Advertisement

ಮರಳು ನೀತಿ ಸರಳೀಕರಣಕ್ಕೆ ಅಸ್ತು

06:00 AM Nov 10, 2017 | |

ಬೆಂಗಳೂರು: ರಾಜ್ಯದಲ್ಲಿನ ಮರಳು ಕೊರತೆ ಸರಿದೂಗಿಸಲು ಎಂ. ಸ್ಯಾಂಡ್‌ ನೀತಿ ಸರಳೀಕರಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಕಾರ್ಯಪಡೆಯ ಬದಲಾಗಿ  ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಕಾರ್ಯಪಡೆ ರಚಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.

Advertisement

ಸಂಪುಟ ಸಭೆಯ ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಜಿಲ್ಲಾಧಿಕಾರಿಗಳ ನೇತೃತ್ವದ ಕಾರ್ಯಪಡೆಯ ಮುಂದೆ ಬಾಕಿ ಇರುವ ಸಾವಿರಾರು ಅರ್ಜಿಗಳ ವಿಲೇವಾರಿ ರಾಜ್ಯ ಮಟ್ಟದ ಕಾರ್ಯ ಪಡೆ ಮಾಡಲಿದೆ ಎಂದರು.

ಕರಾವಳಿಯ 3 ಜಿಲ್ಲೆಗಳ ಮರಳು ನೀತಿ ಸಹಿತ ಎಲ್ಲ ಜಿಲ್ಲಾ ಮರಳು ವಹಿವಾಟು ಹಾಗೂ ವಿದೇಶದಿಂದ ಆಮದು ಮಾಡಿ ಕೊಳ್ಳುವ ಮರಳು ವ್ಯಾಪಾರಕ್ಕೂ ನೂತನ ನಿಯಮದಲ್ಲಿ ಮಾರ್ಪಾಡು ಮಾಡಲು ಸಂಪುಟ ಅನುಮೋದನೆ ನೀಡಿದೆ ಎಂದರು.

ಸಾಂಪ್ರದಾಯಿಕವಾಗಿ ಮರಳುಗಾರಿಕೆ ಮಾಡುವವರ ಗುತ್ತಿಗೆ ಅವಧಿಯನ್ನು ನವೀಕರಣ ಮಾಡಿಕೊಳ್ಳಲು 3 ತಿಂಗಳ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ವಿದೇಶಗಳಿಂದ ಮರಳು ಆಮದಿಗೆ ಕಾನೂನಿನಲ್ಲಿ ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next