Advertisement

ಸ್ಯಾಮ್ಸನ್‌ ಸೆಂಚುರಿ; ಡೆಲ್ಲಿ ಜಯಭೇರಿ

03:47 PM Apr 12, 2017 | Team Udayavani |

ಪುಣೆ: ಸಂಜು ಸ್ಯಾಮ್ಸನ್‌ ಅವರ ಪ್ರಚಂಡ ಶತಕ ಸಾಹಸದಿಂದ ಪುಣೆ ವಿರುದ್ಧ ಮಂಗಳವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ 97 ರನ್ನುಗಳ ಜಯಭೇರಿ ಮೊಳಗಿಸಿದೆ. ಪುಣೆ ತವರಿನಂಗಳದಲ್ಲಿ ಮೊದಲ ಸೋಲನುಭವಿಸಿದೆ.

Advertisement

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಡೆಲ್ಲಿ 4 ವಿಕೆಟಿಗೆ 205 ರನ್‌ ಪೇರಿಸಿ ಸವಾಲೊಡ್ಡಿದರೆ, ಪುಣೆ ತೀವ್ರ ಕುಸಿತ ಅನುಭವಿಸಿ 16.1 ಓವರ್‌ಗಳಲ್ಲಿ 108 ರನ್ನಿಗೆ ಆಲೌಟ್‌ ಆಯಿತು. ಸ್ಟೀವನ್‌ ಸ್ಮಿತ್‌ ಗೈರಲ್ಲಿ ಅಜಿಂಕ್ಯ ರಹಾನೆ ಪುಣೆ ನಾಯಕತ್ವ ವಹಿಸಿದ್ದರು.
ಆರಂಭಕಾರ ಆದಿತ್ಯ ತಾರೆ ಖಾತೆ ತೆರೆಯದೆ ದ್ವಿತೀಯ ಓವರಿನಲ್ಲಿ ಪೆವಿಲಿಯನ್‌ ಸೇರಿದ ಬಳಿಕ ಕ್ರೀಸಿಗೆ ಇಳಿದ ಸ್ಯಾಮ್ಸನ್‌ ಪುಣೆ ಬೌಲರ್‌ಗಳ ಮೇಲೆ ಘಾತಕವಾಗಿ ಎರಗಿದರು. 63 ಎಸೆತಗಳಿಂದ 102 ರನ್‌ ಬಾರಿಸಿ ವಿಜೃಂಭಿಸಿದರು. ಇದು ಐಪಿಎಲ್‌ನಲ್ಲಿ ಸ್ಯಾಮ್ಸನ್‌ ಬಾರಿಸಿದ ಮೊದಲ ಶತಕ. ಸಿಡಿಸಿದ್ದು 5 ಸಿಕ್ಸರ್‌ ಹಾಗೂ 8 ಬೌಂಡರಿ.ಇದು 10ನೇ ಐಪಿಎಲ್‌ನಲ್ಲಿ ದಾಖಲಾದ ಮೊದಲ ಸೆಂಚುರಿಯೂ ಆಗಿದೆ.

ಆರ್‌ಸಿಬಿ ವಿರುದ್ಧ ಮಿಂಚಿದ ರಿಷಬ್‌ ಪಂತ್‌ ತಮ್ಮ ಆಕರ್ಷಕ ಪ್ರದರ್ಶನವನ್ನು ಮುಂದುವರಿಸಿ 22 ಎಸೆತ ಗಳಿಂದ 31 ರನ್‌ ಹೊಡೆದರು (2 ಸಿಕ್ಸರ್‌, 1 ಬೌಂಡರಿ). ಸ್ಯಾಮ್‌ ಬಿಲ್ಲಿಂಗ್ಸ್‌ 24 ರನ್‌ ಗಳಿಸಿೆದರು. ಪಂತ್‌-ಬಿಲ್ಲಿಂಗ್ಸ್‌ ದ್ವಿತೀಯ ವಿಕೆಟಿಗೆ 69 ರನ್‌ ಒಟ್ಟುಗೂಡಿಸಿದರು.

ಕೊನೆಯ ಹಂತದಲ್ಲಿ ಸಿಡಿದು ನಿಂತ ಕ್ರಿಸ್‌ ಮಾರಿಸ್‌ ಕೇವಲ 9 ಎಸೆತಗಳಿಂದ 38 ರನ್‌ ಸೂರೆಗೈದು ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಮಾರಿಸ್‌ ಬ್ಯಾಟಿನಿಂದ 4 ಬೌಂಡರಿ, 3 ಸಿಕ್ಸರ್‌ ಸಿಡಿಯಿತು. 
ದೊಡ್ಡ ಮೊತ್ತವನ್ನು ಕಂಡೇ ಬೆದರಿದಂತೆ ಆಡಿದ ಪುಣೆ ಯಾವ ಹಂತದಲ್ಲೂ ಹೋರಾಟ ಪ್ರದರ್ಶಿಸಲಿಲ್ಲ. 20 ರನ್‌ ಮಾಡಿದ ಆರಂಭಕಾರ ಮಾಯಾಂಕ್‌ ಅಗರ್ವಾಲ್‌ ಅವರದೇ ಹೆಚ್ಚಿನ ಗಳಿಕೆ.

