Advertisement
ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಾದರೆ, ಸ್ಪರ್ಧಾತ್ಮಕ ದರದಲ್ಲಿ ವಸ್ತುಗಳು ದೊರಕತೊಡಗಿದರೆ ಸ್ಪರ್ಧಿಗಳು ತಮ್ಮ ಸರಕಿನ ಬೆಲೆ ಕಡಿಮೆ ಮಾಡಲೇಬೇಕಾಗುತ್ತದೆ. ದರ ಕಡಿಮೆ ಮಾಡದಿದ್ದರೆ ಗ್ರಾಹಕರು ಅದೇ ಸರಕು ಇನ್ನೊಂದು ಕಡೆ ಕಡಿಮೆಗೆ ದೊರೆತರೆ ಅದನ್ನೇ ಕೊಳ್ಳುತ್ತಾರೆ. ಇದಕ್ಕೆ ಮೊಬೈಲ್ ಫೋನ್ ಮಾರುಕಟ್ಟೆಯೂ ಹೊರತಲ್ಲ. ಭಾರತದಲ್ಲಿ ನಂ. 1 ಸ್ಥಾನದಲ್ಲಿದ್ದ ಸ್ಯಾಮ್ ಸಂಗ್ ಮೊಬೈಲ್ ಕಂಪೆನಿ, ಶಿಯೋಮಿ ಕಂಪೆನಿಯ ದರ ಸಮರದಿಂದಾಗಿ ತನ್ನ ಒಂದನೇ ಸ್ಥಾನವನ್ನು ಅದಕ್ಕೆ ಬಿಟ್ಟುಕೊಡಬೇಕಾಯಿತು. ಶಿಯೋಮಿ ಮಾತ್ರವಲ್ಲ, ಆಸುಸ್, ಆನರ್, ಮೋಟೋ, ರಿಯಲ್‌ಮಿ ಕಂಪೆನಿಗಳು ಮಿತವ್ಯಯದ ದರಕ್ಕೆ ಉತ್ತಮ ಮೊಬೈಲ್ ಗಳನ್ನು ನೀಡತೊಡಗಿದ್ದು, ಈ ಎಲ್ಲ ಕಂಪೆನಿಗಳ ಸ್ಪರ್ಧೆಯನ್ನೂ ಸ್ಯಾಮ್ ಸಂಗ್ ಎದುರಿಸಬೇಕಾಗಿದೆ. ಈವರೆಗೂ 12-13 ಸಾವಿರ ಬೆಲೆ ಇಡಬೇಕಾದ ಮೊಬೈಲ್ ಫೋನ್‌ಗಳಿಗೆ 20-25 ಸಾವಿರ ರೂ. ದರ ಇಟ್ಟು ಸ್ಯಾಮ್ ಸಂಗ್ ಮಾರಾಟ ಮಾಡುತ್ತಿತ್ತು. ಬ್ರಾಂಡ್ ಇಮೇಜ್ ನಿಂದಾಗಿ ಗ್ರಾಹಕರು ಸಹ ಹಿಂದೆ ಮುಂದೆ ಯೋಚಿಸದೇ ಹೆಚ್ಚು ದರ ತೆತ್ತು, ಕೊಳ್ಳುತ್ತಿದ್ದರು. ಆದರೆ ಜಾಣ ಗ್ರಾಹಕರು ಬೇರೆ ಕಂಪೆನಿಗಳ ಉತ್ತಮ ಮೊಬೈಲ್‌ಗಳನ್ನು ಅದಕ್ಕಿಂತ ಕಡಿಮೆ ದರಕ್ಕೆ ಕೊಂಡು ಬಳಸಿ ನೋಡಿದಾಗ ವ್ಯತ್ಯಾಸ ಅರಿವಾಗತೊಡಗಿತು.
