Advertisement

ಬೇಜಾರು ಮಾಡ್ಕೊಂಡ್ರು ಸಂಹಿತಾ!

02:57 PM May 20, 2022 | Team Udayavani |

ನಟಿ ಸಂಹಿತಾ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಆ ಚಿತ್ರಕ್ಕೆ “ಯಾಕೋ ಬೇಜಾರು’ ಎಂಬ ಟೈಟಲ್‌ ಇಡಲಾಗಿದೆ. ಗಾಲಿ ಲಕ್ಕಿ ಅವರ ನಿರ್ದೇಶನದ ಈ ಚಿತ್ರ.

Advertisement

ನಾಯಕಿ ಪ್ರಧಾನ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ಸಂಹಿತಾಗೆ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಅಭಿರಾನವ್‌ ಚಿತ್ರದ ನಾಯಕ. “ಯಾಕೋ ಬೇಜಾರು’ ಒಂದು ಅಪ್ಪಟ ಲವ್‌ ಸ್ಟೋರಿಯಾಗಿದ್ದು ಇಲ್ಲಿ ಅನು ಎಂಬ ಪಾತ್ರದಲ್ಲಿ ಸಂಹಿತಾ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಸವಾಲಿನ ಪಾತ್ರದಲ್ಲಿ ಮಯೂರಿ : ಅಂಧ ಪಾತ್ರದ ಮೇಲೆ ಚೆಂದದ ನಿರೀಕ್ಷೆ

ಪಾತ್ರದ ಬಗ್ಗೆ ಮಾತನಾಡುವ ಸಂಹಿತಾ, “ನಾನು ಈವರೆಗೆ ಅಭಿನಯಿಸಿದ ಚಿತ್ರಗಳಲ್ಲಿ ಹಳ್ಳಿ ಹುಡುಗಿ, ಕಾಲೇಜ್‌ ಗರ್ಲ್ ಹೀಗೆ ಎಲ್ಲಾ ಥರದ ಪಾತ್ರಗಳನ್ನು ಮಾಡಿದ್ದರೂ ಈ ಚಿತ್ರದಲ್ಲಿ ವಿಭಿನ್ನವಾದ ಪಾತ್ರವಿದೆ. ಸೀತಮ್ಮ ಬಂದ್ಲು… ಚಿತ್ರದ ನಂತರ ನಾನು ಕಾಣಿಸಿಕೊಂಡಿರುವ ಮತ್ತೂಂದು ನಾಯಕಿ ಪ್ರಧಾನ ಚಿತ್ರ ಇದಾಗಿದೆ. ಯಾಕೋ ಬೇಜಾರಾಗಿದೆ ಅಂತಾನೇ ತನ್ನ ಮನೆ ಬಿಟ್ಟು ಬಂದ ಹುಡುಗಿಯೊಬ್ಬಳು ಪ್ರೀತಿಯ ಬಲೆಯಲ್ಲಿ ಬಿದ್ದು ಏನೆಲ್ಲ ತಾಪತ್ರಯ ಅನುಭವಿಸುತ್ತಾಳೆ ಅನ್ನೋದೇ ಈ ಚಿತ್ರದ ಕಥೆ. ನಿರ್ದೇಶಕರು ಕಥೆಗೇ ಹೆಚ್ಚು ಒತ್ತು ಕೊಟ್ಟಿದ್ದಾರೆ. ಮಧ್ಯಮ ವರ್ಗದ ಹುಡುಗಿಯೊಬ್ಬಳು ಮೊದಲ ಬಾರಿಗೆ ಲವ್‌ ನಲ್ಲಿ ಬಿದ್ದಾಗ ಆಕೆಗಾದ ಅನುಭವಗಳೇನು ಎಂಬುದನ್ನು ನಿರ್ದೇಶಕರು ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಈಗಾಗಲೇ ನನ್ನ ಪಾತ್ರದ ಡಬ್ಬಿಂಗ್‌ ಕೂಡ ಮುಗಿಸಿದ್ದು, ತುಂಬಾ ಚೆನ್ನಾಗಿ ಬಂದಿದೆ’ ಎನ್ನುತ್ತಾರೆ.

ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು ಡ್ಯಾನಿಯಲ್‌ ವಿ.ಕಮಟಂ ಸಂಗೀತ ನೀಡಿದ್ದಾರೆ. ಸುಬ್ಬು ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next