ಹಾಸನ: ರಾಷ್ಟ್ರೀಯ ಹೆದ್ದಾರಿ – 373 ಘೋಷಣೆಯಾಗಿರುವ ಬಿಳಿಕೆರೆ (ಮೈಸೂರು) – ಬೇಲೂರು ರಸ್ತೆಯ ಮೊದಲ ಹಂತದ ಹಾಸನ – ಹೊಳೆನರಸೀಪುರ ನಡುವೆ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು, ಈಗ 2ನೇ ಹಂತದಲ್ಲಿ ಬೇಲೂರು – ಹಾಸನ ನಡುವಿನ 33.50 ಕಿ.ಮೀ. ರಸ್ತೆ ಅಭಿವೃದ್ಧಿಗೆ ಕೇಂದ್ರ ಭೂ ಸಾರಿಗೆ ಇಲಾಖೆ 216 ಕೋಟಿ ರೂ. ಮಂಜೂರು ಮಾಡಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಜೂ.9 ರಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ಹಾಸನ-ಬೇಲೂರು ಮತ್ತು ಹೊಳೆ ನರಸೀಪುರ-ಬಿಳಿಕೆರೆ ನಡುವಿನ ರಸ್ತೆ ಅಭಿ ವೃದ್ಧಿಯ ಎರಡು ಪ್ಯಾಕೇಜ್‌ಗಳಿಗೆ ಮಂಜೂ ರಾತಿ ನೀಡಬೇಕೆಂದು ಒತ್ತಾಯಿಸಿದ್ದರು. ಕೇಂದ್ರ ಭೂ ಸಾರಿಗೆ ಸಚಿವಾಲಯವು ಈಗ ಬೇಲೂರು-ಹಾಸನ ನಡುವಿನ 33.50 ಕಿ.ಮೀ. ರಸ್ತೆ ಅಭಿವೃದ್ಧಿಗೆ ಮಂಜೂರಾತಿ ಸಿಕ್ಕಿದೆ.
ಇನ್ನು ಕೆಲವೇ ದಿನಗಳಲ್ಲಿ ಹೊಳೆ ನರಸೀಪುರ – ಬಿಳಿಕೆರೆ ನಡುವಿನ ರಸ್ತೆ ಅಭಿವೃದ್ಧಿಗೂ ಹಣ ಮಂಜೂರಾಗುವ ನಿರೀಕ್ಷೆಯಿದೆ ಎಂದರು. ಚನ್ನರಾಯಪಟ್ಟಣ – ಹೊಳೆನರಸೀಪುರ – ಕೊಡ್ಲಿ ಪೇಟೆ – ಸೋಮವಾರಪೇಟೆ – ಮಡಿಕೇರಿ – ವಿರಾಜಪೇಟೆ ಮಾರ್ಗವಾಗಿ ಕೇರಳದ ಗಡಿಭಾಗದ ಮಾಕುಟ್ಟ ನಡುವಿನ ರಾಜ್ಯ ಹೆದ್ದಾರಿಯ 193.3 ಕಿ.ಮೀ.ನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ 1,500 ಕೋಟಿ ರೂ. ವೆಚ್ಚದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದಟಛಿವಾಗಿದ್ದು ಸದಸ್ಯದಲ್ಲೇ ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆಯಾಗಲಿದೆ.
ಈ ಸಂಬಂಧ ಮಾಜಿ ಪ್ರಧಾನಿ ದೇವೇಗೌಡರು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೆ ಪತ್ರ ಬರೆದು ಒತ್ತಾಯಿ ಸಿದ್ದಾರೆ ಎಂದು ರೇವಣ್ಣ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ -75 ರ ಹಾಸನ – ಬೆಂಗಳೂರು ನಡುವೆ ಚನ್ನರಾಯಪಟ್ಟಣ ಮತ್ತು ಹಾಸನ ಬೈಪಾಸ್ ರಸ್ತೆಗಳನ್ನು ಚತುಷ್ಪಥರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ 800 ಕೋಟಿ ರೂ. ಟೆಂಡರ್ ಪ್ರಕ್ರಿಯೆ ನಡೆದಿದ್ದು, ಮೊದಲ ಬಾರಿಯ ಟೆಂಡರ್‌ನಲ್ಲಿ ಸೂಕ್ತ ಗುತ್ತಿಗೆದಾರರು ಟೆಂಡರ್ ಸಲ್ಲಿಸಿಲ್ಲ ವೆಂದು ಮರು ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು.