ಶಿಕ್ಷಣ ಇಲಾಖೆ ತಿಳಿಸಿದೆ.
Advertisement
ಸಮುದಾಯದತ್ತ ಶಾಲೆ ಬೆಳಗ್ಗೆ 10.30ರಿಂದ ಆರಂಭಗೊಂಡು ಮಧ್ಯಾಹ್ನ 3.30ರವರೆಗೂ ನಡೆಯಲಿದೆ. ನಂತರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದಾದ ನಂತರ ಶಾಲೆಗೆ ಸತತ ಗೈರಾದ ವಿದ್ಯಾರ್ಥಿಗಳ ಮನೆಗೆ ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಣಾಧಿಕಾರಿಗಳು ಭೇಟಿ ನೀಡಲಿದ್ದಾರೆ. ಸಮುದಾಯದತ್ತ ಶಾಲೆಯ ಮಾಹಿತಿ ಮಕ್ಕಳ ಪಾಲಕರಿಗೆ ಹಾಗೂ ಶಾಲಾಭಿವೃದಿಟಛಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರಿಗೆ ಶಾಲೆಯಿಂದ ಮುಂಚಿತವಾಗಿ ತಿಳಿಸಬೇಕು. ಸಮುದಾಯದತ್ತ ಶಾಲೆ ಅಂಗವಾಗಿ ಶಾಲಾ ಪರಿಸರವನ್ನು ಸಂಪೂರ್ಣವಾಗಿ ಸ್ವತ್ಛಗೊಳಿಸಬೇಕು. ವಿದ್ಯಾರ್ಥಿಗಳ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಮಾಪನದ ಫಲಿತಾಂಶ ಅಧ್ಯಾಪಕರು ಸಿದ್ಧಪಡಿಸಬೇಕು. ಸಮುದಾಯದತ್ತ ಶಾಲೆಗೆ ಪಾಲಕರು ಕಡ್ಡಾಯವಾಗಿ ಬರುವಂತೆ ಮನವೊಲಿಸಬೇಕು ಎಂದು ಶಾಲಾ ಮುಖ್ಯಶಿಕ್ಷಕರಿಗೆ ಇಲಾಖೆ ನಿರ್ದೇಶಿಸಿದೆ.