Advertisement
ಸ್ಯಾಮ್ ಸಂಗ್ ಗ್ಯಾಲಕ್ಸಿ F02 ಮತ್ತು ಗ್ಯಾಲಕ್ಸಿ F12 ಎರಡೂ ವಾಟರ್ ಡ್ರಾಪ್ ಡಿಸೈನ್ ಹೊಂದಿರುವ ಡಿಸ್ಪ್ಲೇ ಯೊಂದಿಗೆ ಲಭ್ಯವಾಗಲಿವೆ. ಗ್ಯಾಲಕ್ಸಿ F12 ಸಹ 90Hz ಡಿಸ್ಪ್ಲೇ ಮತ್ತು ಕ್ವಾಡ್ ರಿಯರ್ ಕ್ಯಾಮೆರಾಗಳೊಂದಿಗೆ ಅತ್ಯಾಕರ್ಷಕ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಮತ್ತೊಂದೆಡೆ, ಗ್ಯಾಲಕ್ಸಿ F02 ಟ್ರೆಡಿಷನಲ್ 60 ಹೆಚ್ ಡಿ ಡಿಸ್ಪ್ಲೇ ಮತ್ತು ಟ್ರಿಪಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.
Related Articles
Advertisement
ಸ್ಯಾಮ್ ಸಂಗ್ ಗ್ಯಾಲಕ್ಸಿ F02 ಗಳು 6.5-ಇಂಚಿನ ಎಚ್ ಡಿ + ಇನ್ಫಿನಿಟಿ-ವಿ ಡಿಸ್ಪ್ಲೇಯನ್ನು ಹೊಂದಿದೆ ಮತ್ತು ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 450 SoC ನಿಂದ ನಿಯಂತ್ರಿಸಲ್ಪಡುತ್ತದೆ. ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾಗಳನ್ನು ಸಹ ಒಳಗೊಂಡಿದೆ, ಇದನ್ನು 13 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ಸೌಲಭ್ಯವನ್ನು ಹೊಂದಿದೆ. ಇದಲ್ಲದೆ, 5,000mAh ಬ್ಯಾಟರಿಯನ್ನು ಹೊಂದಿ ಅಕರ್ಷಕವಾಗಿದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ F12 ವಿಶೇಷತೆಗಳೇನು..?
ಸ್ಯಾಮ್ ಸಂಗ್ ಗ್ಯಾಲಕ್ಸಿ F12 90 ಹೆಚ್ ಡಿ ರಿಫ್ರೆಶ್ ರೇಟ್ ನೊಂದಿಗೆ 6.5-ಇಂಚಿನ ಎಚ್ ಡಿ + ಇನ್ಫಿನಿಟಿ-ವಿ ಡಿಸ್ಪ್ಲೇಯನ್ನು ಹೊಂದಿದೆ ಮತ್ತು 48 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ನೊಂದಿಗೆ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಗ್ಯಾಲಕ್ಸಿ F12 ಯು ಎಸ್ ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಅನ್ನು ಸಹ ಹೊಂದಿದೆ. ಇದಲ್ಲದೆ, ಫೋನ್ ಎಕ್ಸಿನೋಸ್ 850 SoC ಮತ್ತು 6,000mAh ಬ್ಯಾಟರಿಯಿಂದ ಕೂಡಿದೆ.
ಓದಿ : ಈಶ್ವರಪ್ಪ ದೂರು ಪ್ರಕರಣ: ಸಿಎಂ ಬಿಎಸ್ ವೈ ಬೆನ್ನಿಗೆ ನಿಂತ ಬಿಜೆಪಿ ಸಚಿವರು, ಶಾಸಕರು!