ಮುಂಬಯಿ : ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸಿರುವ “ಸಾಮ್ರಾಟ್ ಪ್ರಥ್ವಿರಾಜ್” ಚಿತ್ರವನ್ನು ಅರಬ್ ರಾಷ್ಟ್ರಗಳಾದ ಕುವೈತ್ ಮತ್ತು ಒಮಾನ್‌ನಲ್ಲಿ ನಿಷೇಧಿಸಲಾಗಿದೆ ಮತ್ತು ಕತಾರ್‌ನಲ್ಲಿ ತಡೆಹಿಡಿಯಲಾಗಿದೆ ಎಂದು ಐಎಎನ್‌ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
”ಸಾಮ್ರಾಟ್ ಪೃಥ್ವಿರಾಜ್” ನಿರ್ಭೀತ ಮತ್ತು ಬಲಿಷ್ಠ ರಾಜ ”ಪೃಥ್ವಿರಾಜ್ ಚೌಹಾಣ್” ಅವರ ಜೀವನ ಮತ್ತು ಶೌರ್ಯವನ್ನು ಆಧರಿಸಿದೆ. ಅಕ್ಷಯ್ ಆ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಈ ವರದಿಯ ಬೆನ್ನಲ್ಲೇ, ಅರಬ್ ದೇಶಗಳಲ್ಲಿ ಚಿತ್ರವನ್ನು ಅನಗತ್ಯವಾಗಿ ಧಾರ್ಮಿಕ ಮಸೂರದಿಂದ ಬಣ್ಣಿಸಲಾಗುತ್ತಿದೆ. ಇತಿಹಾಸವನ್ನು ಆಧರಿಸಿದ ಮತ್ತು ತಟಸ್ಥ ದೃಷ್ಟಿಕೋನದಿಂದ ಅಧಿಕೃತವಾಗಿರುವ ಚಲನಚಿತ್ರವನ್ನು ಜನರು ವೀಕ್ಷಿಸಬೇಕು ಎಂಬ ಅಭಿಪ್ರಾಯಗಳು ಭಾರತದಲ್ಲಿ ವ್ಯಕ್ತವಾಗಿದೆ.
ಇದನ್ನೂ ಓದಿ : ವಿಹೆಚ್‌ಪಿ ಹಾಗೂ ಭಜರಂಗದಳ ಮಂದಿರ ಚಲೋ ಕರೆ: ಶ್ರೀರಂಗಪಟ್ಟಣ ಮಸೀದಿ ಸುತ್ತ ನಿಷೇಧಾಜ್ಞೆ
ಭಾರತವನ್ನು ಮುಸಲ್ಮಾನ ಆಕ್ರಮಣಕಾರರು ಲೂಟಿ ಮಾಡಿದರು ಎಂಬ ಕಥೆ ಚಿತ್ರದಲ್ಲಿದೆ ಎಂಬ ಕಾರಣಕ್ಕೆ ಬ್ಯಾನ್ ಮಾಡಲಾಗಿದೆ ಎಂದು ಹೇಳಲಾಗಿದೆ .
ಭಾರತದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಾದ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡ ಭಾರತದ ರಾಜ್ಯಗಳಲ್ಲಿ ತೆರಿಗೆ ಮುಕ್ತ ಮಾಡಲಾಗಿದೆ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗುರುವಾರ ಲಕ್ನೋದಲ್ಲಿ ವಿಶೇಷ ಪ್ರದರ್ಶನದಲ್ಲಿ ಚಲನಚಿತ್ರವನ್ನು ವೀಕ್ಷಿಸಿ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸಿದರು.