Advertisement
ಮರಳಿನ ಸಮಸ್ಯೆ ಬಗ್ಗೆ ತಿಳಿದು ಕೊಳ್ಳುತ್ತಿದ್ದೇನೆ. ಈ ಬಗ್ಗೆ ಒಂದು ಹಂತ ದಲ್ಲಿ ಬೆಂಗಳೂರಿನಲ್ಲಿ ಸದನ ಸಮಿತಿ ಮಟ್ಟದಲ್ಲಿ ಸಭೆ ಕೂಡ ನಡೆಸಲಾಗಿದ್ದು ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ. ಇಲ್ಲಿ ನಡೆ ಯುವ ಕಾನೂನು ಸಮ್ಮತವಾದ ಹಾಗೂ ಕಾನೂನುಬಾಹಿರ ಎರಡೂ ಮರಳುಗಾರಿಕೆ ಪ್ರಸ್ತಾಪ ಆಗಿದೆ. ಕಾನೂನು ಸಮ್ಮತವಾದ ಮರಳುಗಾರಿಕೆ ಸರಿಯಾಗಿ ಆದರೆ ಕಾನೂನು ಬಾಹಿರ ಮರಳುಗಾರಿಕೆ ಕಡಿಮೆ ಯಾಗಬಹುದು. ಈ ನಿಟ್ಟಿ ನಲ್ಲಿ ನ. 14ರಂದು ಸಭೆ ನಡೆಸಲಾಗುತ್ತಿದೆ ಎಂದರು.
ಅಲ್ಲಿ ಜಿಲ್ಲಾಡಳಿತದ ನಿರ್ಣಯ ವನ್ನು ತಿರಸ್ಕರಿಸಲಾಗಿದೆ. ಇದಕ್ಕೆ ಮೇಲ್ಮನವಿ ಸಲ್ಲಿಸುವ ಇರಾದೆ ಇಲ್ಲ. ಜಿಲ್ಲೆಯಲ್ಲಿ ನ್ಯಾಯಯುತವಾಗಿ ಪಾರಂಪರಿಕವಾಗಿ ಮರಳು ತೆಗೆಯುವವರಿಗೆ ಅವಕಾಶ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ತಿಳಿಸಿದರು. ಎನ್‌ಐಟಿಕೆ ಟೋಲ್‌ಗೇಟ್ ರದ್ದು ಮಾಡುವ ಕುರಿತು ಈಗಾಗಲೇ ಸಂಸದರು ಕೇಂದ್ರ ಭೂಸಾರಿಗೆ ಸಚಿವರಿಗೆ ಒತ್ತಾಯ ಮಾಡಿದ್ದಾರೆ. ಶೀಘ್ರ ಈ ಕುರಿತು ಅಂತಿಮ ಅಧಿಸೂಚನೆ ಬರುವ ನಿರೀಕ್ಷೆ ಇದೆ ಎಂದೂ ಡಿಸಿ ಹೇಳಿದರು.