Advertisement

ಚಿಂತಾಮಣಿಯಲ್ಲಿ ಮತ್ತೆ ಜೋರಾಯ್ತು ಮರಳು ದಂಧೆ

03:32 PM Apr 05, 2018 | Team Udayavani |

ಚಿಂತಾಮಣಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಶುರುವಾಗುತ್ತಿದ್ದಂತೆ ತಾಲೂಕು ಮಟ್ಟದ ಕಂದಾಯ ಅಧಿಕಾರಿಗಳು ಪೊಲೀಸ್‌ ಇಲಾಖೆ ಚುನಾವಣಾ ಕಾರ್ಯದಲ್ಲಿ ತಲ್ಲಿನರಾಗಿ ನೀತಿ ಸಂಹಿತೆ ಕಾಪಾಡುವಲ್ಲಿ ನಿರತರಾಗಿದ್ದಾರೆ. ಇತ್ತ ಕಡೆ ಮರಳು ದಂಧೆ ಜೋರಾಗಿದೆ.

Advertisement

ತಾಲೂಕಿನಲ್ಲಿ ಅಕ್ರಮ ಮರಳು ದಂಧೆಯು ಯಾವುದೇ ಅಡೆ ತಡೆಗಳಿಲ್ಲದೆ ಹಾಡು ಹಗಲೇ ರಾಜಾರೋಷವಾಗಿ ನಡೆಯುತ್ತಿದೆ. ಅಷ್ಟೇ ಅಲ್ಲ, ತಾಲೂಕಿನ ಪ್ರಮುಖ ನದಿಯಾದ ಏನಿಗದಲೆ ಗ್ರಾಪಂ ವ್ಯಾಪ್ತಿಯ ಪಾಪಾಗ್ನಿ ನದಿಯಲ್ಲಿ ಸಾವಿರಾರು ಲೋಡ್‌ ಮರಳನ್ನು ಅಕ್ರಮವಾಗಿ ಸಾಗಿ‌ಲಾಗುತ್ತಿದೆ. ಇದರಿಂದ ಬರಪೀಡಿತ ಬಯಲು ಸೀಮೆಯ ಬರಡು ಭೂಮಿಯಾಗಿ ಪರಿವರ್ತನೆ ಗೊಂಡು ನೀರಿಲ್ಲದೆ ರೈತ ಪರಿತಪ್ಪಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಅಂತರ್ಜಲಕ್ಕೆ ಭಾರೀ ಪೆಟ್ಟು: ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಆಕ್ರಮ ಮರಳು ದಂಧೆಯಿಂದಾಗಿ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಸಾವಿರರು ಅಡಿ ಆಳದಿಂದ ತೆಗೆದ ಪ್ಲೊರೈಡ್‌ ಯುಕ್ತ ನೀರನ್ನು ಕುಡಿದು ಜನ ಜನವಾರುಗಳು ಆನೇಕ ರೋಗಗಳಿಗೆ ಸಾವನ್ನಪ್ಪುವಂತಾಗಿದೆ. ಅಷ್ಟೇ ಅಲ್ಲದೆ ಕೆರೆ ಕುಂಟೆಗಳಲ್ಲಿ ನೀರು ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಸರ್ಕಾರದ ಆದೇಶ ನಿರ್ಲಕ್ಷ್ಯ: ಸರ್ಕಾರ ಅಕ್ರಮ ಮರಳು ಸಾಗಾಣಿಕೆಯನ್ನು ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ನಿಷೇಧಿಸುವಂತೆ ಆದೇಶ ನೀಡಿದೆ. ಆದರೂ ಸ್ಥಳೀಯ ಕಾಂದಾಯ ಮತ್ತು ಭೂಗಣಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದ ಮರಳು ದಂಧೆ ಹೆಚ್ಚುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಎಲ್ಲೆಲ್ಲಿ ಮರಳು ದಂಧೆ: ತಾಲೂಕಿನ ಮಾದಮಂಗಲ, ಬಿಲ್ಲಾಂಡಲಹಳ್ಳಿ, ದಿನ್ನಮಿಂದಪಲ್ಲಿ, ಎಂ ಗೊಲ್ಲಪಲ್ಲಿ, ಎನಿಗಿದಲೇ, ಉಲಿಬೆಲೆ, ಸಿದ್ದೇಪಲ್ಲಿ, ಕೊರ್ಲಪರ್ತಿ, ಪಾಪತಿಮ್ಮನಹಳ್ಳಿ, ನಂದನಹೊಸಹಳ್ಳಿ, ರಂಗೇನಹಳ್ಳಿ ಸೇರಿದಂತೆ ತಾಲೂಕಿನ ಕೆರೆ ಕಾಲುವೆಗಳಲ್ಲಿ ಆಕ್ರಮ ಮರಳು ದಂಧೆ ನಡೆಯುತ್ತಿದೆ.

Advertisement

ಗುಡ್ಡೆ ಹಾಕಿ ರಾತ್ರಿ ಸಾಗಾಟ: ಹಗಲ್ಲೆಲ್ಲ ಮರಳು ಮಾಪಿಯಗಳು ಜೆಸಿಬಿ ಯಂತ್ರಗಳನ್ನು ಬಳಕೆ ಮಾಡಿಕೊಂಡು ಟ್ರ್ಯಾಕ್ಟ್ರಗಳ ಮೂಲಕ ನದಿಯ ದಡದಿಂದ ಸ್ವಲ್ಪ ದೂರಕ್ಕೆ ಸಾಗಿಸಿಕೊಂಡು ಹೋಗಿ ಮರಳನ್ನು ಒಂದು ಕಡೆ ಗುಡ್ಡೆಹಾಕುತ್ತಾರೆ. ನಂತರ ರಾತ್ರಿ 10 ಗಂಟೆಯ ನಂತರ ಲಾರಿಗಳಿಗೆ ತುಂಬಿಸಿಕೊಂಡು ಬೆಂಗಳೂರು, ಹೋಸಕೋಟೆ ಕಡೆಗೆ ಸಾಗಿಸುತ್ತಾರೆಂದು ತಿಳಿದು ಬಂದಿದೆ.

ಕೆ.ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next