Advertisement
ಸ್ಮಾರ್ಟ್ ಫೋನ್ ನನ್ನು ಇನ್ಫಿನಿಟಿ-ಒ ಡಿಸ್ಪ್ಲೇ, 64 ಎಂಪಿ ಕ್ವಾಡ್ ಕ್ಯಾಮೆರಾ ಒಐಎಸ್ ನೊಂದಿಗೆ ಬಿಡುಗಡೆ ಮಾಡಲಾಗಿದೆ, ಇದು ನೀರು ಮತ್ತು ಧೂಳು ನಿರೋಧಕ ಐಪಿ 67 ರೇಟಿಂಗ್ ನೊಂದಿಗೆ ಗ್ರಾಹಕರ ಕೈಗೆ ಸಿಗಲಿದೆ.
Related Articles
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಯಾಮ್ ಸಂಗ್ ಇಂಡಿಯಾದ ಹಿರಿಯ ನಿರ್ದೇಶಕ ಹಾಗೂ ಮೊಬೈಲ್ ಮಾರ್ಕೆಟಿಂಗ್ ಮುಖ್ಯಸ್ಥ ಆದಿತ್ಯ ಬಬ್ಬರ್, ಸ್ಯಾಮ್ ಸಂಗ್ ಗ್ಯಾಲಕ್ಸಿ A52S 5G 6GB RAM+128GB ಸ್ಟೋರೇಜ್ ಮಾಡೆಲ್ ಗೆ 35,999 ರೂ. ಮತ್ತು 8GB RAM+128GB ಸ್ಟೋರೇಜ್ ಮಾಡೆಲ್ ಗೆ 37,499 ರೂ. ಎಂದು ಮಾಹಿತಿ ನೀಡಿದ್ದಾರೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ A52S 5G 6.5-ಇಂಚಿನ ಫುಲ್ ಎಚ್ ಡಿ+ ಸೂಪರ್ ಆಮ್ಲೋಡ್ ಇನ್ಫಿನಿಟಿ-ಓ ಡಿಸ್ಪ್ಲೇ 1080 x 2400 ಪಿಕ್ಸೆಲ್ ರೆಸಲ್ಯೂಶನ್ ಹಾಗೂ 120Hz ರಿಫ್ರೆಶ್ ರೇಟ್ ನನ್ನು ಹೊಂದಿದೆ. ಹುಡ್ ಅಡಿಯಲ್ಲಿ, ಸ್ಮಾರ್ಟ್ ಫೋನ್ ನಲ್ಲಿ ಸ್ನಾಪ್ ಡ್ರಾಗನ್ 778 ಜಿ ಚಿಪ್ ಸೆಟ್ ಇದೆ, ಜೊತೆಗೆ ಅಡ್ರಿನೊ 642 ಎಲ್ ಜಿಪಿಯು ಜೊತೆಗೆ 8 ಜಿಬಿ RAM ಹಾಗೂ 256 ಜಿಬಿ ಸಂಗ್ರಹವಿದೆ. ಸ್ಮಾರ್ಟ್ ಫೋನ್ ಮೈಕ್ರೊ ಎಸ್ ಡಿ ಕಾರ್ಡ್ ಬೆಂಬಲದೊಂದಿಗೆ ಬರುತ್ತದೆ, ಇದು 1TB ವರೆಗೆ ಹೆಚ್ಚುವರಿ ಸಂಗ್ರಹಣೆಯನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಯಾಮ್ ಸಂಗ್ ನ ಹೊಸ ಸ್ಮಾರ್ಟ್ ಫೋನ್ 4,500mAh ಬ್ಯಾಟರಿಯನ್ನು ಹೊಂದಿದ್ದು, ಫೋನ್ ಆಂಡ್ರಾಯ್ಡ್ 11 ಓಎಸ್ ನಲ್ಲಿ ಒನ್ ಯುಐ 3.1 ಮೇಲೆ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ : ಕಿಚ್ಚನ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ ‘ವಿಕ್ರಾಂತ್ ರೋಣ’ ಡೆಡ್ ಮ್ಯಾನ್ಸ್ ಟೀಸರ್