Advertisement
ಇದೊಂದು ಕಳೆದ ಶತಮಾನದ ಸ್ವಾರಸ್ಯಕರ ಇತಿಹಾಸದ ತುಣುಕು. ಈ ಮನೆಯನ್ನು ಬಾದಾಮಿಯ ಗವಿಗಳನ್ನು ಹೋಲುವ ಶೆರ್ವುಡ್ ಸ್ಯಾಂಡ್ ರಾಕ್ ಎನ್ನುವ ಮರಳು ಶಿಲೆಯಲ್ಲಿ ಕೊರೆದಂತೆ ಕೊರೆದು ತೆಗೆದಿದ್ದಾರೆ.
Related Articles
Advertisement
ಸ್ಯಾಂಡ್ ಹೌಸ್‌ನ ಉಚ್ಛ್ರಾಯ ಸ್ಥಿತಿ, ಅವನತಿ
1870- 80ರ ಸುಮಾರಿಗೆ ಮರಳಿನ ಉದ್ಯಮದಲ್ಲಷ್ಟೇ ಅಲ್ಲ, ಭೂಮಿ, ಮನೆಗಳನ್ನು ಕೊಳ್ಳುವ ಮಾರುವ ಎಸ್ಟೇಟ್ ಬಿಸ್‌ನೆಸ್‌ನಲ್ಲೂ ಆತ ಕೈಹಾಕಿದ್ದ. ತಾನು ಕೊಂಡ ಒಂದು ಬ್ರೂವರಿಯಲ್ಲದೆ ಒಂದೆರಡು ಪಬ್ ಗಳನ್ನೂ ನಡೆಸುತ್ತಿದ್ದ. ತನ್ನ ಸಿರಿವಂತ ಅಂತಸ್ತಿಗೆ ತಕ್ಕ ಜೀವನ ಶೈಲಿಯಿಂದ ತನ್ನ ದೊಡ್ಡ ಕುಟುಂಬದೊಂದಿಗೆ ವಾಸಿಸುತ್ತಿದ್ದ. ಶಿಲೆಯಲ್ಲೇ ಕೊರೆದಿದ್ದರಿಂದ ಗೋಡೆಗಳ ಗಾತ್ರ ಒಂದು ಕಡೆ ಮೂರರಿಂದ ಇನ್ನೊಂದೆಡೆ ಒಂಬತ್ತು ಫೀಟ್‌ನವರೆಗೆ ಇತ್ತು! ಇಡೀ ಮನೆಯ ಉದ್ದಗಲ 120×42 ಫೀಟ್ ಇದ್ದರೂ, ಒಂದು ಉದ್ದನೆಯ ಕೋಣೆಯೇ 30 ಫೀಟ್ ಇತ್ತು (ಲಾಂಗ್ ರೂಮ್).
ಬಾಲ್ ರೂಮು ಏಕಕಾಲಕ್ಕೆ 300 ಜನರು ಕೂಡಿ ನರ್ತಿಸುವಷ್ಟು ಭವ್ಯವಾಗಿತ್ತು. ಪ್ರೇಕ್ಷಣೀಯ ದೃಶ್ಯಗಳಲ್ಲಿ ಉಲ್ಲೇಖೀಸಬಹುದಾದ ಇನ್ನೊಂದು ವಿಷಯ ಅಂದರೆ ಸುರಂಗದ ಮೇಲ್ಛಾವಣಿಯಲ್ಲಿ ಆಕಸ್ಮಿಕವಾಗಿ ಹುಟ್ಟಿ ದೈತ್ಯಾಕಾರವಾಗಿ ಬೆಳೆದ ಶಿಲೀಂದ್ರ (Fungus) ಸಹ. ಇವೆಲ್ಲಕ್ಕೂ ಪ್ರವೇಶ ಶುಲ್ಕ ಇಡುವ ಜಾಣ್ಮೆ ಆತನಲ್ಲಿತ್ತು. ಆ ಮನೆಯಲ್ಲಿ ನಲವತ್ತು ವರ್ಷಗಳ ವಾಸದ ಅನಂತರ ಆತನ ತುಂಬು ಜೀವನದ 74ನೇ ವಯಸ್ಸಿನಲ್ಲಿ ಅಂದರೆ 1900ನೇ ಇಸವಿಯಲ್ಲಿ ಆತನನ್ನು ಮಣ್ಣು ಮಾಡಲಾಯಿತು.
