Advertisement

“ಸನಾತನ ಧರ್ಮ ಸಂಸ್ಕೃತಿ ಮರೆಯಬೇಡಿ’: ಶ್ರೀ ಶಿವಾನಂದ ಭಾರತೀ ಸ್ವಾಮೀಜಿ ಸಲಹೆ

03:01 PM Oct 04, 2020 | sudhir |

ಶಿಗ್ಗಾವಿ: ಇಂದಿನ ಯುವಜನರು ಪಾಶ್ಚಿಮಾತ್ಯ ಸಂಸ್ಕೃತಿಯ ಆಕರ್ಷಣೆಗೆ ಒಳಗಾಗಿ ಸನಾತನ ಧರ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ ಎಂದು ಬೆಂಗಳೂರಿನ ಜಗದ್ಗುರು ಭಗವತ್ಪಾದ ಶ್ರೀ ಆದಿ ಶಂಕರಾಚಾರ್ಯ ಅದ್ವೈತ ಪೀಠದ ಶ್ರೀ ಶಿವಾನಂದ
ಭಾರತೀ ಸ್ವಾಮಿಗಳು ಹೇಳಿದರು. ಪಟ್ಟಣದ ಪ್ರಕಾಶ ದೇಸಾಯಿ ಜಮೀನಿನಲ್ಲಿ ಲೋಕಕಲ್ಯಾಣಾರ್ಥವಾಗಿ ಅಧಿಕ ಮಾಸದ ಪ್ರಯುಕ್ತ ಶ್ರೀ ಸ್ವಯಂಭೂ ಸೀತಾರಾಮ ಸಹಿತ ಹನುಮಂತ (ಆಂಜನೇಯ) ಚಾರಿಟೇಬಲ್‌ ಟ್ರಸ್ಟ್‌ ಆಯೋಜಿಸಿದ್ದ 33ದೇಶಿ ತಳಿಯ ಗೋ ಪೂಜೆ, ಹೋಮ-ಹವನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

Advertisement

ಯಾಂತ್ರೀಕೃತ ಜಗತ್ತಿನಲ್ಲಿ ಪಾಶ್ಚಿಮಾತ್ಯ ಪ್ರಭಾವ ಹೆಚ್ಚಾಗಿ ಎಲ್ಲೆಡೆ ನಾಸ್ತಿಕತೆ ಕಾಣುವಂತಾಗಿದೆ. ಧರ್ಮವಂತರು ನಮ್ಮ ಸನಾತನ ಧರ್ಮವನ್ನು ಮರೆಯುತ್ತಿದ್ದಾರೆ. ಯತಿಗಳು ಮತ್ತು ಸಾಧು, ಸಂತರು ಸನಾತನ ಹಿಂದೂ ಧರ್ಮವನ್ನು ಉಳಿಸಿ
ಬೆಳೆಸಬೇಕಾದದ್ದು ಪ್ರಸ್ತುತ ಅವಶ್ಯಕತೆ ಇದೆ ಎಂದರು.