ಡೆಲ್ಲಿ ಪರ ಅಮಿತ್‌ ಮಿಶ್ರಾ 11 ರನ್ನಿಗೆ 3 ಹಾಗೂ ನಾಯಕ ಜಹೀರ್‌ ಖಾನ್‌ 20 ರನ್ನಿಗೆ 3 ವಿಕೆಟ್‌ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು. ನದೀಂ ಹಾಗೂ ಮಾರಿಸ್‌ ಒಂದೊಂದು ವಿಕೆಟ್‌ ಸಂಪಾದಿಸಿದರು. ಶತಕವೀರ ಸಂಜು ಸ್ಯಾಮ್ಸನ್‌ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

Advertisement

ಸ್ಕೋರ್‌ ಪಟ್ಟಿ
ಡೆಲ್ಲಿ ಡೇರ್‌ಡೆವಿಲ್ಸ್‌

ಆದಿತ್ಯ ತಾರೆ    ಸಿ ಧೋನಿ ಬಿ ಚಹರ್‌    0
ಸ್ಯಾಮ್‌ ಬಿಲ್ಲಿಂಗ್ಸ್‌    ಬಿ ತಾಹಿರ್‌    24
ಸಂಜು ಸ್ಯಾಮ್ಸನ್‌    ಬಿ ಝಂಪ    102
ರಿಷಬ್‌ ಪಂತ್‌    ರನೌಟ್‌    31
ಕೋರಿ ಆ್ಯಂಡರ್ಸನ್‌    ಔಟಾಗದೆ    2
ಕ್ರಿಸ್‌ ಮಾರಿಸ್‌    ಔಟಾಗದೆ    38
ಇತರ         8
ಒಟ್ಟು  (20 ಓವರ್‌ಗಳಲ್ಲಿ 4 ವಿಕೆಟಿಗೆ)    205
ವಿಕೆಟ್‌ ಪತನ:
1-2, 2-71, 3-124, 4-166.
ಬೌಲಿಂಗ್‌:

ಶೋಕ್‌ ದಿಂಡ    3-0-36-0
ದೀಪಕ್‌ ಚಹರ್‌        3-0-35-1
ಬೆನ್‌ ಸ್ಟೋಕ್ಸ್‌        4-0-41-0
ಇಮ್ರಾನ್‌ ತಾಹಿರ್‌        4-0-24-1
ಆ್ಯಡಂ ಝಂಪ        4-0-45-1
ರಜತ್‌ ಭಾಟಿಯ        2-0-21-0

ರೈಸಿಂಗ್‌ ಪುಣೆ ಸೂಪರ್‌ಜೈಂಟ್‌
ಆಜಿಂಕ್ಯ ರಹಾನೆ    ಸಿ ಸ್ಯಾಮ್ಸನ್‌ ಬಿ ಜಹೀರ್‌    10
ಎಂ. ಅಗರ್ವಾಲ್‌    ಸಿ ಮಾರಿಸ್‌ ಬಿ ಜಹೀರ್‌    20
ಫಾ ಡು ಪ್ಲೆಸಿಸ್‌    ಸಿ ಪಂತ್‌ ಬಿ ನದೀಂ    8
ರಾಹುಲ್‌ ತ್ರಿಪಾಠಿ    ಸಿ ನದೀಂ ಬಿ ಮಾರಿಸ್‌    10
ಬೆನ್‌ ಸ್ಟೋಕ್ಸ್‌    ಸಿ ಪಂತ್‌ ಬಿ ಕಮಿನ್ಸ್‌    2
ಎಂ.ಎಸ್‌. ಧೋನಿ    ಸಿ ನಾಯರ್‌ ಬಿ ಮಿಶ್ರಾ    11
ರಜತ್‌ ಭಾಟಿಯ    ಸಿ ಮಾರಿಸ್‌ ಬಿ ಮಿಶ್ರಾ    16
ದೀಪಕ್‌ ಚಹರ್‌    ಸಿ ಪಂತ್‌ ಬಿ ಜಹೀರ್‌    14
ಆ್ಯಡಂ ಝಂಪ    ಸಿ ಸ್ಯಾಮ್ಸನ್‌ ಬಿ ಮಿಶ್ರಾ    5
ಅಶೋಕ್‌ ದಿಂಡ    ಸಿ ಮಿಶ್ರಾ ಬಿ ಕಮಿನ್ಸ್‌    7
ಇಮ್ರಾನ್‌ ತಾಹಿರ್‌    ಔಟಾಗದೆ    0
ಇತರ         5
ಒಟ್ಟು  (16.1 ಓವರ್‌ಗಳಲ್ಲಿ ಆಲೌಟ್‌)    108
ವಿಕೆಟ್‌ ಪತನ:
1-24, 2-34, 3-49, 4-52, 5-54, 6-79, 7-94,  8-100, 9-107.
ಬೌಲಿಂಗ್‌:

ಶಾಬಾಜ್‌ ನದೀಂ    4-0-23-1
ಪ್ಯಾಟ್‌ ಕಮಿನ್ಸ್‌        3.1-0-24-2
ಜಹೀರ್‌ ಖಾನ್‌        3-0-20-3
ಕ್ರಿಸ್‌ ಮಾರಿಸ್‌        2-0-19-1
ಕೋರಿ ಆ್ಯಂಡರ್ಸನ್‌        1-0-10-0
ಅಮಿತ್‌ ಮಿಶ್ರಾ        3-0-11-3

ಪಂದ್ಯಶ್ರೇಷ್ಠ: ಸಂಜು ಸ್ಯಾಮ್ಸನ್‌

Advertisement

Udayavani is now on Telegram. Click here to join our channel and stay updated with the latest news.

Next