Advertisement

ಧರ್ಮದಿಂದಲೇ ಸಕಲರಿಗೂ ಮೋಕ್ಷ

12:04 PM Jul 13, 2019 | Vishnu Das |

ಪ್ರತಿ ವ್ಯಕ್ತಿಯೂ ತಮಗಿಷ್ಟಬಂದಂತೆ ಧರ್ಮವನ್ನು  ಬೋಧಿ ಸಲು ತೊಡಗಿದರೆ ಅದು ನಾಶಕ್ಕೆ ದಾರಿ ಮಾಡುತ್ತದೆ.”ದೊಡ್ಡ ಧರ್ಮ ಯಾವುದು?’ ಎಂದು ಯುದಿಷ್ಠಿರ, ಭೀಷ್ಮನನ್ನು ಕೇಳಿದಾಗ ಅವರು, “ಶ್ರದ್ಧಾ ಭಕ್ತಿಗ ಳಿಂದ ಪರಮಾತ್ಮನನ್ನು ನಿರಂತರ ಧ್ಯಾನಿಸುವುದೇ ಶ್ರೇಷ್ಠ ಧರ್ಮ’ ಎಂದು ಹೇಳಿದರು. ಈ ಜಗತ್ತಿನ ಕ್ಷೇಮಕ್ಕೆ ಮೂಲ ಆಧಾರವೇ ಧರ್ಮ. ಆದ್ದರಿಂದ, ಕೇವಲ ಧರ್ಮಸಮ್ಮತವಾದ ಕೆಲಸಗಳನ್ನು ಮಾಡಿದರಷ್ಟೇ, ನಾವು ಒಳ್ಳೆಯ ಮನುಷ್ಯರಾಗುತ್ತೇವೆ. ನಮ್ಮ ಜೀವನ ಸಾರ್ಥಕವಾಗುತ್ತದೆ. ಧರ್ಮವನ್ನು ಬಿಟ್ಟು ತಪ್ಪು ದಾರಿ  ಹಿಡಿದರೆ, ನಾವು ಈ ಮಾನವ ಜನ್ಮವನ್ನು ವ್ಯರ್ಥಮಾಡಿಕೊಂಡವರಾಗುತ್ತೇವೆ. ಕೊನೆಗೆ, ನಾಶ ಹೊಂದುತ್ತೇವೆ. ನಾವು ಧರ್ಮವನ್ನು ಗೌರವಿಸಿ, ಆಚರಿಸಿದರೆ, ಅದು ನಮಗೆ ಶ್ರೇಯಸ್ಸನ್ನು ಉಂಟು ಮಾಡುತ್ತವೆ. ಧರ್ಮ ತನ್ನನ್ನು ರಕ್ಷಿಸುವವರನ್ನು ರಕ್ಷಿಸುತ್ತದೆ.

Advertisement

ಈ ದಿನ ನಾವು ಅನುಭಸುತ್ತಿರುವ ಸುಖ, ಪೂರ್ವ ಜನ್ಮದಲ್ಲಿ ನಾವು ಮಾಡಿದ ಧರ್ಮದ ಫ‌ಲ. ಅಧರ್ಮದಿಂದ ಕೇವಲ ಶೋಕ- ದುಃಖಗಳು ಉಂಟಾಗುತ್ತವೆ. ಇದು ನಿತ್ಯ ಸತ್ಯವಾದ ನಿಯಮ. ಈ ವಿಷಯದಲ್ಲಿ ಎಂಥ ಸಂದೇಹವು ಇರಲೂ ಅವಕಾಶವಿರುವುದಿಲ್ಲ. ಆದ್ದರಿಂದ, ಧರ್ಮವನ್ನು ಆಚರಿಸುವುದು, ಅಧರ್ಮವನ್ನು ಬಿಡುವುದು ಎನ್ನುವುದು ಸಾರ್ಥಕ ಜೀವನದ ಲಕ್ಷಣ. ಈ ನಿಯಮವನ್ನು ಜಾಗರೂಕತೆಯಿಂದ ಅನುಸರಿಸಿದರೆ, ಅದರಿಂದ ಕೀರ್ತಿ, ಶಾಂತಿ, ಸುಖಗಳು ಲಭಿಸುತ್ತವೆ. ಎಂಥ ಪರಿಸ್ಥಿತಿಯಲ್ಲೂ ಧರ್ಮವನ್ನು ನಿರ್ಲಕ್ಷ್ಯ ಮಾಡಬಾರದು. ಧರ್ಮವನ್ನು ಆಚರಿಸಿದರೆ, ನಮಗೆ ಒಳ್ಳೆಯದಾಗುತ್ತದೆ. ಮೋಕ್ಷ ದೊರೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next