ಇದನ್ನೂ ಓದಿ:ಮತ್ತೊಂದು ರನ್ ಮಳೆಗೆ ಶಾರ್ಜಾ ರೆಡಿ: ಟಾಸ್ ಗೆದ್ದ ಮುಂಬೈ ಬ್ಯಾಟಿಂಗ್ ಆಯ್ಕೆ

ಆದಿ ಶಂಕರಾಚಾರ್ಯರು ಕಾಲ್ನಡಿಗೆಯಲ್ಲಿಯೇ ಅಖಂಡ ಭಾರತದಲ್ಲಿ ಸಂಚರಿಸಿ ಸನಾತನ ಧರ್ಮದ ಉದ್ಧಾರಕ್ಕಾಗಿ 32 ವರ್ಷಗಳ ಕಾಲ ವೇದಗಳನ್ನು ಪ್ರಚಾರ ಮಾಡಿ, ಹಿಂದೂ ಧರ್ಮಸಾರ ತಿಳಿಸಿದ್ದಾರೆ. ಆಚಾರ, ವಿಚಾರಗಳನ್ನು ಲೋಕಕ್ಕೆ ಅರ್ಪಣೆ
ಮಾಡುವುದರಿಂದ ಸನಾತನ ಧರ್ಮವನ್ನು ಪಾಲನೆ ಮಾಡಲು ಪ್ರೇರಣೆಯಾಗುತ್ತದೆ ಎಂದರು. ಉತ್ತರ ಕರ್ನಾಟಕದಲ್ಲಿ ಆದಿಶಂಕರಾಚಾರ್ಯರ ಪೀಠದ ಹಲವಾರು ಶಾಖೆಗಳನ್ನು ತೆರೆಯುವ ಇಚ್ಛೆಯಿದೆ. ಸ್ಥಳೀಯ ಮನೋಜ ದೇಸಾಯಿ
ಕುಟುಂಬಸ್ಥರು ಪೀಠ ಸ್ಥಾಪನೆ ಮಾಡುವಂತೆ ಕೇಳಿಕೊಂಡಿದ್ದಾರೆ. ತಾಯಿ ಅನುಗ್ರಹದಂತೆ ಪೀಠ ಸ್ಥಾಪನೆ ಮಾಡುತ್ತೇವೆ. ಭಕ್ತವೃಂದ ನಮ್ಮೊಂದಿಗೆ  ಸಹಕರಿಸಬೇಕೆಂದರು. ನರ್ಮದಾ ಪರಾಕ್ರಮಿ ಶ್ರೀ ಕೃಷ್ಣ ಸಂಪಗಾಂವಕರ ಅವರಿಂದ ಸತ್ಸಂಗ ಹಾಗೂ
ವೇದಮೂರ್ತಿ ವಿನಾಯಕ ಭಟ್ಟ ಹಂಪಿಹೊಳಿ ಅಧಿಕ ಮಾಸದ ಮಹಿಮೆ ಕುರಿತು ಮಾತನಾಡಿದರು.

ಮನೋಜ ಪ್ರಕಾಶ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸದಸ್ಯ ಮುಕುಂದ ಭಿಕಾಜಿ ಅಧ್ಯಕ್ಷತೆ ವಹಿಸಿ
ಮಾತನಾಡಿದರು. ಟ್ರಸ್ಟ್‌ನಿಂದ ಶ್ರೀ ಸತ್ಯನಾರಾಯಣ ಕಥಾ ಪುಸ್ತಕದ ಮೂರನೇ ಆವೃತ್ತಿ ಮತ್ತು ಪಂಚಮುಖೀ ಆಂಜನೇಯನ ಭಾವಚಿತ್ರ ಲೋಕಾರ್ಪಣೆ ಮಾಡಲಾಯಿತು. ಕುಂದಗೋಳದ ಕೃಷ್ಣರಾವ್‌ ಕುಲಕರ್ಣಿ ಮತ್ತು ರುಕ್ಮಿಣಿಬಾಯಿ ಕುಲಕರ್ಣಿ ಅವರ ಮಕ್ಕಳು ಸದ್ಭಕ್ತರಿಗೆ ಉಚಿತವಾಗಿ ವಿತರಿಸಲಾಯಿತು. ಇದೆ ವೇಳೆ ಗೋ ಪಾಲಕರನ್ನು ಸನ್ಮಾನಿಸಲಾಯಿತು. ಧಾರವಾಡ ದತ್ತ
ಪಾದಯಾತ್ರಿ ಆನಂದ ಕುಲಕರ್ಣಿ, ಡಿ.ಕೆ.ಕುಲಕರ್ಣಿ,  ನಿವೃತ್ತ ಗ್ರಂಥ ಪಾಲಕ ರಾಮಚಂದ್ರ ಚಾಕಲಬ್ಬಿ, ತಿಪ್ಪಣ್ಣ ಮಜ್ಜಗಿ, ಶಂಕರ ಪಾಟೀಲ, ಗುರುಪ್ರಕಾಶ ಕುಲಕರ್ಣಿ, ಟ್ರಸ್ಟ್‌ ಸದಸ್ಯರು, ಭಕ್ತಾದಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next