ಮುಂಬೈ: ನಟ ಸಲ್ಮಾನ್ ಖಾನ್ ಇತ್ತೀಚೆಗೆ ನಟಿ ಪೂಜಾ ಹೆಗ್ಡೆ ಅವರ ಸಹೋದರ ರಿಷಬ್ ಹೆಗ್ಡೆ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಹಲವಾರು ಸಾಮಾಜಿಕ ಮಾಧ್ಯಮ ಫ್ಯಾನ್ ಕ್ಲಬ್ ಗಳು ಸಲ್ಮಾನ್ ವಧು ಮತ್ತು ವರನೊಂದಿಗೆ ಪೋಸ್ ನೀಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿವೆ.
ಕೆಲ ದಿನಗಳ ಹಿಂದೆ ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿಗಳು ಹರಿದಾಡಿದ್ದವು. ಸಲ್ಮಾನ್ ಪೂಜಾ ಜೊತೆ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ. ಇವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಹೀಗಾಗಿ ಸಲ್ಮಾನ್ ತನ್ನ ಮುಂಬರುವ ಎರಡು ಚಿತ್ರಗಳಲ್ಲಿ ಪೂಜಾ ಹೆಗ್ಡೆ ಅವರಿಗೆ ಅವಕಾಶ ನೀಡಿದ್ದಾರೆ ಎಂಬೆಲ್ಲಾ ಸುದ್ದಿಗಳು ಹರಿದಾಡಿದ್ದವು. ಬಳಿಕ ಈ ಸುದ್ದಿಗಳು ಸುಳ್ಳು ಎಂದು ಸಲ್ಮಾನ್ ಆಪ್ತ ವಲಯ ಸ್ಪಷ್ಟಪಡಿಸಿತ್ತು.
ಇದನ್ನೂ ಓದಿ:ವಿದಾಯದ ಸೂಚನೆ ನೀಡಿದ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ
ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರ ‘ಕಿಸಿ ಕಾ ಭಾಯ್ ಕಿಸಿ ಕಾ ಜಾನ’ ಚಿತ್ರದಲ್ಲಿ ಪೂಜಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
Related Articles
ಮದುವೆ ಸಮಾರಂಭದಲ್ಲಿ ಸಲ್ಮಾನ್ ಖಾನ್ ಅವರು ಪೂಜಾ ಕುಟುಂಬದ ಜೊತೆ ಫೋಟೊಗಳಿಗೆ ಪೋಸ್ ಕೊಟ್ಟಿದ್ದಾರೆ. ಪೂಜಾ ಹೆಗ್ಡೆ ಅವರು ಸಮಾರಂಭದಲ್ಲಿ ಸಲ್ಮಾನ್ ಅವರ ‘ಚೋಟೆ ಚೋಟೆ ಭೈಯೋಂ ಕೆ ಬಡೇ ಭಯ್ಯಾ’ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.