Advertisement

ಫಾರ್ಮ್ ಹೌಸ್ ನಲ್ಲಿ ಸಲ್ಮಾನ್ ಹೊಸ ಹಾಡು: ಜಾಕ್ವೆಲಿನ್ ಜೊತೆಗೆ “ತೆರೆ ಬಿನಾ”ಹಾಡಿದ ಸಲ್ಲು

03:19 PM May 09, 2020 | keerthan |

ಬಾಲಿವುಡ್ ಬ್ಯಾಡ್ ಬಾಯ್, ಸುಲ್ತಾನ್ ಸಲ್ಮಾನ್ ಖಾನ್ ತನ್ನ ಲಾಕ್ ಡೌನ್ ಸಮಯವನ್ನು ತನ್ನ ಫಾರ್ಮ್ ಹೌಸ್ ನಲ್ಲಿ ಕಳೆಯುತ್ತಿದ್ದಾರೆ. ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ಸಲ್ಲು ಜೊತೆಗಿದ್ದು, ಫಾರ್ಮ್ ಹೌಸ್ ನಲ್ಲಿ ರಜಾ ದಿನ ಕಳೆಯುತ್ತಿದ್ದಾರೆ. ಸಿನಿಮಾ ಶೂಟಿಂಗ್ ನಿಂದ ದೂರವಿರುವ ಸಲ್ಮಾನ್ ಖಾನ್ ಸದ್ಯ ಫಾರ್ಮ್ ಹೌಸ್ ನಲ್ಲಿ ಒಂದು ಹಾಡು ರೆಡಿ ಮಾಡಿದ್ದಾರೆ.

Advertisement

ಈ ಹಿಂದೆ ಪ್ಯಾರ್ ಕರೋನಾ ಹಾಡು ಮಾಡಿದ್ದ ಸಲ್ಲು ಈಗ ತೆರೆ ಬಿನಾ ಎನ್ನುತ್ತಿದ್ದಾರೆ. ಪನ್ವೇಲ್ ನ ತನ್ನ ಫಾರ್ಮ್ ಹೌಸ್ ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಜೊತೆಗೆ ಈ ಹಾಡಿಗೆ ನಟಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಲ್ಮಾನ್ ಖಾನ್, ಈ ಹಾಡು ನನ್ನ ತಲೆಯಲ್ಲಿತ್ತು. ಯಾವುದೇ ಸಿನಿಮಾಗೆ ಇದನ್ನು ಅಳವಡಿಸುವುದು ಕಷ್ಟ. ನನ್ನದೇ ಸ್ವಂತ ನಿರ್ಮಾಣ ಸಂಸ್ಥೆ ಇರುವ ಕಾರಣ ಪ್ರತ್ಯೇಕವಾಗಿ ಮಾಡಲು ನಿರ್ಧರಿಸಿದೆ ಎಂದಿದ್ದಾರೆ.

ಇದು ಕಡಿಮೆ ಖರ್ಚಿನ ಹಾಡು ಎಂದಿರುವ ಸಲ್ಮಾನ್ ಮಾತಿಗೆ ಜಾಕ್ವೆಲಿನ್ ದನಿಗೂಡಿಸಿದ್ದು, ಈ ಹಿಂದೆ ದೊಡ್ಡ ದೊಡ್ಡ ಸೆಟ್ ಗಳಲ್ಲಿ ಶೂಟಿಂಗ್ ಮಾಡುತ್ತಿದ್ದೆವು. ಆದರೆ ಇಲ್ಲಿ ಕೇವಲ ಮೂರು ಇದ್ದೆವು. ಮೊದಲ ಬಾರಿಗೆ ಲೈಟ್ ಸರಿಪಡಿಸುವ ಕೆಲಸವನ್ನು ಮಾಡಿದ್ದೇನೆ ಎಂದು ಜಾಕ್ವೆಲಿನ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next