Advertisement

ಕಳೆದ 30 ವರ್ಷಗಳಿಂದ ಟಾಯ್ಲೆಟ್‌ನಲ್ಲೇ ಸಮೋಸ ತಯಾರಿ!

09:31 AM Apr 27, 2022 | Team Udayavani |

ದುಬೈ: ಕಳೆದ 30 ವರ್ಷಗಳಿಂದ ಶೌಚಾಲಯದಲ್ಲೇ ಸಮೋಸ ಮತ್ತಿತರ ತಿನಿಸು ತಯಾರಿಸುತ್ತಿದ್ದ ಹೋಟೆಲ್‌ಗೆ ಸೌದಿ ಅರೇಬಿಯಾದ ಅಧಿಕಾರಿಗಳು ಬೀಗ ಜಡಿದಿದ್ದಾರೆ.

Advertisement

ಸೌದಿಯ ಜೆದ್ದಾ ನಗರದಲ್ಲಿದ್ದ ಪ್ರಸಿದ್ಧ ಹೋಟೆಲ್‌ನಲ್ಲಿ ಈ ರೀತಿಯ ಅಕ್ರಮ ನಡೆಯುತ್ತಿರುವ ಬಗ್ಗೆ ಇತ್ತೀಚೆಗೆ ನಗರ ಪಾಲಿಕೆಗೆ ಮಾಹಿತಿ ಸಿಕ್ಕಿದೆ. ಕೂಡಲೇ ಅಧಿಕಾರಿಗಳು ಹೋಟೆಲ್‌ ಪರಿಶೀಲನೆ ನಡೆಸಿದ್ದಾರೆ.

ಆಗ ಹೋಟೆಲ್‌ನ ಶೌಚಾಲಯದಲ್ಲೇ ಸಮೋಸ ಮತ್ತು ಇತರ ತಿಂಡಿಗಳನ್ನು ತಯಾರಿಸುತ್ತಿರುವುದು ತಿಳಿದುಬಂದಿದೆ.

ಇದನ್ನೂ ಓದಿ:ಒಂದು ವೇಳೆ ಜನರು ನಾರಾಯಣ ಗುರುಗಳ ಸಂದೇಶ ಪಾಲಿಸಿದ್ದರೆ ದೇಶದಲ್ಲಿ ಒಗ್ಗಟ್ಟು: ಪ್ರಧಾನಿ ಮೋದಿ

ಹಾಗೆಯೇ ಹೋಟೆಲ್‌ನಲ್ಲಿ ಈಗಾಗಲೇ ಅವಧಿ ಮುಗಿದಿರುವ ಮಾಂಸ, ಚೀಸ್‌ಗಳನ್ನೂ ಬಳಸುತ್ತಿರುವುದು ಗೊತ್ತಾಗಿದೆ. ಅಲ್ಲಿ ತಿನಿಸು ತಯಾರಿಸುತ್ತಿದ್ದ ಯಾರಿಗೂ ಆರೋಗ್ಯ ಕಾರ್ಡ್‌ ಇಲ್ಲದಿರುವ ವಿಚಾರವೂ ಹೊರಬಿದ್ದಿದೆ. ಹೋಟೆಲ್‌ ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆ ಅದನ್ನು ಮುಚ್ಚಿಸಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next