ (ಶಿವರಾಜ್‌ಕುಮಾರ್‌)
  • ಕೆಜಿಎಫ್ 2 (ಯಶ್‌)
  • ಕಬ್ಜ (ಉಪೇಂದ್ರ)
  • ತ್ರಿಶೂಲಂ (ಉಪೇಂದ್ರ)
  • ಬುದ್ಧಿವಂತ 2 (ಉಪೇಂದ್ರ)
  • ಕೋಟಿಗೊಬ್ಬ 3 ( ಸುದೀಪ್‌)
  • ಫ್ಯಾಂಟಮ್‌ (ಸುದೀಪ್‌)
  • ಪೊಗರು (ಧ್ರುವ ಸರ್ಜಾ)
  • ದುಬಾರಿ (ಧ್ರುವ ಸರ್ಜಾ)
  • ಸಲಗ (ವಿಜಯ್‌)
  • ಮದಗಜ (ಶ್ರೀಮುರಳಿ)
  • ಗಾಳಿಪಟ 2 (ಗಣೇಶ್‌)
  • ತ್ರಿಬಲ್‌ ರೈಡಿಂಗ್‌ (ಗಣೇಶ್‌)
  • 777 ಚಾರ್ಲಿ (ರಕ್ಷಿತ್‌ ಶೆಟ್ಟಿ)
  • ತೋತಾಪುರಿ (ಜಗ್ಗೇಶ್‌)
  • 100 (ರಮೇಶ್‌ ಅರವಿಂದ್‌)
  • ರವಿ ಬೋಪಣ್ಣ (ರವಿಚಂದ್ರನ್‌)
  • ಕನ್ನಡಿಗ (ರವಿಚಂದ್ರನ್‌)

ನಾಯಕಿ ಪ್ರಧಾನ ಚಿತ್ರಗಳು :

  • ಉಗ್ರಾವತಾರ (ಪ್ರಿಯಾಂಕಾ ಉಪೇಂದ್ರ)
  • 1980 (ಪ್ರಿಯಾಂಕಾ ಉಪೇಂದ್ರ)
  • ಸೈಂಟ್‌ಮಾರ್ಕ್ಸ್ ರೋಡ್‌ (ಪ್ರಿಯಾಂಕಾ ಉಪೇಂದ್ರ)
  • ಆನ (ಅದಿತಿ)  ಕೈಮರ (ಪ್ರಿಯಾಂಕಾ, ಪ್ರಿಯಾಮಣಿ)
  • ಸಾವಿತ್ರಿ (ತಾರಾ)
  • ಅಂಬುಜಾ (ಶುಭಾ ಪೂಂಜಾ)
  • ಪಂಕಜಾ ಕಸ್ತೂರಿ (ರಚಿತಾ ರಾಮ್‌)
  • ಅಮೃತಮತಿ (ಹರಿಪ್ರಿಯಾ)
  • ರುದ್ರಿ (ಪಾವನಾ)
  • ಹಾರರ್‌ ಸಿನಿಮಾ (ನಿಧಿ ಸುಬ್ಬಯ್ಯ)
  • ಹೋಪ್‌ (ಶ್ವೇತಾ ಶ್ರೀವಾತ್ಸವ್‌)

ವರ್ಷ ಪೂರ್ತಿ ಸಿನಿಹಬ್ಬ :  ಚಿತ್ರಗಳ ಮೇಲೂ ಕಣ್ಣಿಟ್ಟಿರಿ..  :

  • ರತ್ನನ್‌ ಪ್ರಪಂಚ
  • ಬಡವ ರಾಸ್ಕಲ್‌
  • ಹೀರೋ
  • ಹರಿಕಥೆ ಅಲ್ಲ, ಗಿರಿಕಥೆ
  • ಇನ್ಸ್‌ಪೆಕ್ಟರ್‌ ವಿಕ್ರಂ
  • ಅವತಾರ್‌ ಪುರುಷ
  • ಕಸ್ತೂರಿ ಮಹಲ್‌  ಮುಂದುವರೆದ ಅಧ್ಯಾಯ
  • ಪ್ರೇಮಂ ಪೂಜ್ಯಂ
  • ಸೀತಾಯಣ
  • ಗೋಧ್ರಾ
  • ಒಂಭತ್ತನೇ ದಿಕ್ಕು
  • ಲೈಫ್ ಇಸ್‌ ಬ್ಯೂಟಿಫ‌ುಲ್‌
  • ಪ್ರಾರಂಭ
  • ತ್ರಿವಿಕ್ರಮ
  • ಲವ್‌ ಮಾಕ್ಟೇಲ್‌ 2
  • ಮೈಸೂರ್‌ ಡೈರೀಸ್‌
  • ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ
  • ಫ್ಯಾಂಟಸಿ
  • ಪದವಿ ಪೂರ್ವ
  • ಅರ್ಜುನ್‌ ಗೌಡ
  • ರೆಮೋ
  • ಡೊಳ್ಳು
  • ಬನಾರಸ್‌
  • ಏಕ್‌ಲವ್‌ ಯಾ
  • ವಿಷ್ಣುಪ್ರಿಯಾ
  • ಕೃಷ್ಣ ಟಾಕೀಸ್‌
  • ಓಲ್ಡ್‌ ಮಾಂಕ್‌
  • ಗುರು ಶಿಷ್ಯರು
  • ಶುಗರ್‌ ಫ್ಯಾಕ್ಟರಿ
  • ಡಿಯರ್‌ ಸತ್ಯ
  • 2020
  • ಪೆಟ್ರೋಮ್ಯಾಕ್ಸ್‌
  • ಓ ಮೈ ಲವ್‌
  • ಬೈ ಟು ಲವ್‌
  • ಸ್ಫೂಕಿ ಕಾಲೇಜ್‌
  • ಲಂಕಾಸುರ
  • ರಿಪ್ಪರ್‌
  • ಮಹಿಷಾಸುರ
  • ಎವಿಡೆನ್ಸ್‌
  • ಅಮೃತಾ ಅಪಾರ್ಟ್‌ಮೆಂಟ್‌

 

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next