Advertisement
ಓಟಿನ ಗೌಪ್ಯತೆ, ಘನತೆ ಮತ್ತು ಅದರ ಮೌಲ್ಯ ಕಾಪಾಡಬೇಕು ಎಂಬುದು ಚುನಾವಣಾ ಆಯೋಗದ ಸದಾಶಯ. ಇದಕ್ಕೆ ಪ್ರತಿಯೊಬ್ಬ ಜಾಗೃತ ನಾಗರಿಕ ಬೆಂಬಲವಾಗಿ ನಿಲ್ಲಬೇಕು ಎನ್ನುವುದು ಆಯೋಗದ ಸದಿಚ್ಛೆ. ಈ ಹಿನ್ನೆಲೆಯಲ್ಲಿ ಆಯೋಗ “ಸಮಾಧಾನ್’ ಎಂಬ ಹೆಸರಿನ ಅಪ್ಲಿಕೇಷನ್ ಸಿದಟಛಿಪಡಿಸಿದೆ. ಇದನ್ನು ಬಳಸಿಕೊಂಡು ಚುನಾವಣಾ ಅಕ್ರಮಗಳು, ಮತದಾರರಿಗೆ ಆಮಿಷವೊಡ್ಡುವ ಸಂದರ್ಭಗಳು, ಹಣ,ಹೆಂಡ ಹಂಚಿಕೆ ಪ್ರಕರಣಗಳು, ನೀತಿ ಸಂಹಿತೆ ಉಲ್ಲಂಘನೆ, ಅಧಿಕಾರಿಗಳ ಪಕ್ಷಪಾತ ಮುಂತಾದ ಸಂಗತಿಗಳ ಬಗ್ಗೆ ವೆಬ್‌ಸೈಟ್, ಈ-ಮೇಲ್,ಇ-ಲೆಟರ್, ಫ್ಯಾಕ್ಸ್, ಎಸ್‌ಎಂಎಸ್, 1950 ಕಾಲ್ ಸೆಂಟರ್ ಮೂಲಕ ದೂರು ಸಲ್ಲಿಸಬಹುದು. ಸಲಹೆ ಕೊಡಲೂ ಅವಕಾಶವಿರುತ್ತದೆ. ಇಲ್ಲಿ ನೀಡುವ ದೂರುಗಳಿಗೆ 48 ಗಂಟೆಗಳಲ್ಲಿ ಪರಿಹಾರ ಸಿಗುತ್ತದೆ. ಮಾ.27ರಿಂದ ಇಲ್ಲಿವರೆಗೆ 1,209 ದೂರುಗಳು ಸಲ್ಲಿಕೆಯಾಗಿದ್ದು, 1,164 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. Advertisement
ಅಕ್ರಮಗಳ ಕಡಿವಾಣಕ್ಕೆ ಸಮಾಧಾನ್ ಅಪ್ಲಿಕೇಷನ್
07:00 AM May 06, 2018 | |
Advertisement
Udayavani is now on Telegram. Click here to join our channel and stay updated with the latest news.