Advertisement
ಮರಳಿನ ಮೇಲೆ ವಾಹನಗಳು ಚಲಿಸುವಾಗ ನಿಯಂತ್ರಣ ತಪ್ಪಿ ಅನಾಹುತಗಳ ಅಪಾಯ ಉಂಟಾಗಿದೆ. ತುಂಬೆ ರಾಮಲ್‌ಕಟ್ಟೆಯಿಂದ ಅಲ್ಲಲ್ಲಿ ಮರಳು ರಸ್ತೆಯ ಮೇಲೆ ಚೆಲ್ಲಿಕೊಂಡಿದ್ದು ಸಂಚಾರಕ್ಕೆ ಅಡಚಣೆ ಆಗಿದೆ. ಮರಳು ಸಾಗಾಟ ಮಾಡುವವರ ನಿರ್ಲಕ್ಷ್ಯದಿಂದಾಗಿ ಮರಳು ಸೋರಿಕೆಯಾಗಿದೆ. ಮರಳು ತುಂಬಿಸುವಲ್ಲಿ ಸೂಕ್ತ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಇಂತಹ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂದು ವಾಹನ ಸವಾರರು, ಸಾರ್ವಜನಿಕರು ದೂರಿದ್ದಾರೆ.
ಮರಳು ಸಾಗಾಟ ಮಾಡುವವರಿಗೆ ಕಾನೂನು ಬಾಹಿರವಾಗಿ ಪರವಾನಿಗೆ ನೀಡುತ್ತಿರುವುದು, ಒಂದು ವೇಳೆ ಸಮರ್ಪಕವಾಗಿ ಪರವಾನಿಗೆ ನೀಡಿದ್ದರೂ ಅನಂತರ ಅದರ ಬಗ್ಗೆ ಪರಿಶೀಲನೆ ಮಾಡದಿರುವುದು, ಸಾಗಾಟದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆಯೇ ಎಂದು ತಪಾಸಣೆ ನಡೆಸದಿರುವುದು ಮೊದಲಾದ ಕಾರಣಗಳಿಂದಾಗಿ ಹಲವಾರು ಮರಳು ಸಾಗಾಟ ಲಾರಿಗಳು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿವೆ. ಇದಕ್ಕೆ ಇಲಾಖೆಯ ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಲಿ
ಮರಳು ಸೋರಿಕೆಯಿಂದ ಆಗುವ ಅನಾಹುತದ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೆ ಅನೇಕ ಅನಾಹುತಕ್ಕೆ ಕಾರಣವಾಗಿದೆ.
Related Articles
Advertisement