Advertisement

Clean Drinking Water ಪೂರೈಕೆಗಾಗಿ ಅಮೃತ 2.0 ಯೋಜನೆಯಡಿ ಮಂಜೂರಾತಿ: ದೇಶಪಾಂಡೆ

06:59 PM Dec 24, 2023 | Team Udayavani |

ದಾಂಡೇಲಿ : ಹಳಿಯಾಳ ಪಟ್ಟಣದ ಜನಸಂಖ್ಯೆಯ ಬೆಳವಣಿಗೆಯಿಂದ ಕುಡಿಯುವ ನೀರಿನ ತೊಂದರೆಯಾಗುತ್ತಿದ್ದು, ಅದನ್ನು ಬಗೆಹರಿಸಲು ನೀರು ಸರಬರಾಜು ಯೋಜನೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ಆಶಯದೊಂದಿಗೆ ಅಮೃತ 2.0 ಯೋಜನೆಯಡಿ ಮಂಜೂರಾತಿ ದೊರೆಕಿದೆ ಎಂದು ಶಾಸಕರಾದ ಆರ್.ವಿ.ದೇಶಪಾಂಡೆಯವರು ಮಾಧ್ಯಮಕ್ಕೆ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Advertisement

ದಾಂಡೇಲಿಯ ಜಾಕ್ವೆಲ್ ನಿಂದ ಪ್ರಾರಂಭಗೊಂಡು ಕರ್ಕಾದ ಕುಡಿಯುವ ನೀರು ಶುದ್ಧಿಕರಣ ಘಟಕದಿಂದ ಹಳಿಯಾಳ ಪಟ್ಟಣದ ಮರಡಿಗುಡ್ಡದ ನೀರು ಶೇಖರಣಾ ಟ್ಯಾಂಕ್ ವರೆಗೆ ಹೊಸ ಪೈಪ್ ಲೈನ್ ಅಳವಡಿಕೆಯ 59.31 ಕೋಟಿ ರೂ ವೆಚ್ಚದ ಕಾಮಗಾರಿಯನ್ನು ಕೈಗೊಳ್ಳುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next