Advertisement
ಆ. 6ರಂದು ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ ಶ್ರೀಗಳು ಮೆರವಣಿಗೆಯಲ್ಲಿ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರಕ್ಕೆ ತೆರಳಲಿದ್ದಾರೆ ಎಂದರು.
ಚಾತುರ್ಮಾಸ್ಯದ ವಿಶೇಷವಾಗಿ ದೇವಾಲಯದಲ್ಲಿ ಪೂರ್ಣಮಂಡಲ ಶ್ರೀಚಕ್ರ ಪೂಜೆ, ಲಕ್ಷ ಕುಂಕುಮಾರ್ಚನೆ, ಲಕ್ಷ ತುಳಸಿ ಅರ್ಚನೆ, ಧನ್ವಂತರಿ ಹೋಮ ಸಹಿತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ದಿನ ಸಂಜೆ ಸಭಾ ಕಾರ್ಯಕ್ರಮ, ಸಮಾಜದ ವಿಶೇಷ ವ್ಯಕ್ತಿಗಳಿಗೆ ಸಮ್ಮಾನ, ಪುತ್ತೂರು ಆಸುಪಾಸಿನ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯಗಳು ನಡೆಯಲಿವೆ ಎಂದರು. ದೇವಾಲಯ ಭೇಟಿ ವಿಶೇಷ
ಚಾತುರ್ಮಾಸ್ಯದ ಅವಧಿಯಲ್ಲಿ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಪ್ರತಿ ದಿನ ಬೆಳಗ್ಗೆ 8.30ರಿಂದ 9 ಗಂಟೆಯ ಅವಧಿಯಲ್ಲಿ ಪುತ್ತೂರು ತಾಲೂಕಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ಸಂಜೆ ಪಾದಪೂಜೆಗೆ ಭಕ್ತರ ಮನೆಗಳಿಗೆ ತೆರಳಿದ್ದಾರೆ. ಸ್ವಾಮೀಜಿಯವರ ಪಾದಪೂಜೆ ಮತ್ತು ಭಿಕ್ಷಾ ಸೇವೆಗೆ ಸರ್ವ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿನಿತ್ಯ ಮಧ್ಯಾಹ್ನ ಹಾಗೂ ರಾತ್ರಿ ನಡೆಯುವ ಅನ್ನಸಂತರ್ಪಣೆಗೆ ಭಕ್ತರಿಂದ ಹೊರೆಕಾಣಿಕೆಯನ್ನು ಸ್ವೀಕರಿಸಲಾಗುತ್ತದೆ ಎಂದರು.
Related Articles
50 ದಿನಗಳ ಚಾತುರ್ಮಾಸ್ಯ ಮಹೋತ್ಸವದಲ್ಲಿ ನಾಗರ ಪಂಚಮಿ, ಗಣೇಶ ಚತುರ್ಥಿ, ರಾಘವೇಂದ್ರ ಸ್ವಾಮಿ ಆರಾಧನೆ, ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಕ್ಷೇತ್ರದಲ್ಲಿ ವಿಶೇಷತೆ ಪಡೆದುಕೊಳ್ಳಲಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿಯವರ ಮೂಲಕ ಶ್ರೀ ಕೃಷ್ಣನಿಗೆ ಅರ್ಘ್ಯ ಹಾಕಲು ಭಕ್ತರಿಗೆ ಅವಕಾಶವಿದೆ. ಅಂದು ರಾತ್ರಿ ಉಡುಪಿಯಲ್ಲಿ ಆಚರಣೆಯಲ್ಲಿರುವಂತೆ ಕೊಟ್ಟಿಗೆ, ಚಕ್ಕುಲಿಗಳೊಂದಿಗೆ ಹಬ್ಬದ ಆಚರಣೆ ನಡೆಯಲಿದೆ ಎಂದು ಪ್ರೀತಂ ಪುತ್ತೂರಾಯ ತಿಳಿಸಿದರು.
Advertisement