Advertisement

ನಾಳೆಯಿಂದ ಸಲೂನ್‌ ಬಂದ್‌

03:18 PM Jul 10, 2020 | Suhan S |

ಕೆರೂರ: ಹೋಬಳಿ ಸುತ್ತಮುತ್ತಲಿನ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ನಾಗರಿಕರ ಹಿತದೃಷ್ಟಿಯಿಂದ ಜು.11ರಿಂದ ಸ್ವಯಂಪ್ರೇರಿತ ಲಾಕ್‌ ಡೌನ್‌ ಮೂಲಕ ವೃತ್ತಿ ಬಂದ್‌ ಮಾಡಲು ನಿರ್ಣಯಿಸಲಾಗಿದೆ ಎಂದು ಕ್ಷೌರಿಕ ಸಮಾಜದ ಅಧ್ಯಕ್ಷ ಮಲ್ಲು ಬೇಲೇರಿ (ಹಡಪದ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಈ ಕುರಿತು ಗುರುವಾರ ಶಿವಶರಣ ಹಡಪದ ಅಪ್ಪಣ್ಣ ಸಮಾಜದ ಪ್ರಮುಖರು ಹಾಗೂ ಕ್ಷೌರಿಕ ವೃತ್ತಿ ನಿರತರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು ಯಾವುದೇ ಮದುವೆ ಮನೆಯವರಿಗೆ ಸೇವೆ ಮತ್ತು ಇತರೆ ಕಾರ್ಯಗಳಿದ್ದರೂ ಕ್ಷೌರಿಕ ವೃತ್ತಿ ಕಡ್ಡಾಯ ನಿರ್ಬಂಧಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸುವ ಜೊತೆಗೆ ಪ್ರತಿಜ್ಞೆ ಮಾಡುವ ಮೂಲಕ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವೃತ್ತಿ ಸ್ವಯಂ ನಿರ್ಬಂಧ ಜು.19ರವರೆಗೆ ಎಂದು ನಿರ್ಣಯಿಸಲಾಗಿದ್ದು ಸಲೂನ್‌ ಮಾಲೀಕರು ಯಾವುದೇ ಆಮಿಷಕ್ಕೆ ಒಳಗಾಗದೇ ಸಂಘದ ನಿರ್ಣಯ ಕಡ್ಡಾಯವಾಗಿ ಪಾಲಿಸಬೇಕು. ಮುಂಬರುವ ಬೆಳವಣಿಗೆ ಗಮನಿಸಿ ನಿರ್ಬಂಧ ತೆರವು ನಿರ್ಧರಿಸಲಾಗುವುದು. ಅಲ್ಲಿಯವರೆಗೆ ಗ್ರಾಹಕರು ಸಹಕರಿಸುವಂತೆ ಉಪಾಧ್ಯಕ್ಷ ಮಳಿಯಪ್ಪ ಕೇಸನೂರ ವಿನಂತಿಸಿದ್ದಾರೆ.

ಸಭೆಯಲ್ಲಿ ಉಪಾಧ್ಯಕ್ಷ ಮಳಿಯಪ್ಪ ಕೇಸನೂರ, ಎಸ್‌.ಬಿ. ಹಡಪದ, ಎಸ್‌.ಬಿ. ಕೇಸನೂರ, ಎಸ್‌.ಆರ್‌. ಕೇಸನೂರ, ಹನಮಂತ ಹಡಪದ, ಚೇತನಕುಮಾರ ಹಡಪದ, ಜಿ.ಎಂ. ಕೇಸನೂರ, ಮುದ್ದೇಶ ಹಡಪದ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next