Advertisement
ಇದರಲ್ಲಿ ಎರಡು ಆವೃತ್ತಿಗಳಿವೆ. ವಾಚ್ 5 ಪ್ರೊ ಎಲ್‍ಟಿಇ (ಇ ಸಿಮ್ ವರ್ಷನ್), ವಾಚ್ 5 ಪ್ರೊ ಬಿಟಿ (ಬ್ಲೂ ಟೂತ್ ವರ್ಷನ್). ಕ್ರಮವಾಗಿ ಇವುಗಳ ದರ, 49,999 ರೂ. ಹಾಗೂ 44,999 ರೂ. ಈ ವಾಚಿನ ವೈಶಿಷ್ಟ್ಯಗಳನ್ನು ಇಲ್ಲಿ ನೀಡಲಾಗಿದೆ.
Related Articles
Advertisement
ಟ್ಯಾಪ್ ಮಾಡುವಾಗ, ಸ್ವೈಪ್ ಮಾಡುವಾಗ ಯಾವುದೇ ಅಡೆತಡೆಯಿಲ್ಲದಂತೆ ಸರಾಗವಾದ ಅನುಭವ ನೀಡುತ್ತದೆ.
ಓಎಸ್: ಸ್ಯಾಮ್ ಸಂಗ್ ಮಾತೃ ತಯಾರಿಕೆಯಾದ ಎಕ್ಸಿನಾಸ್ ಡಬ್ಲೂ 920 ಪ್ರೊಸೆಸರ್ ಅನ್ನು ಇದು ಒಳಗೊಂಡಿದೆ. ಇದು ಗೂಗಲ್‍ನ ವಿಯರ್ ಓಎಸ್ ಕಾರ್ಯಾಚರಣೆ ಹೊಂದಿದ್ದು, ಸ್ಯಾಮ್‍ಸಂಗ್ ಒನ್ ಯೂಐ ಜೊತೆಗಿದೆ. ಮುಂಚೆ ಸ್ಯಾಮ್ ಸಂಗ್ ವಾಚ್‍ಗಳಿಗೆ ಟೈಜನ್ ಓಎಸ್ ಬಳಸುತ್ತಿತ್ತು. ಇದರಲ್ಲಿ ಗೂಗಲ್ ಪ್ಲೇ ಸ್ಟೋರ್ ಇದೆ. ಗೂಗಲ್ ಮ್ಯಾಪ್ ಸೇರಿದಂತೆ ಇನ್ನಿತರ ಗೂಗಲ್ ಆಪ್‍ಗಳನ್ನು ಇನ್ ಸ್ಟಾಲ್ ಮಾಡಿಕೊಳ್ಳಬಹುದು. ಸ್ಯಾಮ್ ಸಂಗ್ ಫೋನಿನಲ್ಲಿ ನೋಡುವ ಬಹುತೇಕ ಆಂಡ್ರಾಯ್ಡ್ ಆಪ್‍ಗಳು ಮೊದಲೇ ಇನ್ ಸ್ಟಾಲ್ ಆಗಿವೆ.
ಇದು 1.5 ರ್ಯಾಮ್ ಮತ್ತು 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಈಗಾಗಲೇ ಇನ್ ಸ್ಟಾಲ್ ಆಗಿರುವ ಆಪ್‍ಗಳ ಸಂಗ್ರಹ ಕಳೆದರೆ ಇನ್ನು 7.5 ಜಿಬಿ ಆಂತರಿಕ ಸಂಗ್ರಹ ಇದೆ.