ಇವೆಲ್ಲ ಐತಿಹಾಸಿಕ ವಿಷಯಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ನಮಗೆ ಕೊಟ್ಟವರು ಹೆನ್ರಿ ಸೀನಿಯರ್ ಮಹಾಶಯನ ಐದು ತಲೆಮಾರು ಕೆಳಗಿನ ಮೊಮ್ಮಗ ರಿಚರ್ಡ್ ಬೆಲ್. ಅವರು ಈ “ವಿಕ್ಟೋರಿಯನ್ ಮಾರ್ವೆಲ್’ ಬಗ್ಗೆ ತಾವು ಬರೆದ ಪುಸ್ತಕದಲ್ಲಿನ ಕೆಲವು ಚಿತ್ರಗಳನ್ನು ಈ ಲೇಖನದೊಂದಿಗೆ ಪ್ರಕಟಿಸಲು ಅನುಮತಿಯನ್ನೂ ಕೊಟ್ಟಿದ್ದಾರೆ.
ತನ್ನ ಪೂರ್ವಜರ ಆ ಮನೆಯನ್ನು ಸುರಂಗದಲ್ಲಿಳಿದು ಇನ್ನುಳಿದ ವಂಶಜರೊಂದಿಗೆ ಕೊನೆಯ ಸಲ ಕಂಡವರೂ ಅವರೇ. ಹೆನ್ರಿಯ ಮರಣಾನಂತರ ಆತನ ಮನೆಯನ್ನು ಮುನ್ಸಿಪಾಲಿಟಿಗೇ ಮಾರಲಾಯಿತು. ಅದನ್ನು ಅವರು ಸ್ಯಾನಿಟರಿ ಡಿಪಾರ್ಟ್ಮೆಂಟ್ ಗೆ ಕೊಟ್ಟರೂ 1940ರ ಹೊತ್ತಿಗೆ ಅದು ದುಃಸ್ಥಿತಿಯನ್ನು ಕಂಡಿತು. ಈ ಊರಿನ ಹೆಮ್ಮೆಯ ಅಪರೂಪದ ಐತಿಹಾಸಿಕ ಮನೆಯನ್ನು ಉಳಿಸಿಕೊಳ್ಳುವ ದೂರದೃಷ್ಟಿ ನಗರದ ಆಡಳಿತ ಮಂಡಳಿ ಹೊಂದಿರಲಿಲ್ಲ. ಒಂದು ತರದ ಅಂಧಗಜ ನ್ಯಾಯವೇ ಸೈ! ಅಲ್ಲಲ್ಲಿ ಬಿರುಕು ಬಿಟ್ಟು ಭೂ ಕುಸಿತವಾಗದಿರಲೆಂದು ಅದರ ಸುರಂಗಗಳಲ್ಲಿ ಕಾಂಕ್ರೀಟ್ ಪಂಪು ಮಾಡಿ, ಒಂದು ಕಾಲದಲ್ಲಿ ಡೌಲಾಗಿದ್ದ ಮನೆ ಮತ್ತು ಕುದುರೆ ಲಾಯಗಳನ್ನು ಭೂಗತ ಮಾಡಿ ಅದರ ಮೇಲೆ ಕಣ್ಣಿಗೆ ಕೀಸರವಾಗುವಂಥ ಮಲ್ಟಿ ಸ್ಟೋರಿ ಫ್ಲ್ಯಾಟುಗಳನ್ನು ಕಟ್ಟಿದ್ದಾರೆ.
ಈಗ ಆ ಮರಳಿನ ಮನೆ, ಅದರಲ್ಲಿಯ ಆನೆ ಮರಳಿ ಕಾಣುವಂತಿಲ್ಲ. ರಿಚರ್ಡ್ ಬೆಲ್ ಅವರಿಂದ ಸ್ಯಾಂಡ್ ಹೌಸ್‌ನ ವರ್ಣನೆ ಕೇಳುವಾಗ ನನಗೆ ಇದೇ ತರದ ಮರಳು ಶಿಲೆಯಲ್ಲಿ ಶತಮಾನಗಳ ಪೂರ್ವದಲ್ಲಿ ಕೊರೆದ ಬಾದಾಮಿಯ ಗವಿಗಳು ಮತ್ತು ಜೋರ್ಡನ್‌ನ ಪೆಟ್ರಾ ನೆನಪಾಗುತ್ತವೆ. ರಿಚರ್ಡ್ ಮಾತ್ರ ಈ ಮನೆಯ ಇತಿಹಾಸವನ್ನು ಸಚಿತ್ರ ವಿಡಿಯೋ ಉಪನ್ಯಾಸಗಳಲ್ಲಿ ವರ್ಣಿಸುತ್ತ ಜನಮಾನಸದಲ್ಲಿ ಅದರ ನೆನಪು ಉಳಿಯುವಂತೆ ಪ್ರಯತ್ನಿಸುತ್ತಿದ್ದಾರೆ. ಕಳೆದ ವಾರ ನಾನು ಎರಡನೇ ಬಾರಿ ಅವರ ಬಾಯಿಂದಲೇ ಕೇಳಿದ್ದು ಉಪನ್ಯಾಸ ನಂಬರ್ 198!
ಶ್ರೀವತ್ಸ ದೇಸಾಯಿ