Advertisement

ನನ್ನನ್ನು ಎನ್‌ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು : ಅಜಂ ಖಾನ್

01:32 PM May 23, 2022 | Team Udayavani |

ಲಕ್ನೋ : ಉತ್ತರ ಪ್ರದೇಶದ 18ನೇ ವಿಧಾನಸಭೆಯ ಮೊದಲ ಅಧಿವೇಶನ ಇಂದು ಆರಂಭವಾಗಿದ್ದು, ಜೈಲಿನಿಂದ ಬಿಡುಗಡೆಯಾಗಿ ಬಂದ ಎಸ್‌ಪಿ ನಾಯಕ ಅಜಂ ಖಾನ್ ಮತ್ತು ಪುತ್ರ ಅಬ್ದುಲ್ಲಾ ಅಜಂ ಖಾನ್ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

Advertisement

ನನಗೆ ಬೆದರಿಕೆ ಹಾಕಲಾಗಿತ್ತು

ಜೈಲಿನಲ್ಲಿ ಇನ್ಸ್‌ಪೆಕ್ಟರ್‌ಯೊಬ್ಬರು ‘ಭೂಗತನಾಗಿ ಹೋಗಿ, ನಿಮ್ಮ ವಿರುದ್ಧ ಹಲವಾರು ಪ್ರಕರಣಗಳಿವೆ, ನಿಮ್ಮನ್ನು ಎನ್‌ಕೌಂಟರ್ ಮಾಡಬಹುದು’ ಎಂದು ಬೆದರಿಕೆ ಹಾಕಿದ್ದರು, ಅಂತಹ ಅಪಾಯಗಳ ನಡುವೆ ನನ್ನ ಪ್ರಯಾಣ ಏನೆಂದು ಹೇಳುವುದು ಕಷ್ಟ, ”ಎಂದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಭಾನುವಾರ ತಡರಾತ್ರಿ ರಾಂಪುರದ ನಿವಾಸದ ಬಳಿ ಹೇಳಿಕೆ ನೀಡಿದ್ದಾರೆ.

ವಂಚನೆ ಪ್ರಕರಣದಲ್ಲಿ 2 ವರ್ಷಗಳ ಕಾಲ ಜೈಲಿನಲ್ಲಿದ್ದ ಅಜಂ ಖಾನ್ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ ಬಳಿಕ ಮೇ 20 ರಂದು ಸೀತಾಪುರ್ ಜಿಲ್ಲೆಯ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದರು.

Advertisement

ಸಮಾಜವಾದಿ ಪಕ್ಷದ ಶಾಸಕರು ವಿವಿಧ ವಿಷಯಗಳ ಕುರಿತು ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ವಿಧಾನಸಭೆಯೊಳಗೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಜಲಾಶಯದ ಗೋಡೆ ಹತ್ತಲು ಹೋಗಿ ಜಾರಿ ಬಿದ್ದ ಯುವಕ; ವಿಡಿಯೋ ವೈರಲ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next