ಗೆಲಾಕ್ಸಿ ಎಂ 10 ಹೆಸರಿನ ಮೊಬೈಲ್ ಆರಂಭಿಕ ಮಟ್ಟದ್ದು, ಇದು 2 ಜಿಬಿ ರ್ಯಾಮ್ ಮತ್ತು 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿದೆ. (ದರ 8 ಸಾವಿರ ರೂ.) ಎಂ10 ನ ಇನ್ನೊಂದು ಆವೃತ್ತಿ 3 ಜಿಬಿ ರ್ಯಾಮ್ ಮತ್ತು 32 ಜಿಬಿ ಆಂತರಿಕ ಸಂಗ್ರಹ ಹೊಂದಿದೆ. (ದರ 9 ಸಾವಿರ ರೂ.) ಈ ಮೊಬೈಲ್‌ನಲ್ಲಿ 3400 ಎಂಎಎಚ್ ಬ್ಯಾಟರಿ ಇದೆ. 6.22 ಇಂಚಿನ ಎಚ್‌ಡಿ ಪ್ಲಸ್ (720*1520) ಫುಲ್ ವ್ಯೂ ಡಿಸ್‌ಪ್ಲೇ ಇದೆ. ಸ್ಯಾಮ್ ಸಂಗ್‌ನ ಎಂಟ್ರಿ ಲೆವೆಲ್ ಮತ್ತು ಮಿಡ್ ರೇಂಜ್ ಫೋನ್‌ಗಳಲ್ಲಿ ಇದೇ ಮೊದಲ ಬಾರಿಗೆ ವಾಟರ್ ಡ್ರಾಪ್ ನಾಚ್ ಡಿಸ್‌ಪ್ಲೇ ಹಾಕಿರುವುದು ವಿಶೇಷ! ಬೇರೆ ಕಂಪೆನಿಯ ಫೋನ್ ಗಳಲ್ಲಿ ಈ ವೈಶಿಷ್ಟé ಬಂದು ವರ್ಷವೇ ಆಗುತ್ತಿದೆ. ಈಗ ಇದನ್ನೇ ಮುಖ್ಯವಾಗಿ ತನ್ನ ಜಾಹೀರಾತಿನಲ್ಲಿ ಸ್ಯಾಮ್ ಸಂಗ್ ಹೇಳಿಕೊಳ್ಳುತ್ತಿದೆ! 13 ಮೆ.ಪಿ. ಮತ್ತು 5 ಮೆ.ಪಿ. ಡುಯೆಲ್ ಲೆನ್ಸ್ ಹಿಂಬದಿ ಕ್ಯಾಮರಾ, 5 ಮೆ.ಪಿ. ಸೆಲ್ಫಿà ಕ್ಯಾಮರಾ ಇದೆ. 1.6 ಗಿಗಾ ಹಟ್ಜ್ ಸಾಮರ್ಥ್ಯದ, ಸ್ಯಾಮ್ ಸಂಗ್‌ನವರದೇ ತಯಾರಿಕೆಯಾದ ಎಕ್ಸಿನಾಸ್ 7870 ಎಂಟು ಕೋರ್‌ಗಳ ಪ್ರೊಸೆಸರ್ ಇದೆ. ಡುಯಲ್ ವೋಲ್ಟ್ ಇದೆ. ಅಂದರೆ ಎರಡೂ ಸಿಮ್‌ಗಳಲ್ಲಿ 4 ಜಿ ನೆಟ್‌ವರ್ಕ್ ಕೆಲಸ ಮಾಡುತ್ತದೆ. ಇದಕ್ಕೆ ಫಿಂಗರ್ ಪ್ರಿಂಟ್ ಅನ್‌ಲಾಕ್ ಇಲ್ಲ. ಫೇಸ್ ಅನ್‌ಲಾಕ್ ಇದೆ. ಓರಿಯೋ 8.1 ಕಾರ್ಯಾಚರಣೆ ವ್ಯವಸ್ಥೆ ಹೊಂದಿದೆ. ಇದಕ್ಕೆ ಸ್ಯಾಮ್‌ಸಂಗ್ ಎಕ್ಸ್‌ಪೀರಿಯನ್ಸ್ 9.5 ಯುಎಕ್ಸ್ ಸ್ಕಿನ್ ಇರಲಿದೆ.
Related Articles
ಗೆಲಾಕ್ಸಿ ಎಂ 20 ಮಾದರಿ, ಗೆಲಾಕ್ಸಿ ಎಂ 10 ಮಾದರಿಗಿಂತ ಹೆಚ್ಚಿನ ವೈಶಿಷ್ಟéಗಳುಳ್ಳದ್ದು, ಆರಂಭಿಕ ಮಧ್ಯಮ ದರ್ಜೆಯದ್ದು. ಈ ಮಾದರಿಯಲ್ಲೂ ಎರಡು ಆವೃತ್ತಿಗಳಿವೆ. 