Advertisement
ಎರಡನೇ ದಿನದ ಪ್ರಾರಂಭದ ನೃತ್ಯ ಪ್ರದರ್ಶನ ವಿ. ಪ್ರವಿತಾ ಅಶೋಕ್‌ರವರ ಶಿಷ್ಯೆ ಕು. ನಿಯತಿಯವರದ್ದು. ಗುರುವಿನ ಶಿಸ್ತಿನ ಪಾಠ, ಅನುಭವಗಳನ್ನು ಚೆನ್ನಾಗಿ ಈ ಬಾಲೆ ಅಲ್ಪ ಅವಧಿಯ ಪ್ರಸ್ತುತಿಯಲ್ಲಿ ಕಾಣಿಸಿಕೊಟ್ಟದ್ದು ವಿಶೇಷವಾಗಿತ್ತು. ಆ ದಿನದ ಮುಖ್ಯ ಕಾರ್ಯಕ್ರಮ ಮುಂಬಯಿಯ ಮೀರಾ ಶ್ರೀ ನಾರಾಯಣ್‌ರವರದ್ದು. ಉತ್ತಮ ಅಂಗಸೌಷ್ಠವ, ಅಭಿನಯವನ್ನು ಪ್ರತಿಫಲಿಸುವ ಮುದ್ದಾದ ಮುಖಭಾವ, ಅಚ್ಚುಕಟ್ಟಾದ ವೇಷಭೂಷಣ ಹಾಗೂ ಅತ್ಯುತ್ತಮವಾಗಿ ನೃತ್ಯಕ್ಕೆ ಸ್ಪಂದಿಸಿದ ಹಿಮ್ಮೇಳ ಕಲಾವಿದರ ಪೋಷಣೆಗಳು ಈ ಕಾರ್ಯಕ್ರಮ ಉತ್ತುಂಗಕ್ಕೇರಲು ಸಾಧ್ಯವಾಗಿಸಿದವು. ಇದರೊಂದಿಗೆ ನೃತ್ಯಾಂಗನೆಯ ಲಯದ ಬಿಗುತನ, ಅಡವುಗಳ ವಿನ್ಯಾಸದ ಸೊಗಸು, ನೃತ್ಯಬಂಧಗಳ ಆಯ್ಕೆ ಅಭಿನಯದ ಶಕ್ತಿಯೂ ಹಾಸುಹೊಕ್ಕಾಗಿ ಹೆಣೆಯಲ್ಪಟ್ಟದ್ದು ಉತ್ತಮ ರಸಾನುಭೂತಿ ಒದಗಿಸಿತು. ಧ್ರುವತಾಳದ ಅಲರಿಪು, ತೋಡಿ ರಾಗದ ರೂಪಕ ತಾಳದ ವರ್ಣ, ಸಹನಾರಾಗದ ಪದಂ, ಯಾಹೀಮಾಧವ ಅಷ್ಟಪದೀ ಹಾಗೂ ತಿಲಂಗ್‌ರಾಗದ ತಿಲ್ಲಾನಗಳು ತಮ್ಮ ಮೂಲಭೂತ ಸೌಂದರ್ಯಗಳಾದ ಅಂಗಶುದ್ಧಿ, ಮನೋಧರ್ಮದ ಸಂಚಾರಿ ಅಭಿನಯ, ನಾಯಿಕಾಭಾವಗಳ ಸ್ಪುರಣಗಳ ಅಚ್ಚುಕಟ್ಟುತನಗಳಿಂದಾಗಿ ಕಂಗೊಳಿಸಿದವು. ಹಿನ್ನೆಲೆ ಸಂಗೀತದ ಕಲಾಮಂಡಲಂನ ಮೇರುಕಲಾವಿದರ ಸಮ್ಮೇಳನವು ನೃತ್ಯದ ಪೂರ್ಣ ಯಶಸ್ಸಿಗೆ ಕಾರಣವಾಗಿ ಒಂದು ಮಾದರಿ ಹಿಮ್ಮೇಳವೆನಿಸಿದ್ದು ಹೌದು.
Advertisement
ಚುಂಬಕ ಶಕ್ತಿಯ ನೃತ್ಯ ಸಮರ್ಪಣ್
12:30 AM Feb 08, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.