ಬೆಂಗಳೂರು: ಪ್ರಸ್ತುತ ಕೋವಿಡ್-19 ರ ವಿರುದ್ಧದ ಹೋರಾಟವನ್ನು ಬೆಂಬಲಿಸುವ ಸ್ಯಾಮ್‌ಸಂಗ್ ಇಂಡಿಯಾ 14,000 ವೈದ್ಯಕೀಯ ಕಿಟ್‌ಗಳು, 24 ಆಕ್ಸಿಜನ್ ಕಾನ್ಸೆಂಟ್ರೇಟರ್ಸ್ ಮತ್ತು 150 ಆಕ್ಸಿಜನ್ ಸಿಲಿಂಡರ್‌ಗಳನ್ನು ಕರ್ನಾಟಕ ಸರ್ಕಾರಕ್ಕೆ ನೀಡಿದೆ.
ಕೊರಿಯಾ ನಂತರ, ಸ್ಯಾಮ್‌ಸಂಗ್‌ನ ಅತಿದೊಡ್ಡ ಆರ್ & ಡಿ ಕೇಂದ್ರವಾದ ಸ್ಯಾಮ್‌ಸಂಗ್ ಆರ್ & ಡಿ ಇನ್ಸ್ಟಿಟ್ಯೂಟ್ ಬೆಂಗಳೂರು (ಎಸ್‌ಆರ್‌ಐ-ಬಿ) ಕರ್ನಾಟಕ ಸರ್ಕಾರಕ್ಕೆ ವೈದ್ಯಕೀಯ ಕಿಟ್‌ಗಳನ್ನು ದಾನ ಮಾಡಲು ಶ.ರಾಜಚಂದ್ರ ಸರ್ವಮಂಗಲ್ ಟ್ರಸ್ಟ್ (ಎಸ್‌ಆರ್‌ಎಸ್‌ಟಿ) ನೊಂದಿಗೆ ಕೈಜೋಡಿಸಿದೆ.
ಎಸ್‌ಆರ್‌ಐ-ಬಿ ಕೋವಿಡ್-19 ಪರಿಹಾರಕ್ಕಾಗಿ ಕೆಲಸ ಮಾಡುವ ಆಸ್ಪತ್ರೆಗಳಿಗೆ 14 ಆಮ್ಲಜನಕ ಸಾಂದ್ರಕಗಳನ್ನು ದಾನ ಮಾಡಿದೆ. ಈ ಆಮ್ಲಜನಕ ಸಾಂದ್ರಕ ಗಳನ್ನು ದಕ್ಷಿಣ ಕೊರಿಯಾದಿಂದ ತರಿಸಲಾಗಿದೆ.
ಕರ್ನಾಟಕಕ್ಕೆ ನೆರವು ನೀಡುವ ಜೊತೆಗೆ, ಸ್ಯಾಮ್ಸಂಗ್ ಮುಂಚೆ ಕೋವಿಡ್ -19 ವಿರುದ್ಧದ ಭಾರತದ ಹೋರಾಟಕ್ಕೆ 5 ಮಿಲಿಯನ್ ಯುಎಸ್ ಡಾಲರ್ (37 ಕೋಟಿ ರೂಪಾಯಿಗಳು) ವಾಗ್ದಾನ ಮಾಡಿತ್ತು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದೇಣಿಗೆ ನೀಡುವುದು, ಮತ್ತು ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ಉಪಕರಣಗಳನ್ನು ನೀಡಿ ಆರೋಗ್ಯ ಕ್ಷೇತ್ರವನ್ನು ವರ್ಧಿಸುವುದು, ಇದು 100 ಆಕ್ಸಿಜನ್ ಸಾಂದ್ರಕಗಳು 3,000 ಆಕ್ಸಿಜನ್ ಸಿಲಿಂಡರ್‌ಗಳು ಮತ್ತು ಒಂದು ಮಿಲಿಯನ್ ಎಲ್‌ಡಿಎಸ್ ಸಿರಿಂಜುಗಳನ್ನು ಒಳಗೊಂಡಿದೆ.
ತನ್ನ ಜನರ ಉಪಕ್ರಮದ ಭಾಗವಾಗಿ, ಸ್ಯಾಮ್‌ಸಂಗ್ ಭಾರತದಲ್ಲಿ 50,000 ಕ್ಕೂ ಹೆಚ್ಚು ಅರ್ಹ ಉದ್ಯೋಗಿಗಳು ಮತ್ತು ಫಲಾನುಭವಿಗಳಿಗೆ ವ್ಯಾಕ್ಸಿನೇಷನ್ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದೆ.
ಎಸ್‌ಆರ್‌ಐ-ಬಿ ತನ್ನ ಉದ್ಯೋಗಿಗಳಿಗೆ ಸಮಸ್ತ ಕೋವಿಡ್ ಆರೈಕೆಯನ್ನು ವಿಸ್ತರಿಸಿದೆ, ವೈದ್ಯರೊಂದಿಗೆ ಟೆಲಿ-ಸಮಾಲೋಚನೆ, ಆರ್‌ಟಿ-ಪಿಸಿಆರ್ ಪರೀಕ್ಷೆಗಳು, ವೈದ್ಯಕೀಯ ಆರೈಕೆಯೊಂದಿಗೆ ಹೋಮ್ ಪ್ಯಾಕೇಜ್‌ಗಳು, ಏಕಾಂಗಿಯಾಗಿರುವ ಜನರಿಗೆ ಆಹಾರ ಮತ್ತು ವೈದ್ಯಕೀಯ ಕಿಟ್, ಅಗತ್ಯವಿದ್ದರೆ ಆಂಬ್ಯುಲೆನ್ಸ್, ಐಸೋಲೇಶನ್ ಮತ್ತು ಆಸ್ಪತ್ರೆಗೆ ಕೋವಿಡ್ ಕೇರ್ ಸೆಂಟರ್ ನೀಡುತ್ತದೆ.