Advertisement

50 ಕೋಟಿ ಜೀವನಾಂಶ ಪಡೆಯಲಿದ್ದಾರೆಯೇ ನಟಿ ಸಮಂತಾ ?

04:16 PM Sep 23, 2021 | Team Udayavani |

ಹೈದರಾಬಾದ್ : ಟಾಲಿವುಡ್ ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ಅಕ್ಕಿನೇನಿ ಅವರ ವಿಚ್ಛೇದನ ವದಂತಿಗೆ ದಿನಕ್ಕೊಂದು ಹೊಸ ರೆಕ್ಕೆ ಪುಕ್ಕ ಹುಟ್ಟಿಕೊಳ್ಳುತ್ತಿದೆ. ನಾಗ ಚೈತನ್ಯ ತಂದೆಯ ಮನೆಗೆ ವಾಪಾಸ್ ಆಗಿದ್ದು, ಸಮಂತಾ ಮುಂಬೈಗೆ ಹಾರಲು ಯೋಜನೆ ಹಾಕಿಕೊಂಡಿದ್ದಾರೆ ಎನ್ನುವ ಸುದ್ದಿಯ ಬೆನ್ನಲ್ಲೆ ಇದೀಗ ಮತ್ತೊಂದು ಹೊಸ ಮಾಹಿತಿ ಹರಿದಾಡುತ್ತಿದೆ.

Advertisement

ಸಮಂತಾ ಹಾಗೂ ನಾಗಚೈತನ್ಯ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಕಳೆದ ಒಂದೆರಡು ತಿಂಗಳುಗಳಿಂದ ಕೇಳಿ ಬರುತ್ತಿದೆ. ನಾಗಚೈತನ್ಯ ಕುಟುಂಬದವರು ಸಹ ಇವರಿಬ್ಬರ ನಡುವೆ ಸಂಧಾನ ನಡೆಸಲು ವಿಫಲಯತ್ನ ನಡೆಸಿದ್ದಾರೆ. ಆದರೆ, ಇದರ ಕುರಿತು ಈ ಜೋಡಿ ಯಾವುದೆ ಪ್ರತಿಕ್ರಿಯೆ ಇದುವರೆಗೆ ನೀಡಿಲ್ಲ. ಇದೀಗ ಮತ್ತೊಂದು ಸುದ್ದಿ ಹೊರ ಬಂದಿದ್ದು, ಪತಿಯಿಂದ ವಿಚ್ಛೇದನದ ಜೊತೆಗೆ 50 ಕೋಟಿ ರೂ. ಜೀವನಾಂಶ ಪಡೆಯಲಿದ್ದಾರೆ ಸಮಂತಾ.

ನಾಗಚೈತನ್ಯ ಹಾಗೂ ಸಮಂತಾ ಪ್ರೀತಿಸಿ ಮದುವೆಯಾದವರು. ಮದುವೆಯಾದ ಮೂರು ವರ್ಷಗಳ ಬಳಿಕ ಚನ್ನಾಗಿಯೇ ಇದ್ದ ಇವರ ದಾಂಪತ್ಯದಲ್ಲಿ ಇದೀಗ ಬಿರುಗಾಳಿ ಎದ್ದಿದೆ ಎನ್ನುವ ಮಾತು ಕೇಳಿ ಬಂದಿದೆ. ಸಮಂತಾ ಅವರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‍ಗಳಲ್ಲಿ ಅಕ್ಕಿನೇನಿ ಹೆಸರು ಕೈ ಬಿಟ್ಟ ನಂತರದ ದಿನಗಳಲ್ಲಿ ಡಿವೋರ್ಸ್ ವದಂತಿ ಬಲವಾಗಿ ಕೇಳಿ ಬಂದಿದೆ.

ಇನ್ನು ಈ ತಾರಾ ಜೋಡಿ ಸಿನಿಮಾರಂಗದಲ್ಲಿ ಫುಲ್ ಬ್ಯುಝಿ ಆಗಿದ್ದಾರೆ. ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ನಟಿಸಿರುವ ಲವ್ ಸ್ಟೋರಿ ಸಿನಿಮಾ ಬಿಡುಗಡೆಯಾಗುತ್ತಿದೆ. ಸಮಂತಾ ಅವರು ಕೆಲವೊಂದು ವೆಬ್ ಸಿರೀಸ್ ಹಾಗೂ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next