Advertisement
ತಾಲೂಕಿನ ಆವನಿಕ್ಷೇತ್ರದ ಶೃಂಗೇರಿ ಮಠದ ನೂತನ ಪೀಠಾಧಿಪತಿ ಶ್ರೀ ಶಾಂತಾನಂದ ಭಾರತೀ ಸ್ವಾಮೀಜಿಗಳ ಪೀಠಾರೋಹಣ ಸಮಾರಂಭದಲ್ಲಿ ಮಾತನಾಡಿದರು, ಸನಾತನ ಹಿಂದೂ ಧರ್ಮದ ಪುನರುತ್ಥಾನ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಂಕರಾಚಾರ್ಯರು ತನ್ನ 32 ವರ್ಷಗಳ ಜೀವಿತಾವದಿಯಲ್ಲಿಯೇ ವೇದ, ಉಪನಿಷತ್, ಭಗವದ್ಗೀತೆ ಮುಂತಾದ ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಬರೆದ ಮೊದಲಿಗರಾಗಿದ್ದು, ವೈದಿಕ ದರ್ಮದ ಪ್ರಚಾರಕ್ಕಾಗಿ ಭಾರತದ ನಾಲ್ಕು ದಿಕ್ಕುಗಳಲ್ಲಿ 4 ಮಠಗಳನ್ನು ನಿರ್ಮಿಸಿದ್ದರು.
Related Articles
Advertisement
ಗುರುಗಳ ಮಾರ್ಗದಲ್ಲಿ ಪಯಣ: ನೂತನವಾಗಿ ಪಟಾuಭಿಷಿಕ್ತರಾದ ಶ್ರೀ ಶಾಂತಾನಂದ ಭಾರತೀ ಸ್ವಾಮೀಜಿಗಳು ಮಾತನಾಡಿ, ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳ ಪರಮಾನು ಗ್ರಹದಿಂದ ತಮ್ಮ ಪಟ್ಟಾಭಿಷೇಕ ನಡೆದಿದ್ದು, ಇದಕ್ಕೆ ತಾವು ಎಷ್ಟೇ ಕೃತಜ್ಞತೆ ತೋರಿಸಿದರೂ ಸಾಲದು, ತಾವು ಈಗಾಗಲೇ 2018ರಲ್ಲಿ ಶೃಂಗೇರಿ ಮಠದಲ್ಲಿ ಮಹಾ ಸ್ವಾಮೀಜಿಗಳಿಂದ ಸನ್ಯಾಸ ದೀಕ್ಷೆ ಪಡೆದಿದ್ದು, ಶೃಂಗೇರಿ ಮಠದ ಜಗದ್ಗುರು ಭಾರತಿ ತೀರ್ಥ ಮಹಾಸ್ವಾಮಿ ಹಾಗೂ ಜಗದ್ಗುರು ವಿಧುಶೇಖರ ಭಾರತಿ ಮಹಾಸ್ವಾಮಿಗಳ ಆಶೀರ್ವಾದಗಳೊಂದಿಗೆ ಹಾಗೂ ಮಾರ್ಗದರ್ಶನದೊಂದಿಗೆ ಆವನಿಮಠದ ಪೀಠಾಧಿಪತಿಗಳಾಗಿ ಜವಾಬ್ದಾರಿಯನ್ನು ಪಡೆದು ಕೊಂಡಿದ್ದು ಉಭಯ ಗುರುಗಳ ನಿರ್ದೇಶನದಂತೆ ಸೇವೆ ಮಾಡುತ್ತೇನೆ ಎಂದು ಹೇಳಿದರು.
ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಗೌರಿಶಂಕರ್, ನಿವೃತ್ತ ನ್ಯಾಯಾಧೀಶ ಎನ್. ಕುಮಾರ್, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಸಚ್ಚಿದಾನಂದಮೂರ್ತಿ, ಜಿಲ್ಲಾ ರಕ್ಷಣಾಧಿಕಾರಿ ದೇವರಾಜ್, ಡಿ.ವೈ.ಎಸ್.ಪಿ ಟಿ.ಆರ್. ಜೈಶಂಕರ್, ತಾಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ಎಂ.ಕೆ. ಶ್ರೀನಿವಾಸ್, ಕಾರ್ಯದರ್ಶಿ ಎಚ್.ಎಸ್. ಹರೀಶ್, ಖಜಾಂಚಿ ಬೆಸ್ಕಾಂ ಸತ್ಯನಾರಾಯಣ, ಮಂಜುನಾಥ ಶರ್ಮ ಇತರರಿದ್ದರು.
ಮೂಲ ಮಠಕ್ಕೆ ಸೇರಿಸಿಕೊಳ್ಳುವುದಿಲ್ಲಆವನಿ ಶೃಂಗೇರಿ ಶಾರದಾ ಪೀಠವನ್ನು ಯಾವುದೇ ಕಾರಣಕ್ಕೆ ಶೃಂಗೇರಿ ಮೂಲ ಶಾರದಾ ಪೀಠಕ್ಕೆ ವಿಲೀನಗೊಳಿಸಿಕೊಳ್ಳುವುದಿಲ್ಲ, ಕೇವಲ ಶಾಖಾ ಮಠಗಳಲ್ಲಿ ಸಂದಿಗ್ಧ ಪರಿಸ್ಥಿತಿ ಉಂಟಾದಾಗ ಮಾತ್ರ ನಾವು ಭಾಗವಹಿಸಿ ಆಯಾ ಮಠದ ಸಮಸ್ಯೆಗಳ ನಿವಾರಣೆಗೆ ಹಾಗೂ ಮಠದ ಮುಂದಿನ ಅಭಿವೃದ್ಧಿಗೆ ಅಗತ್ಯ ಸಲಹೆಗಳನ್ನು ನೀಡುವ ಕಾರ್ಯಗಳನ್ನು ಕೈಗೊಳ್ಳುತ್ತೇವೆಯೇ ವಿನಃ ಆ ಮಠವನ್ನು ಶೃಂಗೇರಿ ಶಾರದಾ ಮೂಲ ಮಠಕ್ಕೆ ಸೇರಿಸುವುದಿಲ್ಲ. ಈ ಮಠದ ಒಂದು ಹುಲ್ಲು ಕಡ್ಡಿಯನ್ನು ನಾವು ವಶಪಡಿಸಿಕೊಳ್ಳು ವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಶೃಂಗೇರಿ ಶಾರದ ಪೀಠದಲ್ಲಿ ಯಾವ ಯಾವ ಕಾಲಕ್ಕೆ ಏನೇನು ಧರ್ಮ ಕಾರ್ಯಗಳು ನಡೆಯಲಿದೆಯೋ ಅದೇ ರೀತಿಯಲ್ಲಿ ಆವನಿ ಶೃಂಗೇರಿ ಶಾರದಾ ಪೀಠದಲ್ಲಿಯೂ ನೂತನವಾಗಿ ಪೀಠಾರೋಹಣ ಮಾಡಿದ ಶ್ರೀಶಾಂತಾನಂದ ಭಾರತೀ ಶ್ರೀಗಳು ಮುಂದೆಯೂ ಸಹ ಶಂಕರಾಚಾರ್ಯರ ಮೂಲ ತತ್ವಗಳ ಆದಾರದ ಮೇಲೆ ಮುನ್ನೆಡೆಯುವ ಮೂಲಕ ಸನಾತನ ಹಿಂದೂ ಧರ್ಮಧ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲಿದ್ದಾರೆ. ಮಠದ ಭಕ್ತರು ಎಂದಿನಂತೆ ಸಹಕಾರ ನೀಡಬೇಕು ಎಂದರು.