ಕೋಲಾರ: ತಾಲೂಕಿನ ದೊಡ್ಡಹಸಾಳ ಗ್ರಾಮದ ಭೂಪತಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಿ.ಕೆ.ರವಸಂಘದ ಸದಸ್ಯರಾಗಿದ್ದು, ಇವರು ಯೋಜನೆ ಮೂಲಕ ತಮ್ಮ ಕುಟುಂಬಕ್ಕೆ ಸಂಪೂರ್ಣ ಸುರಕ್ಷಾ (ಆರೋಗ್ಯ ವಿಮೆ) ಮಾಡಿಸಿ ಪ್ರಯೋಜನ ಪಡೆದುಕೊಂಡಿದ್ದಾರೆ.
ತಂದೆ ಅಶ್ವತ್ಥ್ ನಾರಾಯಣ ಎಂಬುವರಿಗೆ ಒಂದು ತಿಂಗಳ ಹಿಂದೆ ಆಕಸ್ಮಿಕವಾಗಿಅಪಘಾತ ಸಂಭವಿಸಿ ಕಾಲು ಮುರಿದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಮೂಲ ದಾಖಲಾತಿ ಯೋಜನೆಯ ಸಂಪೂರ್ಣ ಸುರಕ್ಷಾ ವಿಭಾಗಕ್ಕೆ ಕಳುಹಿಸಿದ ನಂತರ ಕುಟುಂಬಕ್ಕೆ 26 ಸಾವಿರ ರೂ.ಮಂಜೂರಾಗಿದ್ದು, ಇದನ್ನು ಜಿಲ್ಲಾ ನಿರ್ದೇಶಕ ಜೆ.ಚಂದ್ರಶೇಖರ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇವರು, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸಂಪೂರ್ಣ ಸುರಕ್ಷಾ ಕಾರ್ಯಕ್ರಮವನ್ನು 2004 ರಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರುಅನುಷ್ಠಾನಕ್ಕೆ ತಂದು ನಮ್ಮ ಸಂಘದ ಸದಸ್ಯರಕುಟುಂಬಕ್ಕೆ ಇದನ್ನು ಮಾಡಿಸುವ ಅವಕಾಶ ನೀಡಿದ್ದಾರೆ.
ಇದರ ಉದ್ದೇಶ ಸುರಕ್ಷಾ ಮಾಡಿಸಿದ ನಂತರ ಒಂದು ವರ್ಷದಲ್ಲಿ ಆಕಸ್ಮಿಕವಾಗಿ ಬಂದಂತಹ ಕಾಯಿಲೆ ಮತ್ತು ಅಪಘಾತಕ್ಕೊಳಗಾದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಕುಂಠಿತವಾಗಿ ಕುಟುಂಬವು ಆರ್ಥಿಕಸಂಕಷ್ಟ ಸಿಲುಕುತ್ತದೆ. ಇದನ್ನು ತಪ್ಪಿಸಲುಸಂಪೂರ್ಣ ಸುರಕ್ಷಾ ಕಾರ್ಯಕ್ರಮ ಅವಶ್ಯಕ ಎಂದು ತಿಳಿಸಿದರು.
ಪ್ರಸ್ತುತ ವರ್ಷದಲ್ಲಿ ಜಿಲ್ಲೆಯಲ್ಲಿ ಸುರಕ್ಷ ಕಾರ್ಯಕ್ರಮ ಅನುಷ್ಠಾನ ಮಾಡಿದ್ದು.ಮುಂದಿನ ಸಾಲಿಗೆ ಜಿಲ್ಲಾದ್ಯಂತ ಸಂಪೂರ್ಣಸುರಕ್ಷಾ ಕಾರ್ಯಕ್ರಮದ ಬಗ್ಗೆ ಅರಿವುಮೂಡಿಸಿದ್ದೇವೆ. ಹೆಚ್ಚು ಸುರಕ್ಷಾ ನೋಂದಣಿ ಮಾಡಿ ಜಿಲ್ಲೆಯಲ್ಲಿ ಸೌಕರ್ಯವಿರುವ ಕೆಲವು ಆಸ್ಪತ್ರೆ ಆಯ್ಕೆ ಮಾಡಿ ನಮ್ಮ ಯೋಜನೆಯುಜಂಟಿಯಾಗಿ ಸುರಕ್ಷಾ ಮಾಡಿಸಿದಕುಟುಂಬಕ್ಕೆ ಹಣ ಪಾವತಿಸಿದೆ. ಪ್ಯಾಕೇಜ್‌ಆಧಾರದಲ್ಲಿ ಸೇವೆ ನೀಡಲು ಅನುವುಮಾಡಿಕೊಡಲಾಗುವುದು ಎಂದು ತಿಳಿಸಿದರು.
ತಾಲೂಕು ಯೋಜನಾಧಿಕಾರಿ ಎಸ್. ಚಂದ್ರಶೇಖರ್, ವಲಯ ಮೇಲ್ವಿಚಾರಕ ಸಿ.ಹರೀಶ್ ಕುಮಾರ್ ಜಿಲ್ಲಾ ಕಚೇರಿ ಸಿಬ್ಬಂದಿ ಹಾಜರಿದ್ದರು.