Advertisement
ಸುಮಾರು 35 ಸಾವಿರ ರೂ. ವೆಚ್ಚದಿಂದ ನಿರ್ಮಾಣಗೊಂಡಿದ್ದು ಜಿಲ್ಲಾಡಳಿತದ ಆದೇಶದ ಮೇರೆಗೆ ಪ್ರತಿ ತಾಲೂಕಿಗೆ ಒಂದು ಬೂತ್ ನೀಡಲಾಗುತ್ತಿದೆ. ಬೆಳ್ತಂಗಡಿ ಸಾರ್ವ ಜನಿಕ ಆಸ್ಪತ್ರೆಯಲ್ಲೂ ಕೋವಿಡ್-19 ಸೋಂಕಿತ ವ್ಯಕ್ತಿಯ ಗಂಟಲು ದ್ರವ ಸಂಗ್ರಹ (ಕಿಯೋಸ್ಕ್) ನಾಳೆಯಿಂದಲೇ ಆರಂಭವಾಗಲಿದೆ. ಸೋಂಕಿತ ವ್ಯಕ್ತಿ ಮತ್ತು ವೈದ್ಯರ ನೇರ ಸಂಪರ್ಕ ತಡೆಯಲು ಉತ್ತಮ ವಿಧಾನವಾಗಿದೆ ಎಂದು ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜೇಂದ್ರ ಕಲಾºವಿ ತಿಳಿಸಿದರು.
ಪುತ್ತೂರು ಸರಕಾರಿ ಆಸ್ಪತ್ರೆಗೂ ವಾಕ್ ಇನ್ ಸ್ಯಾಂಪಲ್ ಕಲೆಕ್ಷನ್ ಕಿಯೋಸ್ಕ್ಸ್ (ವಿಸ್ಕ್) ಟೆಸ್ಟಿಂಗ್ ಮೆಷಿನ್ ಲಭಿಸಿದ್ದು, ಗುರುವಾರದಿಂದ ಇಲ್ಲಿ ಪರೀಕ್ಷೆ ಆರಂಭಗೊಳ್ಳಲಿದೆ. ಕೋವಿಡ್-19 ಸೋಂಕು ಶಂಕಿತ ವ್ಯಕ್ತಿಯ ಗಂಟಲ ದ್ರವವನ್ನು ಸಂಗ್ರಹಿಸಲಾಗುವುದು.