ಮುಂಬೈ: ಸ್ಯಾಮ್ಸಂಗ್ ಕಂಪನಿ ತನ್ನ ಅತ್ಯಾಕರ್ಷಕ ಗೆಲಾಕ್ಸಿ ಎ31 ಮೊಬೈಲನ್ನು ಭಾರತದ ಮಾರುಕಟ್ಟೆಗೆ ಜೂ.4ರಂದು ಬಿಡಲಿದೆ. ಸದ್ಯ ಲಭ್ಯವಿರುವ ಮೊಬೈಲ್ ಲಕ್ಷಣಗಳನ್ನು ನೋಡಿದರೆ, ಗ್ರಾಹಕರು ಮುಗಿ ಬೀಳುವುದು ಖಚಿತ ಎನ್ನುವಂತಿದೆ. ಮೊಬೈಲ್ ಮುಂದಿನ ಪರದೆ 6.4 ಇಂಚು ಇರಲಿದೆ. ಪೂರ್ಣವಾಗಿ ಎಚ್‌ಡಿ ಗುಣಮಟ್ಟದಲ್ಲಿ ವಿಡಿಯೊ ಗಳನ್ನು ವೀಕ್ಷಿಸಬಹುದು. 4 ಜಿಬಿ ಅಥವಾ 6 ಜಿಬಿ ರ್ಯಾಮ್ ಹೊಂದಿರಲಿದೆ. ಮೊಬೈಲ್‌ನಲ್ಲಿ 64ರಿಂದ 128 ಜಿಬಿಯಷ್ಟು ಸಂಗ್ರಹಿಸಲು ಸಾಧ್ಯವಾಗುವ ನಿರೀಕ್ಷೆಯಿದೆ. ಅದೇ ಎಸ್‌ಡಿ ಬಳಸಿದರೆ, ಈ ಪ್ರಮಾಣ ವನ್ನು 512 ಜಿಬಿ ವಿಸ್ತರಿಸಬಹುದು! ಅಂದರೆ ಒಂದು ಲ್ಯಾಪ್‌ಟಾಪ್‌ನ ಸಾಮರ್ಥಯ ಈ ಮೊಬೈಲ್‌ಗಿರುತ್ತದೆ. ಇನ್ನು ಕ್ಯಾಮೆರಾ ವಿಚಾರಕ್ಕೆ ಬಂದರೆ, ಹಿಂಭಾಗದಲ್ಲಿ ನಾಲ್ಕು ಕ್ಯಾಮೆರಾಗಳಿರಲಿವೆ. 48 ಎಂಪಿ, 8 ಎಂಪಿ, ತಲಾ 5 ಎಂಪಿಯ ಇನ್ನೆರಡು ಕ್ಯಾಮೆರಾಗಳಿರುತ್ತವೆ. ಆದರೆ ಮುಂಭಾಗದ ಕ್ಯಾಮೆರಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಮೂಲಗಳ
ಪ್ರಕಾರ ಮುಂಭಾಗದ ಕ್ಯಾಮೆರಾ ಸಾಮರ್ಥಯ 20 ಎಂಪಿ ಇರಲಿದೆ. ಬೆಲೆ 23 ಸಾವಿರ ರೂ.