Advertisement
ಐಐಎಂ ಬೆಂಗಳೂರಿನ ಟೀಮ್ ಟ್ರಾನ್ಸೆಂಡೆನ್ಸ್‌ನ ಶ್ರೇಯಸ್ ಎಸ್, ಅಮೃತಾ ಸಿಂಗ್ ಮತ್ತು ಶಿಂಧೆ ಚೈತನ್ಯ ಶರದ್ ಮೊದಲ ಬಹುಮಾನವನ್ನು ಗಳಿಸಿದ್ದಾರೆ. ಭಾರತದಲ್ಲಿ ಐಒಟಿ ಸಾಧನಗಳನ್ನು ಗ್ರಾಹಕರು ಅಳವಡಿಸಿಕೊಳ್ಳಲು ನೆರವಾಗುವ ಪರಿಹಾರೋಪಾಯಗಳನ್ನು ಈ ವಿಜೇತರು ಪ್ರಸ್ತುತಪಡಿಸಿದ್ದಾರೆ. ಇದು ಜ್ಯೂರಿಗೆ ಹೆಚ್ಚು ಮೆಚ್ಚುಗೆಯಾಗಿದ್ದು, 4.5 ಲಕ್ಷ ರೂ. ನಗದು ಬಹುಮಾನವನ್ನು ಗೆದ್ದುಕೊಂಡಿದೆ. ಸ್ಯಾಮ್‌ಸಂಗ್‌ನ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳು ಇದರಲ್ಲಿವೆ.
Related Articles
Advertisement
ಕಳೆದ ಎರಡು ವರ್ಷಗಳಿಂದ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತಿತ್ತು. ಆದರೆ, 2022 ಆವೃತ್ತಿಯ ಸ್ಯಾಮ್‌ಸಂಗ್ E.D.G.E. ಅನ್ನು ಭೌತಿಕವಾಗಿ ನಡೆಸಲಾಯಿತು. ಗುರುಗ್ರಾಮದಲ್ಲಿ ನಡೆದ ಫಿನಾಲೆಯಲ್ಲಿ ಸ್ಯಾಮ್‌ಸಂಗ್ ಸೌತ್‌ವೆಸ್ಟ್ ಏಷ್ಯಾದ ಅಧ್ಯಕ್ಷರು ಮತ್ತು ಸಿಇಒ ಕೆನ್ ಕಾಂಗ್ ಭಾಗವಹಿಸಿದ್ದರು ಮತ್ತು ಸ್ಯಾಮ್‌ಸಂಗ್ ಇಂಡಿಯಾದ ಇತರ ಹಿರಿಯ ನಾಯಕರು ಭಾಗವಹಿಸಿದ್ದರು.
2 ತಿಂಗಳ ಕಾರ್ಯಕ್ರಮವನ್ನು ಮೂರು ಸುತ್ತಿನ ಕಟ್ಟುನಿಟ್ಟಿನ ಮೌಲ್ಯಮಾಪನದ ಮೂಲಕ ನಡೆಸಲಾಗುತ್ತದೆ. ಈ ವರ್ಷ 27 ಕಾಲೇಜುಗಳ 2700 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಮೌಲ್ಯಮಾಪನ ಮಾಡಿದ ನಂತರ, ಪ್ರತಿ ಕ್ಯಾಂಪಸ್‌ನಿಂದ ಒಂದು ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಅವರು ಪ್ರಕರಣ ಅಧ್ಯಯನ ನಡೆಸಿ, ವಿವರವಾದ ಪ್ರಾತ್ಯಕ್ಷಿಕೆಗಳನ್ನು ಪ್ರಾದೇಶಿಕ ಸುತ್ತಿನಲ್ಲಿ ಪ್ರಸ್ತುತಪಡಿಸುತ್ತಾರೆ. ಈ ವರ್ಷ ಒಟ್ಟು ಒಂಬತ್ತು ತಂಡಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿತ್ತು ಮತ್ತು ರಾಷ್ಟ್ರೀಯ ಸುತ್ತಿನಲ್ಲಿ ಅಗ್ರ 3 ಸ್ಥಾನಗಳಿಗೆ ಸ್ಫರ್ಧಿಸಲು ಸ್ಯಾಮ್‌ಸಂಗ್ ಲೀಡರ್‌ಗಳು ಮಾರ್ಗದರ್ಶನ ನೀಡಿದ್ದರು.
ಇದನ್ನೂ ಓದಿ : ಲಾವಾದಿಂದ ಅಗ್ಗದ ದರದ ಹೊಸ ಫೋನ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?