Advertisement

ಬರ್ಗರ್‌ಗಿಂತ ಸಮೋಸಾ ವಾಸಿ

08:05 AM Nov 29, 2017 | Team Udayavani |

ನವದೆಹಲಿ: ತಿನ್ನೋದಾದರೆ ಸಮೋಸಾ ತಿನ್ನಿ, ಇದು ನಿಮ್ಮ ದೇಹದಲ್ಲಿ ಒಂದಷ್ಟು ಕೊಬ್ಬು ಹೆಚ್ಚಿಸಬಹುದೇ ವಿನಃ, ಅದು ಬರ್ಗರ್‌ನಂತೆ ವಿಷಕಾರಿ ಕೆಮಿಕಲ್‌ಗ‌ಳನ್ನು ತೂರಿಸುವುದಿಲ್ಲ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ ಹೇಳಿದೆ. 

Advertisement

ಸಮೋಸಾದಲ್ಲಿ ತಾಜಾ ವಸ್ತುಗಳನ್ನೇ ಬಳಕೆ ಮಾಡಲಾಗುತ್ತದೆ. ಅಲ್ಲದೆ ಪದೇ ಪದೆ ತಿನ್ನಬೇಕು ಎಂಬಂತೆ ಮಾಡುವ, ಹೊಟ್ಟೆಯಲ್ಲಿ ಉರಿ ತರಿಸುವ ಮತ್ತು ಸುವಾಸನೆ ಬರುವಂಥ ವಸ್ತುಗಳನ್ನು ಇದರಲ್ಲಿ ಬಳಕೆ ಮಾಡುವುದಿಲ್ಲ ಎಂದು ಈ ವರದಿ ಹೇಳಿದೆ. ಅಲ್ಲದೆ ಸಮೋಸಾವನ್ನು ಗೋಧಿ ಹಿಟ್ಟು,  ಜೀರಿಗೆ, ಬೇಯಿಸಿದ ಆಲೂಗಡ್ಡೆ, ಬಟಾಣಿ, ಉಪ್ಪು, ಮೆಣಸಿನಕಾಯಿ, ಮಸಾಲೆ, ತರಕಾರಿ, ಎಣ್ಣೆ ಅಥವಾ ತುಪ್ಪವನ್ನಷ್ಟೇ ಬಳಸಿ ತಯಾರಿಸ ಲಾಗುತ್ತದೆ. ಹೀಗಾಗಿ ಇದು ಅಪಾಯಕಾರಿ ಯಲ್ಲ ಎಂದು ಅಧ್ಯಯನ ವರದಿ ಹೇಳಿದೆ. 

ಆದರೆ ಬರ್ಗರ್‌ನಲ್ಲಿ ಹೆಚ್ಚು ಕಾಲ ಉಳಿ ವಂತೆ ಮಾಡುವ ರಾಸಾಯನಿಕ ಸಂರಕ್ಷಕಗಳು, ಆ್ಯಸಿಡ್‌ಕಾರಕಗಳು, ಎಮುಲ್ಫಿಯರ್‌, ಆ್ಯಂಟಿ ಆಕ್ಸಿಡೆಂಟ್‌ ಜತೆಗೆ ಗೋಧಿ ಹಿಟ್ಟು, ಸಕ್ಕರೆ, ಗೋಂದು, ಎಣ್ಣೆ, ಈಸ್ಟ್‌, ಉಪ್ಪು, ಸೋಯಾ ಪುಡಿ, ಸಾಸಿವೆ, ತರಕಾರಿ, ಮಯೋನೈಸ್‌, ಚೀಸ್‌, ಆಲೂಗಡ್ಡೆ ಪೇಸ್ಟ್‌ ಬಳಸಲಾಗುತ್ತದೆ. ಜತೆಗೆ ನೂಡಲ್ಸ್‌ಗಿಂತ ತಾಜಾ ಹಣ್ಣುಗಳಿಂದ ಮಾಡಿದ ಪೋಹಾ ಎಂಬ ರಸವೇ ಆರೋಗ್ಯಕ್ಕೆ ಒಳ್ಳೆಯದು ಎಂದಿರುವ ವರದಿ, ಬಣ್ಣ, ರುಚಿ ಹೆಚ್ಚಿಸಲು ಕೆಮಿಕಲ್‌ ಬೆರೆಸಿ ನೀಡುವ ಕಬ್ಬಿನ ರಸವೂ ಒಳ್ಳೆಯದಲ್ಲ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next