Advertisement

ಇಂದಿನಿಂದ ಕುಂದಾಪುರ, ಬೈಂದೂರಿಗೆ ಮರಳು : ಇ ಸ್ಯಾಂಡ್‌ ಆ್ಯಪ್‌ ಮೂಲಕ ವಿತರಣೆಗೆ ನಿರ್ಧಾರ

10:47 PM Mar 16, 2021 | Team Udayavani |

ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಜನತೆಗೆ ಮಾ. 17ರಿಂದ ಮರಳು ದೊರೆಯಲಿದೆ. ಈ ಕುರಿತು ಗಣಿ ಇಲಾಖೆ ಅಧಿಕೃತ ಪ್ರಕಟನೆ ಹೊರಡಿಸಿದೆ. ಇದರ ಬೆನ್ನಿಗೇ ಮಂಗಳವಾರ ಅಪರಾಹ್ನದಿಂದಲೇ ಮರಳು ಬುಕ್ಕಿಂಗ್‌ ಆರಂಭವಾಗಿದೆ.

Advertisement

ವಿತರಣೆಗೆ ಅನುಮತಿ
ಒಂದೆಡೆ ಆಕ್ರಮ ಮರಳು ಸಾಗಾಟ ನಡೆದು ನದಿಗಳೆಲ್ಲ ಖಾಲಿಯಾಗುತ್ತಿದ್ದರೆ ಇನ್ನೊಂದೆಡೆ ಗಣಿಗಾರಿಕೆಗೆ ಅನುಮತಿ ಪಡೆದವರು ವಿತರಣೆಗೆ ಅನುಮತಿಯಿಲ್ಲದೇ ಸಾವಿರಗಟ್ಟಲೆ ಲೋಡು ಮರಳು ಸಂಗ್ರಹ ಮಾಡಿಟ್ಟಿದ್ದು ಬಾಕಿ ಯಾಗಿತ್ತು. ಇದೀಗ ಅನುಮತಿ ದೊರೆತ ಕಾರಣ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಕುಂದಾಪುರ ತಾ|ನ ಗುಲ್ವಾಡಿ, ಕಾವ್ರಾಡಿ, ಬಳ್ಕೂರು ಗ್ರಾಮದ ಸರ್ವೇ ನಂ 180, 157, 189ರಲ್ಲಿನ 11.90 ಎಕರೆ ವಿಸ್ತೀರ್ಣ ಪ್ರದೇಶದ ಮರಳು ಬ್ಲಾಕ್‌ ಸಂಖ್ಯೆ 4 ರಲ್ಲಿ ಹಾಗೂ ಜಪ್ತಿ, ಹಳ್ನಾಡು ಗ್ರಾಮದ ಸರ್ವೆ ನಂ. 174, 56 ರಲ್ಲಿನ 5.70 ಎಕರೆ ವಿಸ್ತೀರ್ಣ ಪ್ರದೇಶದ ಮರಳು ಬ್ಲಾಕ್‌ ಸಂಖ್ಯೆ 6ರಲ್ಲಿ ಸಾರ್ವಜನಿಕರಿಗೆ, ಅಭಿವೃದ್ಧಿ ಕಾಮಗಾರಿಗಳಿಗೆ ಆ್ಯಪ್‌ ಮೂಲಕ ಪೂರೈಸಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಈ ಮೊದಲು ನೇರ ಖರೀದಿ ಇತ್ತು. ದೂರುಗಳು ಬಂದ ಹಿನ್ನೆಲೆಯಲ್ಲಿ ಈ ವರ್ಷದಿಂದ ಆ್ಯಪ್‌ ಮೂಲಕ ನೀಡಲು ಈ ಮೂಲಕ ಪಾರದರ್ಶಕತೆ ಕಾಪಾಡಿಕೊಳ್ಳಲು ತೀರ್ಮಾನಿಸಲಾಗಿದೆ.

ಸಂಪರ್ಕ
ಮರಳನ್ನು ಉಡುಪಿ ಇ ಸ್ಯಾಂಡ್‌ ಆ್ಯಪ್‌ ಮುಖಾಂತರ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ, ಹಿರಿಯ ಭೂವಿಜ್ಞಾನಿಯವರ ಕಚೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ರಜತಾದ್ರಿ, ಎ ಬ್ಲಾಕ್‌, ಮೊದಲನೇ ಮಹಡಿ, ಮಣಿಪಾಲ, ಉಡುಪಿ ಜಿಲ್ಲೆ, ಉಡುಪಿ, ದೂರವಾಣಿ ಸಂಖ್ಯೆ: 0820-2572333, ಉಡುಪಿ ಇ ಸ್ಯಾಂಡ್‌ ಆ್ಯಪ್‌ ದೂರವಾಣಿ ಸಂಖ್ಯೆ 6366248666, 6366743888, 6366871888 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಭೂ ವಿಜ್ಞಾನಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸದಸ್ಯ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.

ಸುದಿನ ವರದಿ
ಮರಳು ಕೊರತೆ, ಸಂಗ್ರಹ ಇದ್ದರೂ ಮರಳು ನೀಡಲಾಗದ ಅಸಹಾಯಕತೆ, ಉಡುಪಿ ಬ್ರಹ್ಮಾವರ ದಿಂದ ಮರಳು ತರಿಸುವಾಗ ಆಗುವ ದುಬಾರಿ ದರ, ಬೈಂದೂರು ಹಾಗೂ ಕುಂದಾಪುರ ಜನ ಮರಳಿಗಾಗಿ ಪಡುತ್ತಿರುವ ಸಂಕಷ್ಟದ ಕುರಿತು “ಉದಯವಾಣಿ’ “ಸುದಿನ’ ವರದಿ ಮಾಡಿತ್ತು. ಶೀಘ್ರದಲ್ಲಿಯೇ ಮರಳು ದೊರೆಯಲಿದೆ ಎಂದು ಗಣಿ ಇಲಾಖೆ ಹೇಳಿಕೆ ಆಧರಿಸಿ ಪ್ರಕಟಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next