Advertisement

ಸಮಾಜವಾದಿ ಪಕ್ಷ ಈಗ ಡ್ರಾಮಾ ಕಂಪೆನಿ: ಬಿಎಸ್‌ಪಿ ಲೇವಡಿ

11:51 AM Jan 14, 2017 | udayavani editorial |

ಲಕ್ನೋ : ಉತ್ತರ ಪ್ರದೇಶದ ಆಳುವ ಸಮಾಜವಾದಿ ಪಕ್ಷ ಈಗ  ಡ್ರಾಮಾ ಕಂಪೆನಿಯಾಗಿ ಪರಿವರ್ತಿತವಾಗಿದೆ; ಜನರನ್ನು ಮೂರ್ಖರನ್ನಾಗಿಸಲೆಂದೇ ಅದು ಅಧಿಕಾರದಲ್ಲಿ ಉಳಿದುಕೊಂಡಿದೆ ಎಂದು ಬಹುಜನ ಸಮಾಜ ಪಕ್ಷ ಕಟಕಿಯಾಡಿದೆ.

Advertisement

ಉತ್ತರ ಪ್ರದೇಶದ ಆಳುವ ಸಮಾಜವಾದಿ ಪಕ್ಷ ಆಂತರಿಕ ಹಾಗೂ ಕೌಟುಂಬಿಕ ಕಲಹಗಳಲ್ಲಿ ಮುಳುಗಿ ಹೋಗಿದೆ. ಅದಕ್ಕೆ ಉತ್ತಮ ಆಡಳಿತ, ಅಭಿವೃದ್ಧಿ ಯಾವುದೂ ಬೇಕಾಗಿಲ್ಲ; ಜನರನ್ನು ಮೂರ್ಖರನ್ನಾಗಿ ಮಾಡುವುದೇ ಅದರ ಗುರಿಯಾಗಿದೆ ಎಂದು ಬಿಎಸ್‌ಪಿ ನಾಯಕ ಸುಧೀಂದ್ರ ಭಡೋರಿಯಾ ಹೇಳಿದರು. 

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿರುವ ಅವರ ಪುತ್ರ ಅಖೀಲೇಶ್‌ ಯಾದವ್‌ ಅವರಿಗೆ ಸ್ವಹಿತಾಸಕ್ತಿ ಬಿಟ್ಟರೆ ಬೇರೆ ಯಾವುದರಲ್ಲೂ ಆಸಕ್ತಿ ಇಲ್ಲ; ಅವರಿಗೆ ಅಧಿಕಾರ ಮತ್ತು ಅದರ ಲಾಭಗಳು ಮಾತ್ರವೇ ಮುಖ್ಯವಾಗಿವೆ’ ಎಂದು ಭಡೋರಿಯಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next