Advertisement
5000 ಎಂಎಎಚ್ ಬ್ಯಾಟರಿ ಸಾಮರ್ಥ್ಯವಿದ್ದು, 25 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ. 6ಜಿಬಿ ರ್ಯಾಮ್ ಜತೆ 128ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರುವ ಫೋನಿನ ಬೆಲೆ 23,999 ರೂ. ಆಗಿದ್ದರೆ, 8 ಜಿಬಿ ರ್ಯಾಮ್ ಜತೆ 128 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರುವ ಫೋನಿನ ಬೆಲೆ 25,999 ರೂ. ಆಗಿದೆ. ಮೆಮೋರಿ ಕಾರ್ಡ್ ಮೂಲಕ ಸ್ಟೋರೇಜ್ ಅನ್ನು 1ಟೆರಾ ಬೈಟ್‌ವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ.
ವಿದ್ಯುಚ್ಚಾಲಿತ ದ್ವಿಚಕ್ರ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಕಾರಣ ಓಲಾ ಎಲೆಕ್ಟ್ರಿಕ್ ಕಂಪನಿ, ಮಾರುಕಟ್ಟೆಯಲ್ಲಿದ್ದ 1,441 ಸ್ಕೂಟರ್‌ಗಳನ್ನು ಹಿಂಪಡೆ ಯಲು ತೀರ್ಮಾನಿಸಿದೆ. ಮಾರ್ಚ್ 26ರಂದು ಪುಣೆಯಲ್ಲಿ ಓಲಾ ಸ್ಕೂಟರ್ ಅಗ್ನಿ ಸ್ಫೋಟಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ಕಂಪನಿ ಈ ನಿಲುವು ತಾಳಿದೆ. “ಸರ್ವೀಸ್ ಎಂಜಿನಿಯರ್‌ಗಳು 1,441 ಓಲಾ ಸ್ಕೂಟರ್‌ಗಳನ್ನು ಮರು ತಪಾಸಣೆಗೆ ಒಳಪಡಿಸಲಿದ್ದಾರೆ. ಬ್ಯಾಟರಿ ವ್ಯವಸ್ಥೆ ಸೇರಿದಂತೆ ಸ್ಕೂಟರ್‌ನ ಎಲ್ಲ ಪ್ರತ್ಯೇಕ
ಭಾಗಗಳನ್ನೂ ಪರೀ ಕ್ಷಿಸಲಿದ್ದಾರೆ’ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಇತ್ತೀಚೆಗಷ್ಟೇ ಒಕಿನಾವಾ ಆಟೋ ಟೆಕ್ 3000 ಸ್ಕೂಟರ್‌ಗಳನ್ನು, ಪ್ಯೂರ್‌ಇವಿ 2000 ಸ್ಕೂಟರ್ ಗಳನ್ನು ವಾಪಸ್ ಪಡೆದು, ಪರೀಕ್ಷೆಗೊಳಪಡಿಸಿದ ಬೆನ್ನಲ್ಲೇ ಓಲಾ ಎಲೆಕ್ಟ್ರಿಕ್ ಈ ನಿರ್ಧಾರ ಕೈಗೊಂಡಿದೆ.