ಮುಂಬಯಿ: ಸಲ್ಮಾನ್ ಖಾನ್ – ಕತ್ರಿನಾ ಕೈಫ್ ಹಾಗೂ ಇಮ್ರಾನ್ ಹಶ್ಮಿ ಅಭಿನಯದ ʼಟೈಗರ್-3ʼ ಸಿನಿಮಾಕ್ಕೆ ಎಲ್ಲೆಡೆ ಪಾಸಿಟಿವ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಸ್ಪೈ ಥ್ರಿಲ್ಲರ್ ಸಿನಿಮಾವನ್ನು ಬಿಗ್ ಸ್ಕ್ರೀನ್ ನಲ್ಲಿ ನೋಡಿ ಬಿಟೌನ್ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಬಹು ನಿರೀಕ್ಷೆ ಹುಟ್ಟಿಸಿದ ʼಟೈಗರ್-3ʼ ವರ್ಲ್ಡ್ ಬಾಕ್ಸ್ ಆಫೀಸ್ ನಲ್ಲಿ ಈಗಾಗಲೇ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇತ್ತ ಭಾರತದಲ್ಲಿ 200 ಕೋಟಿ ಕಮಾಯಿ ಮಾಡಿದೆ. ವೀಕೆಂಡ್ ನಲ್ಲಿ ಮತ್ತಷ್ಟು ಹೆಚ್ಚಿನ ಗಳಿಕೆ ಕಾಣುವ ನಿರೀಕ್ಷೆಯಿದೆ.
ಸಿನಿಮಾಕ್ಕೆ ಜನರಿಂದ ಉತ್ತಮ ಅಭಿಪ್ರಾಯ ಕೇಳಿ ಬರುತ್ತಿದೆ. ಈ ನಡುವೆ ಚಿತ್ರತಂಡ ಸಕ್ಸಸ್ ಮೀಟ್ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದರಲ್ಲಿ ಸಲ್ಮಾನ್, ಕತ್ರಿನಾ ಹಾಗೂ ಇಮ್ರಾನ್ ಹಶ್ಮಿ ಭಾಗವಹಿಸಿ ಪ್ರೇಕ್ಷಕರಿಗೆ ಧನ್ಯವಾದ ಹೇಳಿದ್ದಾರೆ.
ಸಲ್ಮಾನ್ ಖಾನ್ ಸಿನಿಮಾದ ಬಗ್ಗೆ ಮಾತನಾಡುತ್ತಾ, ಈ ಸಿನಿಮಾದಲ್ಲಿ ಕತ್ರಿನಾ ಇದ್ದಾರೆ, ಹಾಗಾಗಿ ಸ್ವಲ್ಪವಾದರೂ ರೊಮ್ಯಾನ್ಸ್ ಇರಲೇಬೇಕಲ್ವಾ ಎಂದು ಹೇಳುತ್ತಾ ಇಮ್ರಾನ್ ಹಶ್ಮಿಯತ್ತ ನೋಡಿದ್ದಾರೆ. ಒಂದು ವೇಳೆ ಇಮ್ರಾನ್ ಅವರ ಪಾತ್ರ ಆತಿಶ್( ಪಾತ್ರದ ಹೆಸರು) ಆಗಿರದಿದ್ರೆ, ಈ ರೀತಿ ಆಗುತ್ತಿತ್ತು ಎಂದೇಳಿ, ಇಮ್ರಾನ್ ಅವರ ಗಲ್ಲಕ್ಕೆ ಮುತ್ತಿಟ್ಟಿದ್ದಾರೆ.
ಈ ಸನ್ನಿವೇಶವನ್ನು ನೋಡಿದ ಪ್ರೇಕ್ಷಕರು ನಕ್ಕಿದ್ದಾರೆ. ಸಲ್ಮಾನ್ ಅವರ ಈ ತಮಾಷೆಯ ವರ್ತನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಲ್ಲದೆ ಸಲ್ಮಾನ್ ಕತ್ರಿನಾ ಅವರೊಂದಿಗೆ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.
ನಾನು ಪರದೆಯ ಮೇಲೆ ಎಂದಿಗೂ ಕಿಸ್ ಮಾಡುವುದಿಲ್ಲ ಆದರೆ ಅವನು ತೆರೆಯ ಮೇಲೆ ಚುಂಬಿಸುವ ಅಭ್ಯಾಸವನ್ನು ಕಳೆದುಕೊಳ್ಳುತ್ತಿರುವಂತೆ ತೋರುತ್ತದೆ ಎಂದು ಸಲ್ಮಾನ್ ಹೇಳಿದ್ದಾರೆ.
ಮನೀಶ್ ಶರ್ಮಾ ನಿರ್ದೇಶನದ ‘ಟೈಗರ್ 3’ ನ್ನು ಆದಿತ್ಯ ಚೋಪ್ರಾ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಹೃತಿಕ್ ರೋಷನ್ ಅವರು ಅತಿಥಿ ಪಾತ್ರದಲ್ಲಿದ್ದಾರೆ.