Advertisement

ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಸ್ಯಾಮ್ ಸಂಗ್ ಗ್ಯಾಲಕ್ಸಿ A 32 .. ವಿಶೇಷತೆಗಳೇನು?

06:24 PM Mar 05, 2021 | Team Udayavani |

ನವದೆಹಲಿ: ವಿಶ್ವದ ಪ್ರಸಿದ್ಧ ಸ್ಮಾರ್ಟ್ ಪೋನ್ ಕಂಪನಿಯಾದ ಸ್ಯಾಮ್ ಸಂಗ್ ತನ್ನ ‘ಎ’ ಸರಣಿಯ ಸ್ಯಾಮ್ ಸಂಗ್ ಗ್ಯಾಲಕ್ಸಿ A 32  ಹೊಸ ಮೊಬೈಲ್ ಪೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Advertisement

ಬರೊಬ್ಬರಿ 5000 mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಡಾಲ್ಬಿ ಅಟ್ಮೋಸ್ ಸೌಲಭ್ಯವನ್ನು ಇದು ಒಳಗೊಂಡಿದ್ದು, ಬಳಕೆದಾರರಿಗೆ ಇನ್ನೂ ಹಲವಾರು ಹೊಸ ಫೀಚರ್ ಗಳನ್ನು ನೀಡಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ A 32  ನ ವೈಶಿಷ್ಟ್ಯತೆಗಳು

ಡುವೆಲ್ ನ್ಯಾನೋ ಸಿಮ್ ಸೌಲಭ್ಯವನ್ನು ಒಳಗೊಂಡಿರುವ ಈ ಮೊಬೈಲ್ ಪೋನ್, ಆಂಡ್ರಾಯ್ಡ್ 11 ನ ಮೂಲಕ ಕಾರ್ಯನಿರ್ವಹಿಸಲಿದೆ. ಅಲ್ಲದೆ ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೋ ಜಿ 80 SoC ಪ್ರೊಸೆಸರ್ ಅನ್ನು ಇದು ಒಳಗೊಂಡಿದ್ದು, 6.4 ಇಂಚಿನ ಸೂಪರ್ ಅಮೋಲ್ಡ್ ಡಿಸ್ ಪ್ಲೇ ಅನ್ನು ಇದು ಹೊಂದಿದೆ.

ಕ್ಯಾಮರಾ: ಹಿಂಭಾಗದಲ್ಲಿ ಕ್ವಾಡ್ ಕ್ಯಾಮರಾವನ್ನು ಒಳಗೊಂಡಿದ್ದು, 64MP ಪ್ರಾಥಮಿಕ ಕ್ಯಾಮರಾವನ್ನು ಹಾಗೂ 8 MP ಸೆಕೆಂಡರಿ ಕ್ಯಾಮರಾವನ್ನು ಕಾಣಬಹುದಾಗಿದೆ. ಈ ಕ್ಯಾಮರಾದಲ್ಲಿ 123 ಡಿಗ್ರಿ ಅಲ್ಟ್ರಾ ವೈಡ್ ಸೌಲಭ್ಯವಿದ್ದು, 5MP ಯ ಇನ್ನೊಂದು ಕ್ಯಾಮರಾವನ್ನು ಈ ಸ್ಮಾರ್ಟ್ ಪೋನಿನ ಹಿಂಬದಿಯಲ್ಲಿ ಕಾಣಬಹುದಾಗಿದೆ. ಇನ್ನು  ಮುಂಭಾಗದಲ್ಲಿ ಒಟ್ಟು 20MP ಸೆಲ್ಫಿ ಕ್ಯಾಮರಾವನ್ನು ಇದು ಒಳಗೊಂಡಿದೆ.

Advertisement

ಇದನ್ನೂ ಓದಿ:291 ಕ್ಷೇತ್ರದಲ್ಲಿ ಸ್ಪರ್ಧೆ; 25 ಹಾಲಿ ಶಾಸಕರು ಮತ್ತು ಸಚಿವರಿಗೆ ಟಿಕೆಟ್ ನಿರಾಕರಿಸಿದ ಮಮತಾ!

ಸ್ಟೋರೇಜ್ ಮತ್ತು ಬೆಲೆ

ಸ್ಯಾಮ್ ಸಂಗ್ ಗ್ಯಾಲಕ್ಸಿ A 32   6 GB RAM ಮತ್ತು 128 GB ಸ್ಟೋರೇಜ್ ಅನ್ನು ಒಳಗೊಂಡಿದ್ದು, ಇದರೊಂದಿಗೆ 1 TB ವರೆಗೆ SD card ಮೂಲಕ ಸ್ಟೋರೇಜ್ ಅನ್ನು ಹೆಚ್ಚಿಸಿಕೊಳ್ಳುವ ಸೌಲಭ್ಯವನ್ನು ನೀಡಲಾಗಿದೆ. ಇದರ ಬೆಲೆ 21,999 ಎಂದು ನಿಗದಿಪಡಿಸಲಾಗಿದ್ದು, HDFC ಬ್ಯಾಂಕಿನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರಿಗೆ 2,000 ರೂ. ವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ.

ಬಣ್ಣಗಳ ಲಭ್ಯತೆ

ಈ ಮೋಬೈಲ್ ಪೋನ್ ಒಟ್ಟು ನಾಲ್ಕು ರೀತಿಯ ಬಣ್ಣಗಳಲ್ಲಿ ಬಳಕೆದಾರರಿಗೆ ಸಿಗಲಿದ್ದು, ಬಿಳಿ, ಕಪ್ಪು,ನೀಲಿ, ಹಾಗೂ ನೇರಳೆ ಬಣ್ಣಗಳಲ್ಲಿ ಲಭ್ಯವಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next