Advertisement

ಜೂನಿಯರ್‌ ವಿಶ್ವಕಪ್‌ ಹಾಕಿ: ವನಿತಾ ತಂಡಕ್ಕೆ ಸಲೀಮಾ ಸಾರಥ್ಯ 

10:47 PM Mar 17, 2022 | Team Udayavani |

ಹೊಸದಿಲ್ಲಿ: ಎಫ್ಐಎಚ್‌ ವನಿತಾ ಜೂನಿಯರ್‌ ವಿಶ್ವಕಪ್‌ ಹಾಕಿ ಪಂದ್ಯಾವಳಿಯಲ್ಲಿ ಮಿಡ್‌ ಫೀಲ್ಡರ್‌ ಸಲೀಮಾ ಟೇಟೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

ಕಳೆದ ವರ್ಷಾಂತ್ಯ ದಕ್ಷಿಣ ಆಫ್ರಿಕಾದಲ್ಲಿ ನಡೆಯ ಬೇಕಿದ್ದ ಈ ಪಂದ್ಯಾವಳಿಯನ್ನು ಒಮಿಕ್ರಾನ್‌ ಭೀತಿ ಯಿಂದ ಮುಂದೂಡಲಾಗಿತ್ತು. ಇದೀಗ ಎಪ್ರಿಲ್‌ ಒಂದರಿಂದ ಆರಂಭವಾಗಲಿದೆ.

ಭಾರತ “ಡಿ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಇಲ್ಲಿನ ಇತರ ತಂಡಗಳೆಂದರೆ ಜರ್ಮನಿ, ಮಲೇಶ್ಯ ಮತ್ತು ವೇಲ್ಸ್‌. ಭಾರತ ಮೊದಲ ಪಂದ್ಯವನ್ನು ಎ. 2ರಂದು ವೇಲ್ಸ್‌ ವಿರುದ್ಧ ಆಡಲಿದೆ. ಎ. 3ರಂದು ಜರ್ಮನಿ ಯನ್ನು ಹಾಗೂ ಎ. 5ರಂದು ಮಲೇಶ್ಯಾವನ್ನು ಎದುರಿಸಲಿದೆ. ಎ. 8ರಂದು ಕ್ವಾರ್ಟರ್‌ ಫೈನಲ್ಸ್‌, ಎ. 10ರಂದು ಸೆಮಿಫೈನಲ್ಸ್‌ ಹಾಗೂ ಎ. 12ರಂದು ಫೈನಲ್‌ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next