Advertisement
ಸುಭಿಕ್ಷಾ ಆರ್ಗ್ಯಾನಿಕ್ ಫಾರ್ಮರ್ಸ್ ಮಲ್ಟಿಸ್ಟೇಟ್ ಕೋ ಆಪರೇಟಿವ್ ಸೊಸೈಟಿಯ ‘ಸಂಹಿತಾ’ ಮೊಬೈಲ್ ಆ್ಯಪ್ ಲೋಕಾರ್ಪಣೆ ಮಾಡಿದ ಅವರು, ಬೆಳೆಗಾರರಿಂದ ಹಿಡಿದು ಬಳಕೆದಾರರವರೆಗಿನ ಬೇರೆ ಬೇರೆ ಕೊಂಡಿಗಳನ್ನು ಸೇರಿಸುವ ಕೆಲಸ ಖಾಸಗಿ ಕ್ಷೇತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಆದರೆ ಈ ಕೆಲಸ ಸಹಕಾರ ವಲಯಕ್ಕೂ ವಿಸ್ತರಣೆಯಾಗಬೇಕು ಎಂದರು.
Related Articles
Advertisement
ಸುಸ್ಥಿರ ಕೃಷಿಗಾಗಿ ಮೂರು ದಶಕಗಳ ಹೋರಾಟದಲ್ಲಿ ಭೂಮಿಗೆ ವಿಷ ಹಾಕದೆ ಬೆಳೆಯುವುದು ಮುಖ್ಯ ಎನ್ನುವ ಬಗ್ಗೆ ಅರಿವು ಮೂಡಿಸಿದೆವು. ಆದರೆ ಹಾಗೆ ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡುವುದು ಹೇಗೆ ಎನ್ನುವುದನ್ನು ನಾವು ಹೇಳಿಕೊಡಲು ಆಗಲಿಲ್ಲ. ಈ ಕೊರತೆ ತುಂಬುವುದಕ್ಕಾಗಿ ಈ ಸಂಸ್ಥೆ ಹುಟ್ಟು ಹಾಕಲಾಯಿತು. ಆದರೆ ಕೊರೋನಾದಿಂದಾಗಿ ಈ ಕಾರ್ಯ ಸ್ವಲ್ಪ ತಡವಾಯಿತು ಎಂದು ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆನಂದ ವಿವರಿಸಿದರು.
ಈ ಆ್ಯಪ್ ನ ಮೂಲಕ ಯಾವ ಕೃಷಿ ಉತ್ಪನ್ನ ಯಾವ ಹಳ್ಳಿಯ ಯಾವ ಜಮೀನಿನಲ್ಲಿ ಬೆಳೆದದ್ದು ಎನ್ನುವುದನ್ನೂ ತಿಳಿಯಬಹುದಾಗಿದೆ. ಇಲ್ಲಿ ಮಾಹಿತಿಯು ಅಷ್ಟರಮಟ್ಟಿಗೆ ಪಾರದರ್ಶಕವಾಗಿರುತ್ತದೆ. ಇಲ್ಲಿ ಕೃಷಿ ವಸ್ತುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಕೊಡಲು ಅವಕಾಶ ಇರುವುದಿಲ್ಲ. ಈಗ 3500 ಕೃಷಿಕರು ತಲಾ ಹತ್ತು ಸಾವಿರ ರೂಪಾಯಿ ಕೊಟ್ಟು ಸೊಸೈಟಿಗೆ ಷೇರುದಾರರಾಗಿದ್ದಾರೆ. ಇನ್ನೂ ಒಂದು ಲಕ್ಷ ರೈತರು ಇದರ ಷೇರುದಾರರಾಗಿ 100 ಕೋಟಿ. ಬಂಡವಾಳ ಸಂಗ್ರಹವಾಗಬೇಕು ಎಂದರು.
ಸಿನೆರ್ಜಿ ಸ್ಟ್ರಾಟೆಜಿಕ್ ಸೆಲ್ಯೂಷನ್ಸ್ ಇಂಟೆಲಿಬಾಟ್ ಟೆಕ್ನಾಲಜೀಸ್ ಸಂಸ್ಥೆ ನಿರ್ದೇಶಕ ದೀಲೀಪ ಸತ್ಯ, ಸುಭಿಕ್ಷಾ ಸಂಸ್ಥೆ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ್ ಇದ್ದರು.