Advertisement

Burj Khalifa; ಬುರ್ಜ್‌ ಖಲೀಫಾದಲ್ಲಿ ತ್ರಿವರ್ಣ ಧ್ವಜಕ್ಕೆ ಮಣೆ; ಪಾಕ್‌ಗಿಲ್ಲ ಮನ್ನಣೆ

12:41 AM Aug 16, 2023 | Team Udayavani |

ದುಬಾೖ: ಭಾರತದ 77ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಮಂಗಳವಾರ ದುಬಾೖಯ ಅತೀ ಎತ್ತರದ ಕಟ್ಟಡ ಬುರ್ಜ್‌ ಖಲೀಫಾದಲ್ಲಿ ಭಾರತದ ತ್ರಿವರ್ಣ ಧ್ವಜದ ದೀಪಾಲಂಕಾರ ಮಾಡಲಾಗಿತ್ತು. ಇದರ ಹಿನ್ನೆಲೆ ಯಲ್ಲಿ ದೇಶದ ರಾಷ್ಟ್ರಗೀತೆ “ಜನ ಗಣ ಮನ’ವೂ ಅನುರಣಿಸುತ್ತಿತ್ತು. ಈ ವೀಡಿಯೋವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ. ವೀಡಿಯೋವನ್ನು ಮುಫ‌ದ್ದಲ್‌ ವೋಹ್ರಾ ಎಂಬವರು ಎಕ್ಸ್‌ (ಟ್ವಿಟರ್‌)ನಲ್ಲಿ ಅಪ್‌ಲೋಡ್‌ ಮಾಡಿದ್ದರು.

Advertisement

ವಿಶೇಷವೆಂದರೆ, ಸೋಮವಾರವಷ್ಟೇ ಪಾಕಿಸ್ಥಾನವು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸಿದೆ. ಬುರ್ಜ್‌ ಖಲೀಫಾದಲ್ಲಿ ಪಾಕ್‌ ಧ್ವಜದ ದೀಪಾಲಂಕಾರ ಇರಲಿದೆ ಎಂದು ಭಾವಿಸಿದ್ದ ಸಾವಿರಾರು ಪಾಕಿಸ್ಥಾನೀಯರು ದುಬಾೖಯ ಈ ಕಟ್ಟಡದ ಮುಂದೆ ಜಮಾಯಿಸಿದ್ದರು. ಆದರೆ ಎಷ್ಟು ಹೊತ್ತು ಕಾದರೂ ಬುರ್ಜ್‌ ಖಲೀ ಫಾದಲ್ಲಿ ಪಾಕ್‌ ಧ್ವಜ ಕಾಣಿಸಲೇ ಇಲ್ಲ. ಇದರಿಂದ ನಿರಾಶರಾದ ಪಾಕ್‌ ನಾಗರಿಕರು ದಾಂಧಲೆ ಎಬ್ಬಿಸಿದ್ದರು. ಆದರೆ ಇದರ ಬೆನ್ನಲ್ಲೇ ಭಾರತದ ರಾಷ್ಟ್ರಧ್ವಜವನ್ನು ಕಟ್ಟಡದಲ್ಲಿ ಪ್ರದರ್ಶಿಸಿರುವುದು ಪಾಕಿಸ್ಥಾನೀಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next