Advertisement

ಉಗ್ರವಾದ ಸಮಾನ ಶತ್ರು : ಸೌದಿ ದೊರೆ, ಪ್ರಧಾನಿ ಮೋದಿ ಜಂಟಿ ಹೇಳಿಕೆ

12:30 AM Feb 21, 2019 | |

ಹೊಸದಿಲ್ಲಿ: ಭಯೋತ್ಪಾದನೆ ಮತ್ತು ಉಗ್ರವಾದ ಭಾರತ ಮತ್ತು ಸೌದಿ ಅರೇಬಿಯಾಕ್ಕೆ ಸಮಾನ ಶತ್ರುಗಳು ಎಂದು ದಿಲ್ಲಿಗೆ ಭೇಟಿ ನೀಡಿರುವ ಸೌದಿ ಅರೇಬಿಯಾದ ಭಾವೀ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಭಾರತ ಸಹಿತ ಎಲ್ಲ  ರಾಷ್ಟ್ರಗಳಿಗೆ ಭಯೋ ತ್ಪಾದನ ಕೃತ್ಯಗಳ ವಿರುದ್ಧ ಹೋರಾಟಕ್ಕೆ ಪ್ರೋತ್ಸಾಹ ನೀಡುವು ದಾಗಿ ಸಲ್ಮಾನ್‌ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಜತೆಗೆ ನಡೆ ಸಿರುವ ಮಾತುಕತೆಗಳು ಯಶಸ್ವಿಯಾಗಿವೆ ಎಂದು ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. 

Advertisement

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಬೆನ್ನಲ್ಲೇ ಸೌದಿ ದೊರೆ ಭಾರತ ಮತ್ತು ಪಾಕಿಸ್ಥಾನ ಪ್ರವಾಸ ಕೈಗೊಂಡಿದ್ದಾರೆ. ದಾಳಿಯ ಮಾರನೇ ದಿನ ಪಾಕಿಸ್ಥಾನ ಪ್ರವಾಸ ಕೈಗೊಂಡಿದ್ದ ಅವರು, ಅನಂತರ ಭಾರತಕ್ಕೆ ಆಗಮಿಸಿದ್ದಾರೆ.

ಪ್ರಧಾನಿ ಮೋದಿ ಮಾತನಾಡಿ, “ಕಳೆದ ವಾರ ಪುಲ್ವಾಮಾದಲ್ಲಿ ನಡೆದ ಬರ್ಬರ ಕೃತ್ಯ ವಿಶ್ವ ಎದುರಿಸುತ್ತಿರುವ ಅತ್ಯಂತ ಅಮಾನವೀಯ ವ್ಯವಸ್ಥೆಯ ಛಾಯೆಯಾಗಿದೆ. ಅಂಥ ಕೃತ್ಯಗಳನ್ನು ನಡೆಸುವವರ ಮತ್ತು ಬೆಂಬಲ ನೀಡು ವವರ ವಿರುದ್ಧ ಒತ್ತಡ ಹೇರಬೇಕಾಗಿದೆ’ ಎಂದು ಪಾಕಿಸ್ಥಾನದ ಹೆಸರು ಪ್ರಸ್ತಾವ ಮಾಡದೆ ಹೇಳಿದ್ದಾರೆ.

ಮೊಹಮ್ಮದ್‌ ಬಿನ್‌ ಸಲ್ಮಾನ್‌ ಮಾತನಾಡಿ, ಭಯೋತ್ಪಾದನೆ ಎರಡೂ ದೇಶಗಳ ಸಮಾನ ಶತ್ರುವಾಗಿದೆ. ಅದನ್ನು ಎದುರಿಸಲು ತಮ್ಮ ದೇಶ ಭಾರತ ಸಹಿತ ಹತ್ತಿರದ ದೇಶಗಳಿಗೆ ಸಹಕಾರ ನೀಡುತ್ತದೆ.ಗುಪ್ತಚರ ಮಾಹಿತಿ ಹಂಚಿಕೆ ಸಹಿತ ಎಲ್ಲ ವಿಚಾರಗಳಲ್ಲಿ ನೆರವು ನೀಡುತ್ತೇವೆ ಎಂದರು. 

ಮಾತುಕತೆಯೇ ಪ್ರಧಾನ 
ಭಾರತ ಮತ್ತು ಪಾಕಿಸ್ಥಾನ ನಡುವಿನ ವಿವಾದ ಪರಿಹಾರಕ್ಕೆ ಮಾತುಕತೆಯೇ ಸೂಕ್ತ. ಅದರ ಮೂಲಕವೇ ಶಾಂತಿ ಮತ್ತು ನೆಮ್ಮದಿ ಕಂಡುಕೊಳ್ಳಲು ಸಾಧ್ಯವಿದೆ ಎಂದು ಹೇಳಿದ್ದಾರೆ ಸೌದಿ ದೊರೆ.  ಎರಡೂ ದೇಶಗಳ ನಡುವೆ ಬಂಡವಾಳ ಹೂಡಿಕೆ, ವಾಣಿಜ್ಯ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. 

Advertisement

ಪ್ರಧಾನಿಯೇ ಸ್ವಾಗತಿಸಿದ್ದಕ್ಕೆ ಆಕ್ಷೇಪ
ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದಾಗಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಸೌದಿಯ ಸಲ್ಮಾನ್‌ರನ್ನು ಸ್ವಾಗತಿಸಿದ್ದಕ್ಕೆ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ. ಭಯೋತ್ಪಾದನೆಯ ನಿಯಂತ್ರಣದಲ್ಲಿ ಪಾಕಿಸ್ಥಾನ ಉತ್ತಮ ಸಾಧನೆ ಮಾಡಿದೆ ಎಂದು ಇಸ್ಲಾಮಾಬಾದ್‌ನಲ್ಲಿ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಶ್ಲಾ ಸಿದ್ದರು. ಅಂಥವರನ್ನೇಕೆ ಪ್ರಧಾನಿ ಖುದ್ದು ಸ್ವಾಗತಿಸಬೇಕು ಎಂದು ಕಾಂಗ್ರೆಸ್‌ ನಾಯಕ ರಣದೀಪ್‌ ಸುಜೇವಾಲಾ ಪ್ರಶ್ನಿಸಿದ್ದಾರೆ. ಪುಲ್ವಾಮಾದಲ್ಲಿ ಹುತಾತ್ಮರಾದವರಿಗೆ ಪ್ರಧಾನಿ ಸಲ್ಲಿಸುವ ಗೌರವ ಇದುವೇ? ರಾಷ್ಟ್ರೀಯ ಹಿತಾಸಕ್ತಿ ಮತ್ತು ಅಪ್ಪುಗೆಯ ರಾಜತಾಂತ್ರಿಕತೆ (ಹಗ್‌ಪ್ಲೋಮಸಿ)ನಡುವೆ ಪ್ರಧಾನಿಯವರು ಶಿಷ್ಟಾಚಾರ ಮೀರಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ ಸುಜೇವಾಲ.

Advertisement

Udayavani is now on Telegram. Click here to join our channel and stay updated with the latest news.

Next