4 ಜಿಬಿ ರ್ಯಾಮ್ ಮತ್ತು 64 ಜಿಬಿ ಆಂತರಿಕ ಸಂಗ್ರಹ (13 ಸಾವಿರ ರೂ.) ಮತ್ತು 3 ಜಿಬಿ ರ್ಯಾಮ್ ಮತ್ತು 32 ಜಿಬಿ ಆಂತರಿಕ ಸಂಗ್ರಹ (11 ಸಾವಿರ ರೂ.) ಇದು 6.3 ಇಂಚಿನ ಫುಲ್‌ಎಚ್‌ಡಿ ಪ್ಲಸ್ (1080*2340) ಫುಲ್ ವ್ಯೂ ಡಿಸ್‌ಪ್ಲೇ ಹೊಂದಿದೆ. ಇದಕ್ಕೆ ಸ್ಯಾಮ್ ಸಂಗ್‌ನದೇ ತಯಾರಿಕೆಯ ಎಕ್ಸಿನಾಸ್ 7904 (1.8 ಗಿ.ಹ.) ಎಂಟು ಕೋರ್‌ಗಳ ಪ್ರೊಸೆಸರ್ ಇದೆ. ಇನ್ನೊಂದು ಅಚ್ಚರಿ ಏನೆಂದರೆ ಈ ಮೊಬೈಲ್‌ಗೆ 5000 ಎಂಎಎಚ್ ಬ್ಯಾಟರಿ ಇದೆ! ಬಹುಶಃ ಸ್ಯಾಮ್ ಸಂಗ್‌ನ ಮಿಡಲ್ ರೇಂಜ್ ಫೋನ್‌ಗಳಲ್ಲಿ ಇಷ್ಟು ಸಾಮರ್ಥ್ಯದ ಬ್ಯಾಟರಿ ಇದೇ ಮೊದಲಿರಬೇಕು. ಅಲ್ಲದೇ ಇದಕ್ಕೆ ಯುಎಸ್‌ಬಿ ಟೈಪ್ ಸಿ ಚಾರ್ಜರ್ ಇದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ! ಎರಡು ಸಿಮ್ ಇದ್ದು, ಎರಡಕ್ಕೂ ವಿವೋಎಲ್‌ಟಿಇ (4ಜಿ) ಇದೆ! ಕ್ಯಾಮರಾ ವಿಭಾಗಕ್ಕೆ ಬಂದರೆ, 13 ಮೆ.ಪಿ. ಮತ್ತು 5 ಮೆ.ಪಿ. ಹಿಂಬದಿ ಕ್ಯಾಮರಾ ಮತ್ತು 8 ಮೆ.ಪಿ. ಸೆಲ್ಫಿà ಕ್ಯಾಮರಾ ಇದೆ. ಇದಕ್ಕೆ ಫಿಂಗರ್‌ಪ್ರಿಂಟ್ ಅನ್‌ಲಾಕ್ ಮತ್ತು ಫೇಸ್ ಅನ್‌ಲಾಕ್ ಎರಡೂ ಇವೆ. ಇದು ಸಹ ಅಂಡ್ರಾಯ್ಡ 8.1 ಓರಿಯೋ, ಇದಕ್ಕೆ ಸ್ಯಾಮ್‌ಸಂಗ್ ಎಕ್ಸ್‌ಪೀರಿಯನ್ಸ್ 9.5 ಯುಎಕ್ಸ್ ಆಪರೇಟಿಂಗ್ ಸಿಸ್ಟಂ ಹೋಂದಿದೆ.
Advertisement
ಗೆಲಾಕ್ಸಿ ಎಂ 20 ಮೊಬೈಲ್‌ನ ಸ್ಪೆಸಿಫಿಕೇಷನ್‌ಗಳನ್ನು ಗಮನಿಸಿದಾಗ ನೀಡುವ ಹಣಕ್ಕೆ ತಕ್ಕ ಮೌಲ್ಯ ನೀಡುವ ಮೊಬೈಲ್ ಎನ್ನಲಡ್ಡಿಯಿಲ್ಲ. ಈ ದರಕ್ಕೆ ಟೈಪ್ ಸಿ ಚಾರ್ಜಿಗ್ ವ್ಯವಸ್ಥೆಯನ್ನು ಇನ್ನೂ ಅನೇಕ ಕಂಪೆನಿಗಳು ನೀಡಿಲ್ಲ. ಸ್ಯಾಮ್ ಸಂಗ್ ಬೇರೆ ಕಂಪೆನಿಗಳಿಗೆ ಈ ವಿಷಯದಲ್ಲಿ ಸ್ಪರ್ಧೆ ನೀಡಿದೆ. ಈಗ ಉಳಿದ ಕಂಪೆನಿಗಳೂ 13 ಸಾವಿರದ ಮೊಬೈಲ್‌ಗಳಿಗೆ ಟೈಪ್ ಸಿ ಫಾಸ್ಟ್ ಚಾರ್ಜರ್ ಸೌಲಭ್ಯ ನೀಡಬೇಕಿದೆ. ಎಲ್ಲ ವಿಷಯದಲ್ಲೂ ಮುಂದಿರುವ ಈ ಮೊಬೈಲ್ ಫೋನ್, ಪ್ರೊಸೆಸರ್ ವಿಷಯದಲ್ಲಿ ಸ್ವಲ್ಪ ಹಿಂದಿದೆ ಎನ್ನಬಹುದು. ಆದರೂ ಸಾಮಾನ್ಯ ಬಳಕೆದಾರರಿಗೆ ಇದು ಸಾಕು.
– ಕೆ.ಎಸ್. ಬನಶಂಕರ ಆರಾಧ್ಯ