ಇದರ ಓಎಸ್, ಯೂಸರ್ ಇಂಟರ್ ಫೇಸ್ ಆಕರ್ಷಕವಾಗಿವೆ. ಬಜೆಟ್ ವಾಚ್‍ಗಳಿಗೂ ಇಂತಹ ವಾಚ್‍ಗಳಿಗೂ ಎಷ್ಟೊಂದು ವ್ಯತ್ಯಾಸ ಇರುತ್ತದೆ ಎಂದು ತಿಳಿಯುತ್ತದೆ. ವಾಚನ್ನು ಟಚ್ ಮೂಲಕ ನಿರ್ವಹಣೆ ಮಾಡಿದಾಗ ಬಹಳ ವೇಗವಾಗಿ ಕಾರ್ಯಾಚರಿಸುತ್ತದೆ. ಯಾವುದೇ
ಇಂತಹ ಸ್ಮಾರ್ಟ್ ವಾಚುಗಳನ್ನು ಬಳಸುವುದೇ ದಿನ ನಿತ್ಯದ ವ್ಯಾಯಾಮ, ಓಟ, ನಿದ್ರೆ, ಇತ್ಯಾದಿಗಳ ಪ್ರಮಾಣ ಅಳೆಯುವ ಸಲುವಾಗಿ. ಇದರಲ್ಲಿ ನಡಿಗೆ, ಓಟ, ಸೈಕ್ಲಿಂಗ್, ರನ್ನಿಂಗ್ ಕೋಚ್, ಈಜು, ಟ್ರೆಡ್‍ಮಿಲ್, ಭಾರ ಎತ್ತುವಿಕೆ, ಏರೋಬಿಕ್ಸ್, ಫುಟ್ ಬಾಲ್, ಬಿಲ್ವಿದ್ಯೆ ಮುಂತಾದ 90 ಬಗೆಯ ವರ್ಕೌಟ್ ಗಳನ್ನು ಆಯ್ಕೆ ಮಾಡಿಕೊಂಡು ಅದರ ಚಟುವಟಿಕೆಗಳನ್ನು ಮಾಪನ ಮಾಡಬಹುದಾಗಿದೆ. ಆಯಾ ಚಟುವಟಿಕೆಗಳನ್ನು ಮಾಡುತ್ತಿರುವ ಸಮಯ, ಕ್ಯಾಲರಿಗಳ ಬರ್ನಿಂಗ್, ಹೃದಯ ಬಡಿತಗಳ ಸಂಖ್ಯೆ ಇತ್ಯಾದಿಗಳನ್ನು ತೋರಿಸುತ್ತದೆ. ಹೊರಾಂಗಣದಲ್ಲಿ ಸೈಕ್ಲಿಂಗ್ ಹೋದಾಗ ನೀವು ಹೋದ ದಾರಿಯಲ್ಲೇ ವಾಪಸ್ ಬರುವ ನ್ಯಾವಿಗೇಷನ್ ಅನ್ನು ಸಹ ಇದು ತೋರಿಸುತ್ತದೆ.
ಬಾಡಿ ಕಂಪೋಸಿಷನ್ ಎನ್ನುವ ವೈಶಿಷ್ಟ್ಯ ಆನ್ ಮಾಡಿದಾಗ ನಮ್ಮ ದೇಹದೊಳಗಿನ ಅನೇಕ ಅಂಶಗಳ ಮಾಪನ ದೊರಕುತ್ತದೆ. ಬಾಡಿ ಮಾಸ್ ಇಂಡೆಕ್ಸ್ ಅನ್ನು ಎರಡು ಕೀಗಳಿಗೆ ಮಧ್ಯದ ಮತ್ತು ಉಂಗುರದ ಬೆರಳನ್ನು ಇಡುವ ಮೂಲಕ ಪರೀಕ್ಷಿಸಬಹುದು. ಇದರಲ್ಲಿ ದೇಹದ ಕೊಬ್ಬಿನ ಪ್ರಮಾಣ, ದೇಹದಲ್ಲಿರುವ ನೀರಿನ ಅಂಶ, ಬಿಎಂಆರ್ ಇತ್ಯಾದಿ ತಿಳಿಯುತ್ತದೆ.
ಒತ್ತಡ ಮಾಪಕ ಇದೆ. ಒತ್ತಡವನ್ನು ನಿಯಂತ್ರಿಸಲು ಉಸಿರನ್ನು ಒಳಗೆ ಹಾಗೂ ಹೊರಗೆ ಹಾಕುವ ಸಮಯ ಮಾಪಕ ಇದೆ. ಇದು ಪ್ರಾಣಾಯಾಮ ಮಾಡುವವರಿಗೆ ಅತ್ಯಂತ ಅನುಕೂಲಕರ ಫೀಚರ್ ಆಗಿದೆ.
ಇಸಿಮ್ ಬಳಕೆ : ಅನೇಕ ಸ್ಮಾರ್ಟ್ ವಾಚ್‍ಗಳಲ್ಲಿ ಬ್ಲೂಟೂತ್ ಮೂಲಕ ಫೋನ್ ಗೆ ಸಂಪರ್ಕ ಮಾಡಿಕೊಂಡಾಗ ಕರೆ ಸ್ವೀಕರಿಸುವ, ಕರೆ ಮಾಡುವ ಆಯ್ಕೆ ಇದೆ. ಆದರೆ ಈ ವಾಚ್‍ನಲ್ಲಿ ನೀವು ಫೋನ್ ನಲ್ಲಿ ಬಳಸುತ್ತಿರುವ ಸಿಮ್ ನ ನಂಬರ್ ಅನ್ನೇ ವಾಚ್‍ನಲ್ಲಿರುವ ಇ ಸಿಮ್ ಫೀಚರ್ ಗೆ ಸೆಟಿಂಗ್ ಮಾಡಿಕೊಂಡು ಪ್ರತ್ಯೇಕವಾಗಿ ಬಳಸಬಹುದು. ಜಿಯೋ ಸಿಮ್ ಗೆ ಈ ಆಯ್ಕೆ ಇದೆ. ಇದರಿಂದಾಗಿ ವಾಚ್ 5 ಪ್ರೊ ಬ್ಲೂಟೂತ್ ಮೂಲಕ ಫೋನ್‍ಗೆ ಕನೆಕ್ಟ್ ಆಗಿಲ್ಲದಾಗಲೂ ಕೂಡ, ನಮ್ಮ ನಂಬರ್ ಗೆ ಕರೆಗಳು ಬಂದಾಗ ಫೋನ್ ನಲ್ಲೇ ನೊಟಿಫಿಕೇಷನ್ ಬರುತ್ತದೆ. ಅಲ್ಲೇ ಕರೆ ಸ್ವೀಕರಿಸಿ ಮಾತನಾಡಬಹುದು. ಮತ್ತು ಕರೆಗಳನ್ನು ಮಾಡಬಹುದು. ಮನೆಯಲ್ಲಿ ಫೋನ್ ಮರೆತು ಹೋದರೂ, ಈ ವಾಚ್ ಇದ್ದರೆ ಫೋನ್ ನಂತೆ ಬಳಸಬಹುದು. ಇಯರ್ ಬಡ್ ಅನ್ನು ಬಳಸಿದರೆ ವಾಚನ್ನು ಕಿವಿಯಲ್ಲಿ ಹಿಡಿಯದೇ ಮಾತನಾಡಬಹುದು.
ಬ್ಯಾಟರಿ: ಇದು 590 ಎಂಎಎಚ್ ಬ್ಯಾಟರಿ ಹೊಂದಿದೆ. ಸಾಮಾನ್ಯ ಬಳಕೆಗೆ 80 ಗಂಟೆ ಹಾಗೂ ಜಿಪಿಎಸ್ ಆನ್ ಮಾಡಿದರೆ 20 ಗಂಟೆಗಳ ಬಾಳಿಕೆ ಬರುತ್ತದೆ ಎಂದು ಕಂಪೆನಿ ಹೇಳುತ್ತದೆ. ಆದರೆ ಇ- ಸಿಮ್ ಫೀಚರ್ ಬಳಸಿದಾಗ ಬ್ಯಾಟರಿ ಬಾಳಿಕೆ ಕಡಿಮೆ ಆಗುತ್ತದೆ.
ಒಟ್ಟಾರೆ, ಆಂಡ್ರಾಯ್ಡ್ ಬಳಕೆದಾರರಿಗೆ ಇದೊಂದು ಅತ್ಯುತ್ತಮ ವಾಚ್. ಫಿಟ್‍ನೆಸ್, ಸ್ಪೋಟ್ಸ್ಸ್, ಸ್ಟೈಲ್, ಕರೆ ಮಾಡಲು, ಸಂಗೀತ ಕೇಳಲು ಸೇರಿದಂತೆ ಅನೇಕ ಅನುಕೂಲಕರ ವೈಶಿಷ್ಟ್ಯಗಳಿರುವ ಒಂದು ಮಾದರಿ ವಾಚ್ ಇದು ಎನ್ನಲಡ್ಡಿಯಿಲ್ಲ.
-ಕೆ. ಎಸ್. ಬನಶಂಕರ ಆರಾಧ್ಯ.